ಲಕ್ನೋ: ಉತ್ಕಲ್ ರೈಲು ದುರಂತದ ನೆನಪು ಮಾಸುವ ಮುನ್ನವೇ ಉತ್ತರ ಪ್ರದೇಶದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಕೈಫಿಯತ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ 70 ಜನ ಗಾಯಗೊಂಡಿರುವ ಘಟನೆ ಮಂಗಳವಾರ ಅವೌರೇಯಾ ಜಿಲ್ಲೆಯಲ್ಲಿ ನಡೆದಿದೆ.
ಮಾನವ ರಹಿತ ಸಿಗ್ನಲ್ ನಲ್ಲಿ ಪಲ್ಟಿಯಾಗಿದ್ದ ಮರಳಿನ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ರೈಲು ಅಜಮ್‍ಘಡದಿಂದ ದೆಹಲಿಗೆ ಸಂಚರಿಸುತ್ತಿದ್ದಾಗ ಬುಧವಾರ ನಸುಕಿನ ಜಾವ 2.50ಕ್ಕೆ ಪಟ ಮತ್ತು ಅಚಲ್ಡ ರೈಲ್ವೇ ನಿಲ್ದಾಣದ ಮಧ್ಯೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಉತ್ತರ ಕೇಂದ್ರ ವಲಯದ ಅಧಿಕಾರಿ ತಿಳಿಸಿದ್ದಾರೆ.
Advertisement
ಒಂದು ಬೋಗಿ ಸಂಪೂರ್ಣವಾಗಿ ತಿರುಗಿದ್ದರೆ, ಏಳು ಬೋಗಿಗಳು ಹಳಿ ತಪ್ಪಿದೆ. ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರೈಲ್ವೇ ಸಚಿವ ಸುರೇಶ್ ಪ್ರಭು ಟ್ವೀಟ್ ಮಾಡಿ ಘಟನೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿಲಾಗಿದೆ ಎಂದು ಹೇಳಿದ್ದಾರೆ.
Advertisement
ಘಟನೆ ಬಗ್ಗೆ ವಿವರಣೆ ಪಡೆಯಲು ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಯೋಗಿ ಅದಿತ್ಯನಾಥ್ ಹಿರಿಯ ಅಧಿಕಾರಿಗಳ ಹತ್ತಿರ ಮಾತನಾಡಿದ್ದಾರೆ. ಪೊಲೀಸ್ ಹೆಚ್ಚುವರಿ ನಿರ್ದೇಶಕ ಅಧಿಕಾರಿಯಾದ ಆನಂದ್ ಕುಮಾರ್ ಪ್ರತಿಕ್ರಿಯಿಸಿ, ಮರಳಿನ ಲಾರಿ ಹಳಿ ಪ್ರವೇಶಿಸಿ ಪಲ್ಟಿಯಾಗಿದ್ದು ಹೇಗೆ ಎನ್ನುವುದರ ಬಗ್ಗೆ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement
ಶನಿವಾರ ಪಶ್ಚಿಮ ಉತ್ತರ ಪ್ರದೇಶದ ಕತೌಲಿಯ ಹತ್ತಿರ ಕಾಳಿಂಗ ಎಕ್ಸ್‍ಪ್ರೆಸ್ ಹಳಿ ತಪ್ಪಿ 23 ಜನ ಸಾವನ್ನಪ್ಪಿ, 150 ಕ್ಕಿಂತಲೂ ಹೆಚ್ಚಿನ ಮಂದಿಗೆ ಗಾಯವಾಗಿತ್ತು. ವಿಶ್ವದ 4ನೇ ಅತಿ ದೊಡ್ಡ ರೈಲ್ವೇ ಜಾಲವನ್ನು ಭಾರತ ಹೊಂದಿದ್ದು, ಪ್ರತಿ ದಿನ 2.2 ಕೋಟಿ ಜನ ರೈಲಿನಲ್ಲಿ ಸಂಚರಿಸುತ್ತಾರೆ.
9/Unauthorisedly one Dumper crossed Rly Fence & hit the Loco of Kaifiat Ex causing Derailment:No Casualty,25Injured(21 with Simple injuries) pic.twitter.com/NGSWTWuztP
— Ministry of Railways (@RailMinIndia) August 23, 2017
A dumper hit the locomotive of the Kaifiyat Express,resulting in derailment of coaches 1/ https://t.co/8EgmiW0gMO
— Suresh Prabhu (@sureshpprabhu) August 23, 2017
Some passengers have received Injuries and have been shifted to nearby hospitals.I am personally monitoring situation,rescue operations 2/
— Suresh Prabhu (@sureshpprabhu) August 23, 2017
Have directed senior officers to reach the site immediately 3/
— Suresh Prabhu (@sureshpprabhu) August 23, 2017
#UttarPradesh Restoration work underway at Kaifiyat express train derailment site pic.twitter.com/F4NT2iYVbx
— ANI UP/Uttarakhand (@ANINewsUP) August 23, 2017
#UttarPradesh: #LatestVisuals from Kaifiyat express derailment site near #Auraiya, 74 injured. Train derailed after colliding with a dumper pic.twitter.com/5sY7N4nNEu
— ANI UP/Uttarakhand (@ANINewsUP) August 23, 2017
#UttarPradesh: Latest visuals from Kaifiyat express derailment site in #Auraiya, 74 injured. Rescue operations have concluded. pic.twitter.com/pGIeCo0RlL
— ANI UP/Uttarakhand (@ANINewsUP) August 23, 2017
Kaifiyat Express train derails near Auraiya (UP). More details awaited pic.twitter.com/RtFrYbSuxZ
— ANI UP/Uttarakhand (@ANINewsUP) August 22, 2017