ಕಲಬುರಗಿ: ತೊಗರಿ ಕಣಜ ಕಲಬುರಗಿಯಲ್ಲಿ ಮಠದ ಪೀಠಕ್ಕಾಗಿ ದಶಕದ ಹಿಂದೆ ರಕ್ತದೋಕುಳಿ ಹರಿದಿದ್ದು ಇತಿಹಾಸ. ಇದೀಗ ಅದೇ ಸಾಲಿಗೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ನರೋಣಾ ಗ್ರಾಮದ ಹೊಸಮಠ ಇದೀಗ ಸುದ್ದಿಯಲ್ಲಿದೆ. ಅಕ್ಟೋಬರ್ 29ರಂದು ಈ ಮಠದ ಪೀಠಾಧಿಪತಿಯಾಗಲು ಶ್ರೀ ಚೆನ್ನಮಲ್ಲದೇವರು ಸಜ್ಜಾಗಿದ್ದಾರೆ.
ಶ್ರೀ ಚೆನ್ನಮಲ್ಲದೇವರು ಪೀಠಾಧಿಪತಿ ಆಗೋದನ್ನು ಈ ಮಠದ ಮೂಲ ಮಠವಾದ ಶ್ರೀಗುರುಬಸವೇಶ್ವರ ಬ್ರಹನ್ಮಠದ ಭಕ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಸ್ವಾಮೀಜಿಯ ಮೇಲೆ ಲೈಂಗಿಕ ಕಿರುಕುಳದ ಆರೋಪವಿದೆ. ಹೀಗಾಗಿ ಮಠದ ಪೀಠ ಸ್ವಿಕರಿಸಲು ಸ್ವಾಮೀಜಿಯನ್ನು ಬಿಡಲ್ಲ ಅಂತಿದ್ದಾರೆ.
Advertisement
Advertisement
ಒಂದೆಡೆ ಚೆನ್ನಮಲ್ಲದೇವರು ಸ್ವಾಮೀಜಿಗೇ ವಿರೋಧವಿದ್ರೆ, ಇತ್ತ ನರೋಣಾ ಗ್ರಾಮದ ಜನ ಶ್ರೀಗಳ ಬೆನ್ನಿಗೆ ನಿಂತಿದ್ದಾರೆ. ಮೂಲ ಮಠದ ವಿರೋಧ ಕುರಿತು ಚೆನ್ನಮಲ ಸ್ವಾಮೀಜಿಯನ್ನು ಕೇಳಿದ್ರೆ, ನಾನೇ ಮೂಲ ಮಠದ ಸ್ವಾಮಿ ಆಗಬೇಕಿತ್ತು. ಆದರೆ ಷಡ್ಯಂತ್ರ ಮಾಡಿ ನನ್ನ ಮೇಲೆ ಇಲ್ಲ-ಸಲ್ಲದ ಆರೋಪ ಮಾಡಲಾಗುತ್ತಿದೆ. ಇದರ ಹಿಂದೆ ಇನ್ನಿತರ ಮಠಾಧೀಶರ ಕೈವಾಡವಿದೆ ಎಂದು ಶ್ರೀ ಚೆನ್ನಮಲ್ಲದೇವರು ಆರೋಪಿಸುತ್ತಾರೆ.
Advertisement
ಮೂಲ ಮಠ ಮತ್ತು ಶಾಖಾ ಮಠದ ಜಗಳದಿಂದ ಇದೀಗ ಗ್ರಾಮದಲ್ಲಿ ಆತಂಕ ಮೂಡಿದೆ. ಈ ಎರಡು ಮಠಗಳ ಜಗಳ ತಾರಕಕೆರುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv