ಕಲಬುರಗಿ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಯಾವುದೇ ಸ್ವಾತಂತ್ರ್ಯವನ್ನು ಹೈಕಮಾಂಡ್ ನೀಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಯಡಿಯೂರಪ್ಪನವರು ಖಾತೆ ಹಂಚಿಕೆಯೂ ಮಾಡದಷ್ಟು ಇಕ್ಕಟ್ಟಿನ ಸ್ಥಿತಿಯಲ್ಲಿ ಇದ್ದಾರೆ. ಬಿಎಸ್‍ವೈ ಅವರ ಮಂತ್ರಿಮಂಡಲ ಸಹ ಇನ್ ಬ್ಯಾಲೆನ್ಸ್ ಆಗಿದ್ದು, ರಾಜ್ಯದ 13 ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಪ್ರಾಧಾನ್ಯತೆ ಸಿಕ್ಕಿಲ್ಲ ಎಂದರು.
Advertisement
Advertisement
ಪ್ರಾದೇಶಿಕ ಮತ್ತು ಸಾಮಾಜಿಕ ನ್ಯಾಯವೂ ಇಲ್ಲ. ಇದರಿಂದ ಅಸಮಾಧಾನ ತೀವ್ರಗೊಳ್ಳುವ ಸಾಧ್ಯತೆಯಿದೆ. ದೆಹಲಿ ಚುನಾವಣೆ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಳಂಬವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ನೂತನ ಸಚಿವರಿಗೆ ಒಳ್ಳೆಯದಾಗಲಿ, ಸಿಎಂಗೆ ಕೈಕಾಲು ಕಟ್ಟಿ ಹಾಕಿ ಕೀರಿಟ ಇಟ್ಟಿದ್ದಾರೆ: ಸಿದ್ದರಾಮಯ್ಯ
Advertisement
ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈಗಾಗಲೇ ಆದೇಶ ನೀಡಿದ್ದು, ಬಡ್ತಿ ಮೀಸಲಾತಿ ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದ್ದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ ಎಲ್ಲೂ ನಮ್ಮ ಕಾನೂನು ಸ್ಟ್ರಕ್ ಡೌನ್ ಮಾಡಿಲ್ಲ. ಹೀಗಾಗಿ ಆದೇಶ ಪೂರ್ಣವಾಗಿ ಪರಿಶೀಲಿಸುವ ನಂತರ ಉತ್ತರಿಸುವದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.