ಕಲಬುರಗಿ: ಇಂಥದ್ದೇ ಚಿನ್ನದಂಗಡಿಯಲ್ಲಿ ದರೋಡೆ ನಡೆಸುವಂತೆ ಸುಪಾರಿ ನೀಡಿದ್ದ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯ ಬೆನ್ನು ಬಿದ್ದಿರುವ ಪೊಲೀಸರು, ಇದೀಗ ಮುಂಬೈ (Mumbai) ನಗರದಲ್ಲಿ ಅವಿತು ಕುಳಿತಿರುವ ದರೋಡೆಕೋರರ ಸುಳಿವು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಚಿನ್ನಾಭರಣ ಅಂಗಡಿ ಮಾಲೀಕನ ಹಣೆಗೆ ಗನ್ ಹಿಡಿದು ಬೆದರಿಕೆ ಹಾಕಿ, ಆತನ ಕೈಕಾಲು ಕಟ್ಟಿ ಚಿನ್ನಾಭರಣ ದೋಚಿದ್ದ ದರೋಡೆಕೋರರ ಬೆನ್ನು ಹತ್ತಿರುವ ಕಲಬುರಗಿ ಪೊಲೀಸರು (Kalaburagi Police) ಈಗಾಗಲೇ ಮುಂಬೈ ತಲುಪಿದ್ದು, ಕಳ್ಳರು ಎಲ್ಲಿ ಅವಿತು ಕುಳಿತಿದ್ದಾರೆ ಎಂಬ ಸುಳಿವು ಸಹ ಪೊಲೀಸರಿಗೆ ಲಭಿಸಿದೆ. ಇದನ್ನೂ ಓದಿ: ಹಾಡಹಗಲೇ ಜ್ಯುವೆಲರಿ ಶಾಪ್‌ಗೆ ನುಗ್ಗಿ ದರೋಡೆ – ಗನ್ ತೋರಿಸಿ 3 ಕೆಜಿ ಚಿನ್ನಾಭರಣ ದೋಚಿದ ಗ್ಯಾಂಗ್
ದರೋಡೆಕೋರರ ಬಳಿ ಗನ್ ಇರುವ ಕಾರಣಕ್ಕಾಗಿ ಪಕ್ಕಾ ಯೋಜನೆ ರೂಪಿಸಿಯೇ ದರೋಡೆಕೋರರನ್ನು ಹೆಡೆಮುರಿ ಕಟ್ಟಿ ಕಲಬುರಗಿಗೆ ತರಲು ಪೊಲೀಸರು ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂದು ಪೊಲೀಸ್ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಆಪ್ತನ ಮೇಲೆ ಮಾದಕದ್ರವ್ಯ ಮಾರಾಟ ಆರೋಪ – ಬಂಧನದ ಬೆನ್ನಲ್ಲೇ ಪಕ್ಷದಿಂದ ಉಚ್ಛಾಟನೆ
ಕಲಬುರಗಿಯ ಸರಾಫ್ ಬಜಾರ್ (Saraf Bazar) ಪ್ರದೇಶದಲ್ಲಿರುವ ಇಂಥದ್ದೇ ಚಿನ್ನಾಭರಣದ ಅಂಗಡಿಗೆ (Gold Shop) ನುಗ್ಗಿ, ದರೋಡೆ ಮಾಡುವಂತೆ ಸುಪಾರಿ ನೀಡಿರುವ ಕುತೂಹಲಕಾರಿ ಅಂಶ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಹೀಗೆ ಸುಪಾರಿ ನೀಡಿರುವ ವ್ಯಕ್ತಿಯ ಬೆನ್ನು ಬಿದ್ದಿರುವ ಪೊಲೀಸರು ಆತನ ಬಂಧನಕ್ಕೆ ಯೋಜನೆ ರೂಪಿಸುವಷ್ಟರಲ್ಲಿ ಆತ ತೆಲಂಗಾಣದ ಮೂಲಕ ಪಶ್ಚಿಮ ಬಂಗಾಳಕ್ಕೆ ಕಾಲ್ಕಿತ್ತಿದ್ದಾನೆ ಎಂಬ ಅಂಶ ಸದ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಡಿವೋರ್ಸ್ ಕೇಸ್| ಸಂಗಾತಿ ರೆಕಾರ್ಡ್ ಮಾಡಿದ ಕರೆಯನ್ನು ಸಾಕ್ಷಿಯಾಗಿ ಪರಿಗಣಿಸಬಹುದು – ಸುಪ್ರೀಂ
ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಪ್ರಕರಣದಲ್ಲಿ ಭಾಗಿಯಾಗಿರುವ ನಾಲ್ವರು ದರೋಡೆಕೋರರ ಜೊತೆ ಸಂಪರ್ಕದಲ್ಲಿದ್ದ ಹೈದರಾಬಾದ್ ಮೂಲದ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ಈ ಇಬ್ಬರೂ ದರೋಡೆಕೋರರು ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಮಾರಾಟ ಮಾಡುವ ಹೊಣೆಗಾರಿಕೆ ಹೊತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.