ಮಂಗಳೂರು: ತಾನು ಮಾಡದ ತಪ್ಪಿಗೆ ಸೌದಿ ಅರೇಬಿಯಾ (Saudi Arabia) ಜೈಲಿನಲ್ಲಿ 11 ತಿಂಗಳ ಕಾಲ ಸೆರೆವಾಸ ಅನುಭವಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಚಂದ್ರಶೇಖರ್ (Chandrashekhar Kadaba) ಇಂದು ತಾಯ್ನಾಡಿಗೆ ಮರಳಿದ್ದಾರೆ.
ಕೆಲಸಕ್ಕಾಗಿ ತೆರಳಿ ಸೌದಿಯಲ್ಲಿ ನೆಲೆಸಿರುವ ಚಂದ್ರಶೇಖರ್ ಸಿಮ್ ಖರೀದಿಸಿದ್ದ ವೇಳೆ ಅವರ ಬ್ಯಾಂಕ್ ಖಾತೆ ಹ್ಯಾಕ್ ಆಗಿತ್ತು. ಹ್ಯಾಕ್ ಆಗಿದ್ದ ಖಾತೆಗೆ ಮಹಿಳೆಯೊಬ್ಬರ ಖಾತೆಯಿಂದ 22 ಸಾವಿರ ರಿಯಲ್ ಹಣ ವರ್ಗಾವಣೆ ಆಗಿತ್ತು. ಈ ವರ್ಗಾವಣೆ ಚಂದ್ರಶೇಖರ್ ಅವರೇ ಮಾಡಿದ್ದರು ಎಂದು ಅವರನ್ನು ಸೌದಿ ಅರೇಬಿಯಾ ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದರು.
Advertisement
Advertisement
ಬಳಿಕ ಭಾರತೀಯ ವಿದೇಶಾಂಗ ಇಲಾಖೆ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ (MP Nalin Kumar Kateel) ಸೇರಿದಂತೆ ಹಲವರ ಪ್ರಯತ್ನದಿಂದ ಇದೀಗ 11 ತಿಂಗಳ ಬಳಿಕ ಚಂದ್ರಶೇಖರ್ ಬಿಡುಗಡೆಗೊಂಡಿದ್ದಾರೆ. ಇಂದು ರಿಯಾದ್ ನಿಂದ ಮುಂಬೈಗೆ ಬಂದು ಅಲ್ಲಿಂಗ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಹೊರಬರುತ್ತಿದ್ದಂತೆ ಚಂದ್ರಶೇಖರ್ ಭಾವುಕರಾಗಿದ್ದರು. ಈ ವೇಳೆ ಅವರ ತಾಯಿ ಹೇಮಾವತಿ ಮಗನನ್ನು ಅಪ್ಪಿ ಹಿಡಿದು ಆನಂದ ಭಾಷ್ಪ ಹರಿಸಿದರು. ಇದನ್ನೂ ಓದಿ: ಮುಸ್ಲಿಂ ಸ್ಪೀಕರ್ ಬಗೆಗಿನ ಜಮೀರ್ ಹೇಳಿಕೆಗೆ ಖಾದರ್ ಆಕ್ಷೇಪ