ಬರೋಬ್ಬರಿ 5 ಸಿನಿಮಾಗಳನ್ನು ಘೋಷಣೆ ಮಾಡಿ ಅಚ್ಚರಿ ಮೂಡಿಸಿದ್ದಾರೆ ನಿರ್ದೇಶಕ ಆರ್.ಚಂದ್ರು. ಕಬ್ಜ ಸಿನಿಮಾದ ನಂತರ ಕಬ್ಜ 2 ಸಿನಿಮಾ ಬರುವುದಿಲ್ಲ ಎಂದು ಗಾಂಧಿನಗರ ಆಡಿಕೊಂಡಿತ್ತು. ಆಡಿಕೊಂಡ ಬಾಯಿಗಳಿಗೆ ಸಿನಿಮಾ ಘೋಷಣೆ ಮಾಡುವ ಮೂಲಕ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.
Advertisement
ಕಬ್ಜ ಸಿನಿಮಾ ರಿಲೀಸ್ ಆಗಿ ಮೊದಲನೇ ದಿನವೇ ನೂರು ಕೋಟಿ ಕ್ಲಬ್ ಸೇರಿದ್ದ ಬಗ್ಗೆ ಚಿತ್ರತಂಡ ಹೇಳಿಕೊಂಡಿತ್ತು. ಆದರೆ, ಕೆಲವರು ಅದನ್ನು ತಮಾಷೆ ಮಾಡಿದ್ದರು. ಅದಕ್ಕೂ ಚಂದ್ರು ಉತ್ತರ ನೀಡಿದ್ದಾರೆ. ಕಬ್ಜ ಸಿನಿಮಾದಿಂದ ಸರಕಾರಕ್ಕೆ ಬರೋಬ್ಬರಿ 20 ಕೋಟಿ ರೂಪಾಯಿಯನ್ನು ತೆರಿಗೆ ಕಟ್ಟಿರುವುದಾಗಿ ಹೇಳಿದ್ದಾರೆ.
Advertisement
Advertisement
5 ಸಿನಿಮಾ ಘೋಷಣೆ
Advertisement
ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಹಾವಳಿ ಜೋರಾಗಿದೆ. ಕಳೆದ ವರ್ಷ ‘ಕಬ್ಜ’ (Kabzaa) ಚಿತ್ರದ ಮೂಲಕ ನಿರ್ದೇಶಕ, ನಿರ್ಮಾಪಕನಾಗಿ ಗೆದ್ದಿರುವ ಆರ್.ಚಂದ್ರು (R.Chandru) ಇದೀಗ ಒಮ್ಮೆಲೆ 5 ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಅನೌನ್ಸ್ ಮಾಡಿದ್ದಾರೆ. ನಿನ್ನೆ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಿನಿಮಾಗಳಿಗೆ ಚಾಲನೆ ನೀಡಿದ್ದಾರೆ.
‘ಕಬ್ಜ’ (Kabzaa) ಖ್ಯಾತಿಯ ಆರ್.ಚಂದ್ರು (R.Chandru) ಅವರ ತಮ್ಮ ಕನಸಿನ ಆರ್‌ಸಿ ಪ್ರೊಡಕ್ಷನ್ ಸಂಸ್ಥೆಯಿಂದ ಐದು ಸಿನಿಮಾಗಳ ಅನೌನ್ಸ್ ಮಾಡಿದ್ದಾರೆ. ಫಾದರ್, ಪಿಓಕೆ, ಶ್ರೀರಾಮಬಾಣ, ಡಾಗ್, ಕಬ್ಜ 2 ಸಿನಿಮಾಗಳನ್ನು ಆರ್.ಚಂದ್ರು ನಿನ್ನೆ (ಜ.23) ಘೋಷಣೆ ಮಾಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತ್ರವೇ ಅಲ್ಲದೆ ಬಾಲಿವುಡ್ ನಿರ್ಮಾಪಕ ಆನಂದ್ ಪಂಡಿತ್, ರಿಯಲ್ ಸ್ಟಾರ್ ಉಪೇಂದ್ರ (Upendra), ಡಾರ್ಲಿಂಗ್ ಕೃಷ್ಣ, ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ ಸುರೇಶ್, ಹೆಚ್.ಎಂ ರೇವಣ್ಣ, ನಿರ್ಮಾಪಕ ಜಾಕ್ ಮಂಜು ಅವರು ಹಾಜರಿದ್ದು, ಚಂದ್ರು ಅವರ ಪ್ರಯತ್ನಕ್ಕೆ ಶುಭಾಶಯ ಕೋರಿದ್ದಾರೆ.
ತಮ್ಮ ಬ್ಯಾನರ್ ಮೂಲಕ ಅನೌನ್ಸ್ ಮಾಡಿರೋ 5 ಸಿನಿಮಾಗಳಿಗೆ ಆರ್.ಚಂದ್ರು ಅವರು ಹೊಸಬರಿಗೆ ಅವಕಾಶ ನೀಡುತ್ತಿದ್ದಾರೆ. ಹೊಸ ನಿರ್ದೇಶಕರಿಗೆ ಡೈರೆಕ್ಷನ್ ಮಾಡುವ ಅವಕಾಶ ಕೊಡುತ್ತಿದ್ದಾರೆ. ಸದ್ಯ ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.