ಕಲಬುರಗಿ: ಸೂಫಿ ನಾಡು ಕಲಬುರಗಿ ಜಿಲ್ಲೆಯಲ್ಲಿ ಹಾಲಿಗಿಂತ ಆಲ್ಕೋಹಾಲ್ ಮಾರಾಟಕ್ಕೆ ಅಲ್ಲಿನ ಜಿಲ್ಲಾಡಳಿತ ಒತ್ತು ನೀಡಿದೆ. ಯಾಕೆಂದರೆ ಕೆಎಂಎಫ್‍ನ ಒಂದು ಮಳಿಗೆ ನೀಡಿ ಅಂದರೆ 1 ವರ್ಷ ಸತಾಯಿಸಿದ ಅಲ್ಲಿನ ಜಿಲ್ಲಾಡಳಿತ, ಅದೇ ವರ್ಷದಲ್ಲಿ 25 ಕ್ಕೂ ಹೆಚ್ಚು ಮದ್ಯದಂಗಡಿಗಳಿಗೆ ಅನುಮತಿ ನೀಡಿದೆ.
ಕಲಬುರಗಿ ಜಿಲ್ಲೆಯಲ್ಲಿ ಈಗಾಗಲೇ ಹಲವು ಗ್ರಾಮಗಳಲ್ಲಿ ಮದ್ಯಮುಕ್ತ ಗ್ರಾಮ ಮಾಡಬೇಕು ಎಂದು ಹಳ್ಳಿಗಳು ಸಿದ್ಧವಾಗುತ್ತಿವೆ. ಆದರೆ ಲಿಕ್ಕರ್ ಮಾಫಿಯಾಕ್ಕೆ ಒಳಗಾದ ಇಲ್ಲಿನ ಅಬಕಾರಿ ಇಲಾಖೆ ಅಧಿಕಾರಿಗಳು, 2018-19ರಲ್ಲಿಯೇ ಜಿಲ್ಲೆಯಲ್ಲಿ ಒಟ್ಟು 25 ಬಾರ್ ಆ್ಯಂಡ್ ರೆಸ್ಟೋರೆಂಟ್ (ಸಿಎಲ್-7) ಹಾಗೂ ನಾಲ್ಕು ರಿಕ್ರಿಯೇಶನ್ ಕ್ಲಬ್ (ಸಿಎಲ್-4) ಅಂಗಡಿಗಳಿಗೆ ಅನುಮತಿ ನೀಡಿದೆ.
Advertisement
Advertisement
ಹೀಗೆ ಅನುಮತಿ ಪಡೆದ ಬಹುತೇಕ ಮದ್ಯದಂಗಡಿಗಳು ಅಬಕಾರಿ ಇಲಾಖೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿವೆ. ಇದನ್ನು ಪರಿಶೀಲಿಸಬೇಕಾದ ಅಂದಿನ ಜಿಲ್ಲಾಧಿಕಾರಿ ಮತ್ತು ಇಲ್ಲಿನ ಅಬಕಾರಿ ಅಧಿಕಾರಿಗಳು ಹಣದಾಸೆಗೆ ಬೇಕಾಬಿಟ್ಟಿ ಲೈಸೆನ್ಸ್ ನೀಡಿದ್ದಾರೆ. ಈ ಕುರಿತು ನೂತನವಾಗಿ ಆಗಮಿಸಿದ ಜಿಲ್ಲಾಧಿಕಾರಿಯನ್ನು ಕೇಳಿದರೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.
Advertisement
ಒಂದೆಡೆ ಬೇಕಾಬಿಟ್ಟಿಯಾಗಿ ಮದ್ಯದಂಗಡಿಗಳಿಗೆ ಅನುಮತಿ ನೀಡುವ ಕಲಬುರಗಿಯ ಜಿಲ್ಲಾಡಳಿತ, ಅದೇ ಕೆಎಂಎಫ್ ಹಾಲು ಮಾರಾಟ ಮಾಡಲು ಉತ್ಸಾಹ ತೋರಿಸುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆಯಂದರೆ ಚಂದ್ರಕಾಂತ ಎಂಬವರು ಕಳೆದ ಒಂದು ವರ್ಷದಿಂದ ಕಲಬುರಗಿ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಕೆಎಂಎಫ್ ಮಳಿಗೆಗೆ ಅನುಮತಿಗಾಗಿ ಅಲೆದರೂ ಜಿಲ್ಲಾಡಳಿತ ಅನುಮತಿ ನೀಡಿಲ್ಲ.
Advertisement
ವರ್ಷದಲ್ಲಿ 30 ಮದ್ಯಂದಗಡಿಗಳಿಗೆ ಅನುಮತಿ ನೀಡುವ ಇಲ್ಲಿನ ಜಿಲ್ಲಾಡಳಿತ ಒಂದು ಕೆಎಂಎಫ್ ಮಳಿಗೆ ಅನುಮತಿ ನೀಡುತ್ತಿಲ್ಲ. ಈ ಮೂಲಕ ಇಲ್ಲಿನ ಜಿಲ್ಲಾಡಳಿತ ಹಾಲಿಗಿಂತ ಆಲ್ಕೋಹಾಲ್ ಮೇಲೆ ಹೆಚ್ಚು ಪ್ರೀತಿಯನ್ನು ತೋರಿಸುತ್ತಿದೆ ಎಂದು ಜನಸಾಮಾನ್ಯರು ಆಕ್ರೋಶ ಹೊರಹಾಕಿದ್ದಾರೆ.