– ದೆಹಲಿಯಲ್ಲಿ ನಾಯಕರ ಭೇಟಿಯಾಗ್ತೇನೆ
– ನಿಫಾ ವೈರಸ್ ಬಗ್ಗೆ ರಾಜ್ಯದಲ್ಲೂ ಬಿಗಿ ಕ್ರಮ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಜೊತೆ ನಿನ್ನೆ ವಿವರವಾಗಿ ಚರ್ಚೆ ಮಾಡಿಲ್ಲ. ಆದರೆ ಒಟ್ಟಾಗಿ ಹೋಗೋಣವೆಂದು ಹೇಳಿರುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಸ್ಥಳೀಯ ಮುಖಂಡರ ಜೊತೆ ಚರ್ಚೆ ಮಾಡಿ ಹೇಳ್ತೀನಿ ಅಂತ ಹೆಚ್‍ಡಿಕೆ ಹೇಳಿದ್ದಾರೆ. ಪಾಲಿಕೆಯಲ್ಲಿ ಒಂದಾಗಿ ಕೆಲಸ ಮಾಡಲು ಅವರು ಒಲವು ತೋರಿಸಿದ್ದಾರೆ. ಬಹುತೇಕ ಬಿಜೆಪಿ-ಜೆಡಿಎಸ್ ಕಲಬುರಗಿ ಪಾಲಿಕೆಯಲ್ಲಿ ಸೇರಿ ಮೆಜಾರಿಟಿ ಮಾಡ್ತೇವೆ ಎಂದು ಹೇಳುವ ಮೂಲಕ ಮೈತ್ರಿ ಖಚಿತ ಎಂದು ಸ್ಪಷ್ಟವಾಗಿ ಹೇಳಿದರು.
Advertisement
Advertisement
ಇದೇ ವೇಳೆ ದೆಹಲಿಗೆ ತೆರಳುವ ಬಗ್ಗೆ ಪ್ರತಿಕ್ರಿಯಿಸಿ, ಇಂದು ನಾನು ದೆಹಲಿಗೆ ಹೋಗ್ತಿದ್ದೀನಿ. ಅಲ್ಲಿ ನಾಲ್ಕಾರು ಜನ ಕೇಂದ್ರ ಸಚಿವರ ಭೇಟಿ ಮಾಡುತ್ತೇನೆ. ಗಡ್ಕರಿ ಭೇಟಿ, ಹಣಕಾಸು ಸಚಿವರ ಭೇಟಿ ಮಾಡಿ ಮಾತುಕತೆ ನಡೆಸುವುದಾಗಿ ತಿಳಿಸಿದರು. ಇತ್ತ ಸಿಎಂ ದೆಹಲಿಗೆ ತೆರಳುವ ಹಿನ್ನೆಲೆಯಲ್ಲಿ ಆರ್ ಟಿ ನಗರ ನಿವಾಸದಲ್ಲಿ ಸಚಿವಾಕಾಂಕ್ಷಿ ಶಾಸಕ ಎಂಪಿ ಕುಮಾರಸ್ವಾಮಿ, ಕುಡಚಿ ಶಾಸಕ ರಾಜೀವ್, ಶಿವರಾಜ್ ಪಾಟೀಲ್ ಸಿಎಂ ಅವರನ್ನು ಭೇಟಿ ಮಾಡಿದರು. ಇದನ್ನೂ ಓದಿ: ಕೊರೊನಾ ಬೆನ್ನಲ್ಲೇ 11 ಮಂದಿಯಲ್ಲಿ ನಿಫಾ ರೋಗ ಲಕ್ಷಣ- 3 ಜಿಲ್ಲೆಗಳಲ್ಲಿ ಹೈ ಅಲರ್ಟ್
Advertisement
ಕೇರಳದಲ್ಲಿ ನಿಫಾ ವೈರಸ್ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ನಾವು ಕೇರಳ ಗಡಿ ಸೀಲ್ ಮಾಡಿದಾಗ ಲಸಿಕೆ, ಟೆಸ್ಟಿಂಗ್ ಗೆ ಕ್ರಮ ಕೈಗೊಂಡಿದ್ದೆವು. ಈಗ ಇನ್ನಷ್ಟು ಬಿಗಿ ಕ್ರಮ ಕೈಗೊಳ್ತೇವೆ. ನಿಫಾ ವೈರಸ್ ಬಗ್ಗೆ ತಜ್ಞರಿಂದ ಸಂಪೂರ್ಣ ಮಾಹಿತಿಯನ್ನು ಕೇಳಿದ್ದೇನೆ. ನಿಫಾ ವೈರಸ್ ಹೇಗೆ ಹಬ್ಬುತ್ತೆ, ಏನೆಲ್ಲ ಮುಂಜಾಗ್ರತೆ ಕ್ರಮ ತಗೋಬೇಕು ಅಂತ ಸಲಹೆ ಕೇಳಿದ್ದೇನೆ. ನಿಫಾ ವೈರಸ್ ಬಗ್ಗೆ ನಿಗಾ ವಹಿಸಿದ್ದೇವೆ. ವೈರಸ್ ತಡೆಗೆ ಇನ್ನಷ್ಟು ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದರು. ಇದನ್ನೂ ಓದಿ: ಇದನ್ನೂ ಓದಿ: ‘ಬಾವಲಿ ಜ್ವರ’ – ರೋಗ ಲಕ್ಷಣ ಏನು, ತಡೆಗಟ್ಟೋದು ಹೇಗೆ?
ನಗರದಲ್ಲಿ ರಸ್ತೆ ಗುಂಡಿಗೆ ವಿಕಲಚೇತನ ಬಲಿ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ, ರಸ್ತೆ ಗುಂಡಿಗಳನ್ನು ಮುಚ್ಚುವ ಬಗ್ಗೆ ಮೊನ್ನೆ ಸಭೆಯಲ್ಲಿ ಸೂಚಿಸಲಾಗಿದೆ. ಸದ್ಯ ಮಳೆ ಇದೆ, ಮಳೆ ಕಮ್ಮಿಯಾದ ಮೇಲೆ ರಸ್ತೆ ಗುಂಡಿ ಮುಚ್ಚುವ ಕೆಲಸ ವಾರ್ ಫೂಟ್ ನಲ್ಲಿ ಮಾಡ್ತೇವೆ ಎಂದು ಹೇಳಿದರು.