ಕೆಇಎ ಪರೀಕ್ಷೆ ಅಕ್ರಮ ಪ್ರಕರಣ – ಕಿಂಗ್‌ಪಿನ್ ಆರ್‌ಡಿ ಪಾಟೀಲ್ ಕಾಂಪೌಂಡ್ ಹಾರಿ ಎಸ್ಕೇಪ್

Public TV
1 Min Read
Kalaburagi RD Patil

ಕಲಬುರಗಿ: ಕೆಇಎ ಪರೀಕ್ಷಾ ಅಕ್ರಮ (KEA Exam Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್‌ಪಿನ್ ಆರ್‌ಡಿ ಪಾಟೀಲ್ (RD Patil) ಹಾಗೂ ಪೊಲೀಸರ ಕಳ್ಳಾಟ ಬಯಲಾಗಿದೆ. ಆರ್‌ಡಿ ಪಾಟೀಲ್‌ನನ್ನು ಬಂಧಿಸಲು ಪೊಲೀಸರು ಹಿಂದೇಟು ಹಾಕಿದ್ದಾರೆ. ಪಾಟೀಲ್ ಕಾಂಪೌಂಡ್ ಹಾರಿ ಎಸ್ಕೇಪ್ ಆಗುವ ದೃಶ್ಯ ಪಬ್ಲಿಕ್ ಟಿವಿಗೆ ಎಕ್ಸ್‌ಕ್ಲೂಸಿವ್ ಆಗಿ ದೊರೆತಿದೆ.

ಸಚಿವ ಪ್ರಿಯಾಂಕ್ ಖರ್ಗೆ ತವರು ಕಲಬುರಗಿಯಲ್ಲೇ (Kalaburagi) ಕಿಂಗ್‌ಪಿನ್ ಆರ್‌ಡಿ ಪಾಟೀಲ್ ರಾಜಾತಿಥ್ಯದ ಜೀವನ ನಡೆಸಿದ್ದಾನೆ. ಕಲಬುರಗಿಯ ಅಪಾರ್ಟ್‌ಮೆಂಟ್‌ನಲ್ಲಿಯೇ ಕಿಂಗ್‌ಪಿನ್ ವಾಸವಿದ್ದರೂ ಪೊಲೀಸರು ಬಂಧಿಸಲು ಹಿಂದೇಟು ಹಾಕಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ.

Kalaburagi RD Patil 1

ಆರ್‌ಡಿ ಪಾಟೀಲ್ ಬಗ್ಗೆ ಒಬ್ಬರು ಖಚಿತ ಮಾಹಿತಿ ನೀಡಿದರೂ ಖಾಕಿ ಪಡೆ ಬಂಧಿಸಿಲ್ಲ. ಬೆಳಗ್ಗೆ 10:30ಕ್ಕೆ ಕಲಬುರಗಿಯ ಓರ್ವ ಐಪಿಎಸ್ ಅಧಿಕಾರಿಗೆ ಆತನ ಬಗ್ಗೆ ಮಾಹಿತಿ ನೀಡಲಾಗಿದೆ. ಖಚಿತ ಮಾಹಿತಿ ಸಿಕ್ಕರು ಆತ ನೆಲೆಸಿದ ಅಪಾರ್ಟ್ಮೆಂಟ್‌ಗೆ ತೆರಳಲು ಪೊಲೀಸರು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಅವಾಂತರ; ರಸ್ತೆಗಳು ಜಲಾವೃತ – ಧರೆಗುರುಳಿದ ಮರಗಳು

ಬೆಳಗ್ಗೆ 10:30ಕ್ಕೆ ಐಪಿಎಸ್ ಅಧಿಕಾರಿಗೆ ಮಾಹಿತಿ ನೀಡಿದರೂ ಮಧ್ಯಾಹ್ನ 1:30ರ ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಇನ್ನು ಪೊಲೀಸರ ಬರುವಿಕೆಯ ಮಾಹಿತಿ ಪಡೆದ ಪಾಟೀಲ್, ಪೊಲೀಸರು ಬರುವ ಮುನ್ನವೇ ಕಾಂಪೌಂಡ್ ಹಾರಿ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದ ಡಿ.ಬಿ.ಚಂದ್ರೇಗೌಡ ನಿಧನ

Share This Article