ಕಲಬುರಗಿ: ತೀವ್ರ ಕೂತುಹಲ ಕೆರಳಿಸಿರುವ ಕಲಬುರಗಿ ಮಹಾನಗರ ಪಾಲಿಕೆ ಪಟ್ಟಕ್ಕೆ ಇದೀಗ ಕೈ-ಬಿಜೆಪಿ ನಾಯಕರು ಕಣ್ಣಿಟ್ಟಿದ್ದು, ಕಿಂಗ್ ಮೇಕರ್ ಜೆಡಿಎಸ್ ಇಂದು ಮೈತ್ರಿ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಹೀಗಾಗಿ ಎರಡು ರಾಷ್ಟ್ರೀಯ ಪಕ್ಷಗಳ ಚಿತ್ತ ಇದೀಗ ಜೆಡಿಎಸ್ ನತ್ತ ಮುಖ ಮಾಡಿವೆ.
Advertisement
ಕಾಂಗ್ರೆಸ್ ಭದ್ರಕೋಟೆ ಕಲಬುರಗಿಯ ಮಹಾನಗರ ಪಾಲಿಕೆ ಚುಜಾವಣೆ ಫಲಿತಾಂಶ ಅತಂತ್ರ ಆಗುತ್ತಿದ್ದಂತೆ, ಮೇಯರ್ ಪಟ್ಟ ಪಡೆಯಲು ಕೇಸರಿ ಹಾಗೂ ಕೈ ನಾಯಕರಿಬ್ಬರೂ ಜೆಡಿಎಸ್ ಬೆಂಬಲ ಪಡೆಯುವುದು ಅನಿವಾರ್ಯವಾಗಿದೆ. ಹೀಗಾಗಿ ಕಳೆದ ಒಂದು ವಾರದಿಂದ ಮಾಜಿ ಸಿಎಂ ಕುಮಾರಸ್ವಾಮಿ ಮನವೊಲಿಸಲು ಇನ್ನಿಲ್ಲದ ಸರ್ಕಸ್ ಮಾಡುತ್ತಿವೆ. ಆದರೆ ಎರಡು ಪಕ್ಷಗಳ ಜೊತೆ ಎರಡು ಸುತ್ತಿನ ಮಾತುಕತೆ ನಡೆಸಿರುವ ಜೆಡಿಎಸ್ ಮಾತ್ರ ಇಲ್ಲಿಯವರೆಗೆ ಮೈತ್ರಿ ಬಗ್ಗೆ ಯಾವ ನಿರ್ಧಾರವನ್ನೂ ಕೈಗೊಂಡಿಲ್ಲ. ಎಲ್ಲ ಶಾಸಕರ ಅಭಿಪ್ರಾಯ ಪಡೆದು ಕಲಬುರಗಿಯಲ್ಲಿ ಯಾವ ಪಕ್ಷದ ಜೊತೆ ಮೈತ್ರಿ ಎಂಬುದು ಫೈನಲ್ ಮಾಡುವುದಾಗಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯ ಕಾಂಗ್ರೆಸ್‍ನಲ್ಲಿ ಶುರುವಾಯ್ತಾ ಜಾತಿ ರಾಜಕಾರಣದ ಮತ್ತೊಂದು ಸಮರ..?
Advertisement
Advertisement
ಇತ್ತ ಜೆಡಿಎಸ್ ನಮ್ಮ ಪಕ್ಷಕ್ಕೆ ಬೆಂಬಲ ಕೊಡುತ್ತೆ ಜಾತ್ಯಾತೀತತೆ ಎತ್ತಿ ಹಿಡಿಯುತ್ತೆ ಅಂತಾ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರೆ, ಜೆಡಿಎಸ್ ಕಾಂಗ್ರೆಸ್ ಜೊತೆ ಅಲ್ಲ ನಮ್ಮ ಜೊತೆನೇ ಮೈತ್ರಿ ಫಿಕ್ಸ್ ಎಂದು ಬಿಜೆಪಿ ಕಲಬುರಗಿ ದಕ್ಷಿಣ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.