ಕಲಬುರಗಿ: ಎರಡು ಚೆಕ್ ಡ್ಯಾಂಗಳಿಗೆ ಕ್ರಿಮಿನಾಶಕ ಔಷಧಿ ಸೇರ್ಪಡೆಯಾಗಿ ಮೀನುಗಳು ಸಾವನ್ನಪ್ಪಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಚಿಂಚೋಳಿ ತಾಲ್ಲೂಕಿ ಬೋನಸ್‌ಪುರ ಮತ್ತು ಮೊಗದಂಪುರದಲ್ಲಿ ನಡೆದಿದೆ.
ಎರಡು ಚೆಕ್ ಡ್ಯಾಂಗಳಿಗೆ ಕ್ರಿಮಿನಾಶಕ (Pesticide) ಔಷಧಿ ಸೇರ್ಪಡೆ ಹಿನ್ನೆಲೆ, ನೀರು ಸಂಪೂರ್ಣ ಕೆಂಪು ಬಣ್ಣಕ್ಕೆ ತಿರುಗಿದೆ. ಇದರಿಂದಾಗಿ ಹಲವಾರು ಮೀನುಗಳು ಸಾವನ್ನಪ್ಪಿವೆ. ಯಾರೋ ದುಷ್ಕರ್ಮಿಗಳು ಬೇಕು ಅಂತಾ ಚೆಕ್ ಡ್ಯಾಂನಲ್ಲಿರುವ ನೀರಿಗೆ ರಾಸಾಯನಿಕ ಕ್ರಿಮಿನಾಶಕ ಸೇರ್ಪಡೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬೋನಸ್‌ಪುರ ಮತ್ತು ಮೊಗದಂಪುರ ಗ್ರಾಮದ ಜನರಲ್ಲಿ ಆತಂಕ ನಿರ್ಮಾಣವಾಗಿದೆ. ಇದನ್ನೂ ಓದಿ: 14 ಅಂತಸ್ತಿನ ವಸತಿ ಕಟ್ಟಡದಲ್ಲಿ ಬೆಂಕಿ ಅವಘಡ- ಮೂವರು ಸಾವು
ಜಾನುವಾರುಗಳು ಮತ್ತು ರೈತರು ಕುಡಿಯಲು ಬಳಸುವ ನೀರಿಗೆ ವಿಷ ಸೇರ್ಪಡೆ ಹಿನ್ನೆಲೆ, ಸ್ಥಳಕ್ಕೆ ಚಿಂಚೋಳಿ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಂಚಾವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಮಂಗನ ಕಾಯಿಲೆಗೆ ಲಸಿಕೆ: ಐಸಿಎಂಆರ್ ಮಹಾನಿರ್ದೇಶಕರ ಜೊತೆ ದಿನೇಶ್ ಗುಂಡೂರಾವ್ ಚರ್ಚೆ
ಆಯುಧ ಪೂಜೆಯ ದಿನ ಕ್ರಿಮಿನಾಶಕ ಔಷಧ ಸಾಗಣೆಯ ವಾಹನವೊಂದನ್ನು ಮೊಗದಂಪುರ ಚೆಕ್ ಡ್ಯಾಂ ಬಳಿ ನಿಲ್ಲಿಸಿ ತೊಳೆದಿರುವ ಸಾಧ್ಯತೆಯಿದ್ದು, ಈ ಚೆಕ್ ಡ್ಯಾಂ ನೀರು ಪಕ್ಕದ ಮೊಗದಂಪುರ ಚೆಕ್ ಡ್ಯಾಂ ಕಡೆಗೆ ಹರಿದಿದೆ. ಹೀಗಾಗಿ, ಕ್ರಿಮಿನಾಶಕ ಉಭಯ ಡ್ಯಾಂಗಳ ನೀರಿನಲ್ಲಿ ಹರಡಿಕೊಂಡಿದೆ. ಪ್ರಸ್ತುತ ಕುಂಚಾವರಂ ಪೊಲೀಸರು ಅಂದು ಆ ಸ್ಥಳಕ್ಕೆ ಬಂದಿದ್ದ ವಾಹನ ಯಾವುದು ಎಂಬುದರ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕುಂಚಾವರಂ ಠಾಣೆಯ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರ ಪರಪ್ಪನ ಅಗ್ರಹಾರ ಜೈಲಿಂದ ರಿಲೀಸ್