ಕಲಬುರಗಿ: ನಗರದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮಹಿಳೆಯೋರ್ವಳ ಶವ ಪತ್ತೆಯಾಗಿದೆ.
ಕಲಬುರಗಿ ನಗರದ ರಾಜಾಪೂರ ಬಾಡಾವಣೆಯಲ್ಲಿ ರಮಾಬಾಯಿ(23) ಎಂಬ ವಿವಾಹಿತ ಮಹಿಳೆಯ ಶವ ಪತ್ತೆಯಾಗಿದೆ. ಈಕೆ 3 ತಿಂಗಳ ಹಿಂದೆ ರಾಹುಲ್ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ಪ್ರೀತಿಸಿ ಮನೆಯಿಂದ ರಮಾಬಾಯಿಯನ್ನು ಕರೆದೊಯ್ದು ಹೋಗಿ ರಾಹುಲ್ ಮದುವೆಯಾಗಿದ್ದನು.
ಮದುವೆಯ ನಂತರ ಅತ್ತೆ ಮನೆಯವರು ರಮಾಬಾಯಿಗೆ ದಿನನಿತ್ಯ ಕಿರುಕುಳ, ಜಾತಿ ನಿಂದನೆ, ಕಿರುಕುಳ ಕೊಡುತ್ತಿದ್ದರೆಂದು ಆಕೆಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಅಲ್ಲದೆ ನಿನ್ನೆ ಸಂಜೆ ಮನೆಯಲ್ಲಿ ಶವವಾಗಿ ಪತ್ತೆಯಾದ ರಮಾಬಾಯಿಯನ್ನು ಗಂಡನ ಮನೆಯವರೇ ಕೊಲೆ ಮಾಡಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಹಾನಗಲ್‍ನಲ್ಲಿ ಕಾಂಗ್ರೆಸ್ಸಿಗೆ ಗೆಲುವು- ದೇವಿಗೆ 11 ಕಾಯಿ ಒಡೆದು ಹರಕೆ ತೀರಿಸಿದ ಡಿಕೆಶಿ!
ಈ ಸಂಬಂಧ ಮಹಿಳೆಯ ಕುಟುಂಬಸ್ಥರು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.