ಕಲಬುರಗಿ ಪಾಲಿಕೆ ಚುನಾವಣೆ ಜೆಡಿಎಸ್‍ಗೆ ಮೇಯರ್ ಸ್ಥಾನ ಕೊಡುವವರಿಗೆ ನಮ್ಮ ಬೆಂಬಲ: ನಾಸಿರ್ ಹುಸೇನ್

Public TV
1 Min Read
NASIR HUSSIAN

ಕಲಬುರಗಿ: ಅಚ್ಚರಿಯ ಫಲಿತಾಂಶದೊಂದಿಗೆ ಅತಂತ್ರ ಸ್ಥಿತಿಯಲ್ಲಿರುವ ಕಲಬುರಗಿ ಮಹಾನಗರಪಾಲಿಕೆಯ ಮೇಯರ್ ಚುನಾವಣೆ ಕಗ್ಗಂಟು ಹಾಗೇಯೇ ಮುಂದುವರೆದಿದೆ. ತಮ್ಮ ಪಕ್ಷಕ್ಕೆ ಯಾರು ಮೇಯರ್ ಸ್ಥಾನ ಕೊಡುತ್ತಾರೋ ಆ ಪಕ್ಷಕ್ಕೆ ನಮ್ಮ ಬೆಂಬಲ ನೀಡುವುದಾಗಿ ಜನತಾ ದಳದ ಅಲ್ಪಸಂಖ್ಯಾತರ ರಾಜ್ಯ ಉಪಾಧ್ಯಕ್ಷರಾದ ಉಸ್ತಾದ್ ನಾಸೀರ್ ಹುಸೇನ್ ಅವರು ಸ್ಪಷ್ಟಪಡಿಸಿದ್ದಾರೆ.

GLB PALIKE 1

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಬಿಜೆಪಿ ಈ ಯಾವುದೇ ಪಕ್ಷಗಳು ಆಹ್ವಾನಕ್ಕೆ ಬಂದರು ಸ್ವಾಗತ, ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಬಿಟ್ರೆ ಕಾಂಗ್ರೆಸ್‍ನ ಯಾವ ನಾಯಕರು ಜೆಡಿಎಸ್‍ಗೆ ಸಂಪರ್ಕ ಮಾಡಿಲ್ಲ, ಆದರೆ ಬಿಜೆಪಿಯಿಂದ ಸಾಕಷ್ಟು ನಾಯಕರು ನಮ್ಮ ಸಂಪರ್ಕ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿಯವರು ಸಹ ಮೇಯರ್ ಪಟ್ಟ ನಮ್ಮ ಪಕ್ಷಕ್ಕೆ ಯಾವ ಪಕ್ಷ ನೀಡುತ್ತದೆಯೋ ಆ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳೋಣ ಎಂದಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕಲಬುರಗಿ ಮೇಯರ್ ಚುನಾವಣೆ- ಜೆಡಿಎಸ್ ಮುಂದೆ ಮಂಡಿಯೂರಲು ಕಾಂಗ್ರೆಸ್ ಸಜ್ಜಾಗಿದ್ಯಾ?

BASAVARAJ BOMMAI 2

ಚುನಾವಣೆಯ ಫಲಿತಾಂಶದ ಬಳಿಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದ ಜೆಡಿಎಸ್ ಪಕ್ಷದ ನಾಲ್ವರು ಸದಸ್ಯರು ಕಲಬುರಗಿ ನಗರಕ್ಕೆ ಬಂದಿದ್ದಾರೆ. ನಿನ್ನೆ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಸಮಾರಂಭಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ನಮ್ಮ ಪಕ್ಷದ ಅಭ್ಯರ್ಥಿಯೇ ಮೇಯರ್ ಆಗುವುದು ನಿಶ್ಚಿತ ಹಾಗೂ ಜೆಡಿಎಸ್ ಪಕ್ಷ ನಮಗೆ ಬೆಂಬಲಿಸುವ ಆತ್ಮವಿಶ್ವಾಸನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್‍ನ ಡಾ. ಶರಣಪ್ರಕಾಶ್ ಪಾಟೀಲ್ ಅವರು ಕೂಡ ನಮ್ಮ ಪಕ್ಷವೇ ಪಾಲಿಕೆಯಲ್ಲಿ ಅಧಿಕಾರ ನಡೆಸಲಿದೆ ಎಂದು ಹೇಳಿದ್ದು, ಎರಡು ಪಕ್ಷಗಳು ತಮ್ಮ ತಮ್ಮ ಪಕ್ಷದವರೇ ಮೇಯರ್ ಆಗುವುದಾಗಿ ಹೇಳಿಕೆ ನೀಡುತ್ತಿದ್ದಾರೆ.

hd kumaraswamy

ನಾಸೀರ್ ಹುಸೇನ್ ಅವರು ನೀಡಿದ ಹೇಳಿಕೆ ನೋಡಿದರೆ ಪಾಲಿಕೆಯಲ್ಲಿ ಮೂರು ಪಕ್ಷಗಳ ಪೈಕಿ ಯಾರು ಮೇಯರ್ ಆಗುವರು ಎಂಬುದು ಕಲಬುರಗಿ ನಗರದ ಜನತೆಯಲ್ಲಿ ಮೂಡಿದ ಪ್ರಶ್ನೆಯಾಗಿದೆ. ಒಟ್ಟಿನಲ್ಲಿ ಮುಂದಿನ ವಾರವೇ ಮೇಯರ್ ಯಾರು ಎಂಬುದು ಸ್ಪಷ್ಟವಾಗಲಿದೆ. ಇದನ್ನೂ ಓದಿ: ಅತಂತ್ರವಾದರೂ ಬಿಜೆಪಿಗೆ ಅಧಿಕಾರ – ಕಲಬುರಗಿಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಕಾರಣ ಏನು?

Share This Article
Leave a Comment

Leave a Reply

Your email address will not be published. Required fields are marked *