Bengaluru CityCinemaKarnatakaLatestSandalwood
`ಕಡೆ ಮನೆ’ಯಲ್ಲಿ ಚಮಕ್ ಚಮಕ್ ಐಟಂ ಸಾಂಗ್

ಬೆಂಗಳೂರು: ಕೀರ್ತನ ಕ್ರಿಯೇಷನ್ಸ್ ಲಾಂಛನದಲ್ಲಿ ನಂದಕುಮಾರ ಎಸ್.ತುಮಕೂರು ನಿರ್ಮಿಸುತ್ತಿರುವ `ಕಡೆ ಮನೆ’ ಚಿತ್ರಕ್ಕೆ ಕಳೆದ ವಾರ ತುಮಕೂರು ಹತ್ತಿರದ ಕೈದಾಳ ಗ್ರಾಮದಲ್ಲಿ ಅದ್ಧೂರಿ ಸೆಟ್ನಲ್ಲಿ ಐಟಂ ಸಾಂಗ್ ಶೂಟಿಂಗ್ ನಡೆಯಿತು. ಆಲೀಷಾ ಹಾಗೂ ಸಹ ನರ್ತಕಿಯರು ಅಭಿನಯಿಸಿದ `ಚಮಕ್ ಚಮಕ್ ಶೋಭನಾ’ ಎಂಬ ಐಟಂ ಹಾಡೊಂದನ್ನು ಚಿತ್ರೀಕರಿಸಿಕೊಳ್ಳಲಾಯಿತು. ಈಗಾಗಲೇ ಪ್ರಥಮ ಪ್ರತಿ ಹೊರಬಂದಿದ್ದು ಏಪ್ರಿಲ್ ತಿಂಗಳಲ್ಲಿ ಚಿತ್ರವನ್ನು ತೆರೆಯ ಮೇಲೆ ತರಲು ತಯಾರಿ ನಡೆದಿದೆ.
ವಿನಯ್ ಕಥೆ ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗೌತಮ್ ಶ್ರೀವತ್ಸ ಸಂಗೀತ, ಮಧುಸೂದನ್ ಶಾಮ್ ಛಾಯಾಗ್ರಹಣ, ರಘುನಾಥ್ ಸಂಕಲನ, ಅರುಣ್ ಕುಮಾರ್ ನೃತ್ಯ ನಿರ್ದೇಶನ, ಅಶೋಕ್ ಸಾಹಸ, ದನಂಜಯ್ ವಿಜಯ್ ಸಂಭಾಷಣೆ, ಲೋಕೇಶ್ ಸಾಹಿತ್ಯವಿದೆ.
ಯುವರಾಜ್, ಕಲ್ಪನ, ಬಾಲರಾಜ್ವಾಡಿ, ಆಯೇಷ್, ಕೊಡಿರಂಗ, ಬ್ಯಾಂಕ್ ಜನಾರ್ಧನ್, ಸಿಲ್ಲಿ ಲಲ್ಲಿ ಶ್ರೀನಿವಾಸ ಗೌಡ್ರು, ಮಂಡ್ಯ ಸಿದ್ದು, ವಿಜಯ್, ಇಂದ್ರಜಿತ್, ಗಜ ಮುಂತಾದವರ ತಾರಾಬಳಗವಿದೆ.