ಕಲಬುರಗಿ: ಪೌರತ್ವ ಕಾಯ್ದೆ(ಸಿಎಎ) ತಪ್ಪು ತಿಳುವಳಿಕೆಯಿಂದ ಈಗಾಗಲೇ ದೇಶದಲ್ಲಿ ಹಲವೆಡೆ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ಈ ಕಾಯ್ದೆಯ ಜಾಗೃತಿಗಾಗಿ ಕಲಬುರಗಿಯಲ್ಲಿ ಜನವರಿ 11ರಂದು ಬೃಹತ್ ರ‍್ಯಾಲಿ ಮಾಡಿ ಜನರಲ್ಲಿ ಜಾಗೃತಿ ಮೂಡಿಸಲು ಕಲಬುರಗಿ ನಾಗರಿಕ ಸಮಿತಿ ಸಜ್ಜಾಗಿದೆ.
ಈ ಕಾರ್ಯಕ್ರಮವನ್ನು ಯಶಸ್ವಿ ಮಾಡಲು ಶರಬಸವೇಶ್ವರ ಸಂಸ್ಥಾನದ ಶ್ರೀ ಲಿಂಗರಾಜಪ್ಪ ಅಪ್ಪಾ, ಸಿದ್ದರಾಮಯ್ಯ ಹೀರೆಮಠ ಸೇರಿದಂತೆ ಹಲವರು ಮುಂದಾಳತ್ವ ವಹಿಸಿದ್ದಾರೆ. ಈಗಾಗಲೇ ಹಲವು ಶಾಲಾ-ಕಾಲೇಜುಗಳಿಗೆ ಹೋಗಿ ಈ ತಂಡ ಜಾಗೃತಿ ಮೂಡಿಸಲಾಗುತ್ತಿದ್ದು, ಜನವರಿ 11ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನಗರೇಶ್ವರ ಶಾಲೆಯಿಂದ ಮೇರವಣಿಗೆ ಆರಂಭಿಸಿ, ಕಿರಾಣಾ ಮಾರ್ಕೆಟ್, ಸೂಪರ್ ಮಾರ್ಕೆಟ್ ಮುಖಾಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಸುಮಾರು 2 ಕಿಮೀ ಉದ್ದದ ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆ ಸಾಗಲಿದೆ.
Advertisement
Advertisement
ಕಾರ್ಯಕ್ರಮ ಯಶಸ್ವಿ ಮಾಡಲು ಹಲವು ಮಠಾಧೀಶರು ವಿವಿಧ ಸಮಾಜದ ಮುಖಂಡರನ್ನು ಈಗಾಗಲೇ ಭೇಟಿ ಮಾಡಿ ಬೆಂಬಲ ಕೇಳಿದ್ದಾರೆ. ಈ ಮೂಲಕ ಯಾವ ಜಿಲ್ಲೆಯಲ್ಲಿ ಪೌರತ್ವ ವಿರೋಧಿಸಿ ತೀವ್ರ ಹೋರಾಟ ನಡೆದಿತ್ತು, ಅದೇ ಸ್ಥಳದಿಂದ ಇದೀಗ ಜಾಗೃತಿ ಅಭಿಯಾನ ನಡೆಯುತ್ತಿದೆ.
Advertisement