ಚಿಕ್ಕೋಡಿ: ಕಾಗವಾಡ ಕಾಂಗ್ರೆಸ್ ಶಾಸಕ (Kagwad Congress MLA) ರಾಜು ಕಾಗೆ (Raju Kage) ಆಪ್ತನೊಬ್ಬ ಮಾಧ್ಯಮ ಪ್ರತಿನಿಧಿಗಳಿಗೆ ಧಮ್ಕಿ ಹಾಕಿರುವ ಘಟನೆ ಬೆಳಗಾವಿ ಜಿಲ್ಲೆಯ ಆಥಣಿ ತಾಲೂಕಿನ ಬೆವನೂರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜಾತ್ರಾ ಮಹೋತ್ಸವದಲ್ಲಿ ಶಾಸಕ ರಾಜು ಕಾಗೆ ಎದುರು ಕಾಗೆ ಆಪ್ತ ಸಂತೋಷ ಚುರಮೂಲೆ ಎಂಬಾತ ರಾಜು ಕಾಗೆ ಮುಂದೆಯೇ ವಿಡಿಯೋ ಮಾಡಿ ಮಾಧ್ಯಮದವರಿಗೆ ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: ಅಬ್ದುಲ್ ಕಲಾಂ ಹೇರ್ ಸ್ಟೈಲ್ ಬಗ್ಗೆ ಮಾತನಾಡಿದ್ದಾರಾ? – ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕೆಂಡಾಮಂಡಲ
ಬೆವನೂರ ಗ್ರಾಮದ ಅಮೋಸಿದ್ದೇಶ್ವರ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಶಾಸಕರನ್ನು ಮೆಚ್ಚಿಸಲು ರಾಜು ಕಾಗೆಯ ಬಗ್ಗೆ ಮಾಧ್ಯಮದವರು ಬೇರೆ ದೃಷ್ಟಿಯಿಂದ ಸುದ್ದಿಗಳನ್ನು ವೈರಲ್ ಮಾಡಿದರೆ ಮನೆ ನುಗ್ಗಿ ಕೈ ಕಾಲು ಮುರಿಯುವುದಾಗಿ ಬೆದರಿಕೆ ಹಾಕಿದ್ದಾನೆ.
ತನ್ನ ಎದುರೇ ಬೆದರಿಕೆ ಹಾಕುತ್ತಿದ್ದರೂ ಶಾಸಕರು ಮಾತ್ರ ಏನು ಮಾತನಾಡದೇ ನಿಂತಿದ್ದರು.