ಕಲಬುರಗಿ: ಪೋಟ್ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಲಿಂಗಾಯತರ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಮಾಜಿ ಸಚಿವ ಚಿಂಚನಸೂರ್ ಇದೀಗ ಕ್ಷಮೆ ಕೋರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಂಚೋಳಿ ಉಪಚುನಾವಣೆಯಲ್ಲಿ ಅವಿನಾಶ್‍ಗೆ ಕಡಿಮೆ ಮತ ಹಾಗೂ ಬೀದರ್ ಲೋಕಸಭೆ ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾಗೆ ಜಾಸ್ತಿ ಮತ ಬಂದಿದ್ದವು. ಈ ಹಿನ್ನೆಲೆಯಲ್ಲಿ ಲಿಂಗಾಯತ ಯಾರು ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿಲ್ಲ ಎಂದಿದ್ದು, ಈ ಬಗ್ಗೆ ಬೆಂಬಲಿಗರೊಂದಿಗೆ ಚರ್ಚೆ ಮಾಡಿದ್ದೆ ಅಷ್ಟೆ. ಈ ವಿಚಾರದಲ್ಲಿ ಲಿಂಗಾಯತರಿಗೆ ನೋವಾದರೆ ಕ್ಷಮಿಸಿಬಿಡಿ ಎಂದು ಹೇಳಿದ್ದಾರೆ.
Advertisement
Advertisement
ಚಿಂಚನಸೂರ್ ಹೇಳಿದ್ದೇನು?
ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತರು ಉಮೇಶ್ ಜಾಧವ್ ಅವರಿಗೆ 14 ಸಾವಿರ ಲೀಡ್ ಕೊಟ್ಟಿದ್ದರು. ಆದರೆ ಚಿಂಚೋಳಿ ಉಪ ಚುನಾವಣೆಯಲ್ಲಿ ಏಳು ಸಾವಿರ ಮತಗಳ ಲೀಡ್ ಮಾತ್ರ ಅವಿನಾಶ್ ಅವರಿಗೆ ಬಂದಿದೆ. ಕಬ್ಬಲಿಗರು ಮತ್ತು ಬಂಜಾರ ಸಮುದಾಯದ ಮತಗಳಿಂದ ಮಾತ್ರ ಅವಿನಾಶ್ ಗೆದ್ದಿದ್ದಾರೆ. ಲಿಂಗಾಯತರು ಯಾರು ಕೂಡ ಬಿಜೆಪಿಗೆ ಮತ ಹಾಕಿಲ್ಲ ಬೆಂಬಲಿಗರ ಸಭೆಯಲ್ಲಿ ಚಿಂಚನಸೂರ್ ಹೇಳಿದ್ದರು.