ಕಲಬುರಗಿ: ಕೊರೊನಾ ವೈರಸ್‍ಗೆ ತುತ್ತಾದವರಿಗೆ ಚಿಕಿತ್ಸೆ ನೀಡುತ್ತಿರುವ ಸಿಬ್ಬಂದಿಗೆ ಬಾಡಿಗೆ ಮನೆ ಖಾಲಿ ಮಾಡಿ ಅಂದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಸಿ. ಶರತ್ ಬಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗಕ್ಕೆ ತುತ್ತಾದ ಪೀಡಿತರಿಗೆ ಮತ್ತು ಶಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಜಿಮ್ಸ್ ಮತ್ತು ಇ.ಎಸ್.ಐ.ಸಿ. ವೈದ್ಯರು, ದಾದಿಯರಿಗೆ ಮತ್ತು ಆರೋಗ್ಯ ಸಿಬ್ಬಂದಿಗೆ ಮನೆ ಖಾಲಿ ಮಾಡುವಂತೆ ಮನೆ ಮಾಲೀಕರು ಸೂಚಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ.
Advertisement
Advertisement
ಈ ರೀತಿಯ ಸೂಚನೆ ಮನೆ ಮಾಲೀಕರು ನೀಡುವಂತಿಲ್ಲ. ಒಂದು ವೇಳೆ ನೀಡಿದ್ದಲ್ಲಿ ಮನೆ ಖಾಲಿ ಮಾಡುವುದು ಬಾಡಿಗೆದಾರರಲ್ಲ, ಮನೆ ಮಾಲೀಕರು ಹಾಗೂ ಅಂತಹ ಮನೆ ಮಾಲೀಕರಿಗೆ ತಾತ್ಕಾಲಿಕ ವಸತಿ ನಿಲಯದಲ್ಲಿ ವಾಸಿಸಲು ಕ್ರಮ ವಹಿಸಲಾಗುವುದು ಎಂದು ಡಿ.ಸಿ. ಶರತ್ ಬಿ. ಅವರು ಮನೆ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
Advertisement
ಈ ಮೂಲಕ ಜೀಮ್ಸ್ ಮತ್ತು ಇಎಸ್ ಐ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಾ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಸಾವಿರಾರು ಸಿಬ್ಬಂದಿಗೆ ಮನೆ ಮಾಲೀಕರ ಕಿರುಕುಳದಿಂದ ಬೀಗ್ ರಿಲೀಫ್ ಸಿಕ್ಕಿದೆ.