ಕಲಬುರಗಿ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಯ ಕರ್ನಾಟಕ ವಿರೋಧಿ ನೀತಿ ಖಂಡಿಸಿ, ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ವೀರ ಕನ್ನಡಿಗರ ಸೇನೆ ಪ್ರತಿಭಟನೆ ನಡೆಸಿದೆ.
ಈ ವೇಳೆ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿರುವ ಉದ್ಧವ್ ಠಾಕ್ರೆ ಪ್ರತಿಕೃತಿ ದಹನ ಮಾಡಿದ್ದು, ಬೆಳಗಾವಿ ಒಡೆಯಲು ಹೊಂಚು ಹಾಕಿ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿರುವ ಠಾಕ್ರೆ, ತಮ್ಮ ರಾಜಕೀಯಕ್ಕಾಗಿ ಎರಡು ರಾಜ್ಯಗಳ ನಡುವಿನ ಶಾಂತಿಗೆ ಧಕ್ಕೆ ತರುತ್ತಿದ್ದಾರೆ. ಠಾಕ್ರೆ ಕನ್ನಡಿಗರ ತಂಟೆಗೆ ಬರಬಾರದು, ಅದೇ ರೀತಿ ಮಹಾರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರಿಗೆ ಸೂಕ್ತ ರಕ್ಷಣೆ ಕೊಡಬೇಕು ಅಂತ ಆಗ್ರಹಿಸಿದ್ದಾರೆ.
Advertisement
Advertisement
ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರ ಮೇಲೆ ಈಗಾಗಲೇ ಹಲ್ಲೆ ಮಾಡಲಾಗಿದೆ. ಅದಲ್ಲದೇ ನಮ್ಮ ಕನ್ನಡದ ಧ್ವಜವನ್ನು ಸುಟ್ಟು ಶೀವಸೇನೆ ಹಾಗೂ ಎಂಇಎಸ್ ಕನ್ನಡಕ್ಕೆ ಅವಮಾನ ಮಾಡಿದ್ದಾರೆ. ಈ ಹಿಂದೆ ಸಹ ಎಂಇಎಸ್ ಹಲವು ಕನ್ನಡ ವಿರೋಧಿ ನೀತಿ ಅನುಸರಿಸಿದ್ದು, ಬೆಳಗಾವಿ ಮಹಾರಾಷ್ಟ್ರದ ಅವಿಭಾಜ್ಯ ಅಂಗ ಅಂತ ಹೇಳಿ ಇಲ್ಲಿನ ಮರಾಠಿಗನ್ನು ಎತ್ತಿ ಕಟ್ಟುತ್ತಿದೆ. ಇದೆಲ್ಲವನ್ನ ಸಹ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕೂಡಲೇ ಬಿಡಬೇಕು ಅಂತ ವೀರ ಕನ್ನಡಿಗ ಸೇನೆ ಆಗ್ರಹಿಸಿದೆ.