ಹೈದರಾಬಾದ್: ಎರಡು ಆಲಿವ್ ಮರಗಳನ್ನು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಿಂದ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮನೆಗೆ ರವಾನಿಸಲಾಗಿದೆ.
ಈ ಮರಗಳನ್ನು ಮನೆಯಲ್ಲಿ ಬೆಳೆಸಿದರೆ ಶುಭವಾಗುತ್ತದೆ ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ಕೆಲ ವರ್ಷಗಳ 2 ಹಿಂದೆ ಸ್ಪೇನ್‍ನಿಂದ ಆಂಧ್ರಪ್ರದೇಶಕ್ಕೆ ತರಿಸಲಾಗಿತ್ತು.
Advertisement
Advertisement
ಬಳಿಕ ಪೂರ್ವ ಗೋದಾವರಿ ನದಿಯ ದಡದಲ್ಲಿರುವ ಕದಿಯಂ ಪ್ರದೇಶದಲ್ಲಿನ ಗೌತಮಿ ನರ್ಸರಿಯ ಆರು ಸಿಬ್ಬಂದಿ ಕಳೆದ 2 ವರ್ಷಗಳಿಂದ ಪೋಷಿಸುತ್ತಿದ್ದರು. ಈ ಮರ ಸುಮಾರು 185 ವರ್ಷಗಳಷ್ಟು ಹಳೆಯದಾಗಿದ್ದು, ವಿಶೇಷ ಆರೈಕೆ ಮಾಡಿ ಬೆಳೆಸಲಾಗಿತ್ತು. ಈ ಮರಗಳು ಅಂದಾಜು 1000 ವರ್ಷ ಕಾಲ ಬದುಕುತ್ತವೆ. ಇದನ್ನೂ ಓದಿ: ಮೊದಲ ಬಾರಿಗೆ ಬೋನಿ ಕಪೂರ್ ನಿರ್ಮಾಣದಲ್ಲಿ ಜಾನ್ವಿ ನಟನೆ
Advertisement
Advertisement
ಗೌತಮಿ ನರ್ಸರಿ ಮಾಲೀಕ ಮಾರ್ಗನಿ ವೀರಬಾಬು ಮಾತನಾಡಿ, ರಿಲಾಯನ್ಸ್ ಗ್ರೂಪ್‍ನ ಆದೇಶದ ಮೇರೆಗೆ ಎರಡು ಮರಗಳನ್ನು ಸ್ಪೇನ್‍ನಿಂದ ಆಮದು ಮಾಡಿಕೊಂಡಿದ್ದೆವು. ಆ ಮರಗಳ ಆರೈಕೆ, ಮಣ್ಣಿನ ಫಲವತ್ತತೆ, ಬೆಳವಣಿಗೆಗೆ ಬೇಕಾದ ವಿಶೇಷ ಕಾಳಜಿಯನ್ನು ವಹಿಸಲಾಗಿತ್ತು ಎಂದರು.
ಮರಗಳು 12 ಅಡಿಗಳಿಗಿಂತ ಎತ್ತರವಾಗಿ ಬೆಳೆಯದಂತೆ ನೋಡಿಕೊಳ್ಳಲು ಮರಗಳ ಆಕಾರವನ್ನು ಹೆಚ್ಚಿಸಲಾಗಿದೆ. ಹಾಗೆಯೇ ಮರಗಳನ್ನು ಆದ್ಯತೆಗೆ ಅನುಗುಣವಾಗಿ ಬೆಳಸಲಾಗಿದೆ. ಬುಧವಾರ ನಮ್ಮ ನರ್ಸರಿಯಿಂದ ಗುಜರಾತ್‍ನ ಜಾಮ್ ನಗರಕ್ಕೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪಂಪಾ ಸರೋವರವನ್ನು ಸಂಪೂರ್ಣ ಕಿತ್ತು ಹಾಕಿದ್ದು ಸರಿಯಲ್ಲ: ಶರಣಬಸಪ್ಪ ಕೋಲ್ಕಾರ್
ಈ ಎರಡು ಮರಗಳನ್ನು ವಿಶೇಷ ಟ್ರಕ್ ಮುಖಾಂತರವಾಗಿ ಗುಜರಾತ್‍ನ ಜಾಮ್ ನಗರದಲ್ಲಿರುವ ಅಂಬಾನಿ ಮನೆಗೆ ಕಳುಹಿಸಿಕೊಡಲಾಗಿದೆ. ಈ ಟ್ರಕ್ ತೆಲಂಗಾಣ, ಮಹಾರಾಷ್ಟ್ರದ ಮೂಲಕ ಹಾದು ಹೋಗುತ್ತದೆ. ಇದು ಸುಮಾರು 1,800 ಕಿಮೀ ದೂರ ಕ್ರಮಿಸಿ ಗುಜರಾತ್‍ನ್ನು ತಲುಪುತ್ತದೆ. ಪ್ರತಿ ಮರಕ್ಕೂ ತಲಾ 47ಲಕ್ಷ ರೂ.ನಂತೆ 94 ಲಕ್ಷ ರೂ.ಗಳನ್ನು ಅಂಬಾನಿ ವ್ಯಯಿಸಿದ್ದಾರೆ.