– ಬಾಲಕಿಯ ಕುಟುಂಬಸ್ಥರಿಂದ ಆರೋಪ
ಕಲಬುರಗಿ: ಜಿಲ್ಲೆಯ ಹಾವನೂರ ಗ್ರಾಮದ ಐದು ವರ್ಷದ ಬಾಲಕಿ ಶ್ವೇತಾ ಕೊಲೆ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಿದೆ.
ಡಿಸೆಂಬರ್ 5 ರಂದು ಬಾಲಕಿ ನಾಪತ್ತೆಯಾಗಿ ಇಂದು ಬೆಳಗ್ಗೆ ಗ್ರಾಮದ ಬಳಿಯ ಹಳ್ಳದ ಬಳಿ ಬಾಲಕಿಯ ಶವ ತಂಡು ತುಂಡಾಗಿ ಪತ್ತೆಯಾಗಿದೆ. ಆದರೆ ಈ ಮಗು ನಿನ್ನೆ ಹುಣ್ಣಿಮೆ ನಿಮಿತ್ಯ ನಿಧಿ ಆಸೆಗೆ ಬಲಿಯಾಗಿದೆ ಎಂದು ಕೆಲ ಊರಿನ ಗ್ರಾಮಸ್ಥರು ಸಂಶಯಪಟ್ಟಿದ್ದಾರೆ.
ಇನ್ನು ಕೆಲವರು ಇತ್ತೀಚೆಗೆ ಬಾಲಕಿಯ ತಂದೆ ಲಿಂಗಪ್ಪ ಅವರಿಗೆ ಗ್ರಾಮದ ಮುಕುಂದಪ್ಪ ಎಂಬವನ ಅನೈತಿಕ ಸಂಬಂಧ ವಿಚಾರ ಗೊತ್ತಾಗಿತ್ತು. ತನ್ನ ಸಂಬಂಧಿ ಜೊತೆ ಅನೈತಿಕ ಸಂಬಂಧ ಬೆಳೆದಿದ್ದನ್ನು ಲಿಂಗಪ್ಪ ಸೆರೆ ಹಿಡಿದು ಮುಂಕುದಪ್ಪನಿಗೆ ಧರ್ಮದೇಟು ನೀಡಿದ್ದರಂತೆ.
ಈ ದ್ವೇಷಕ್ಕಾಗಿ ಬಾಲಕಿಯನ್ನು ಮುಕುಂದಪ್ಪ ಅಪಹರಿಸಿ ಕೊಲೆ ಮಾಡಿರಬಹುದು ಎಂಬ ಸಂಶಯ ಕುಟುಂಬಸ್ಥರು ವ್ಯಕ್ತಪಡಿಸುತ್ತಿದ್ದಾರೆ. ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ಕೊಲೆಗೆ ನಿಖರ ಕಾರಣ ಈಗಲೇ ಹೇಳಲು ಸಾಧ್ಯವಿಲ್ಲ. ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುವುದಾಗಿ ಹೇಳುತ್ತಿದ್ದಾರೆ.