ಕಾಬೂಲ್: ಕಾಬೂಲ್‍ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಇದೀಗ ಸುರಕ್ಷಿತವಾಗಿದೆ ಮತ್ತು ವಿಮಾನ ಕಾರ್ಯಾಚರಣೆ ಮುಕ್ತವಾಗಿದೆ ಎಂದು ಅಮೆರಿಕ ಸೇನೆಯ ಮೇಜರ್ ಜನರಲ್ ವಿಲಿಯಂ ಹ್ಯಾಂಕ್ ಟೇಲರ್ ಹೇಳಿದ್ದಾರೆ.
Advertisement
ಸದ್ಯ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕದ 5,200ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಲಾಗಿದ್ದು, ವಿಮಾನ ನಿಲ್ದಾಣವು ಸುರಕ್ಷಿತವಾಗಿದೆ ಮತ್ತು ವಿಮಾನ ಕಾರ್ಯಾಚರಣೆ ಮುಕ್ತಗೊಳಿಸಲಾಗಿದೆ. ಆಗಸ್ಟ್ 14ರಿಂದ ಇಲ್ಲಿಯವರೆಗೂ ಸುಮಾರು 7 ಸಾವಿರ ಜನರನ್ನು ಸ್ಥಳಾಂತರಿಸಿದ್ದೇವೆ ಎಂದು ತಿಳಿಸಿದ್ದಾರೆ.
Advertisement
Advertisement
ನಾವು ಅಮೇರಿಕನ್ನರನ್ನು ಸುರಕ್ಷಿತವಾಗಿ ರಕ್ಷಿಸಲು ನಿರಂತರವಾಗಿ ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಈ ಗುರಿಯನ್ನು ತಲುಪಲು ನಮ್ಮ ಬಳಿ ಇರುವ ಎಲ್ಲಾ ಶಸ್ತ್ರಾಸ್ತ್ರ ಸಾಧನಗಳನ್ನು ಬಳಸುತ್ತಿದ್ದೇವೆ. ಎಷ್ಟು ಬೇಗ ಸಾಧ್ಯವಾಗುತ್ತದೆಯೋ ಅಷ್ಟು ಬೇಗ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ:ನೀನು ಮಹಿಳೆ ಉದ್ಯೋಗ ಮಾಡುವಂತಿಲ್ಲ, ಮನೆಗೆ ತೆರಳು – ಮಹಿಳಾ ಪತ್ರಕರ್ತೆಗೆ ಗೇಟ್‍ಪಾಸ್
Advertisement
ಕಾಬೂಲ್‍ನಲ್ಲಿರುವ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸುರಕ್ಷಿತವಾಗಿರಿಸಲು ಪ್ರಸ್ತುತ ಅಮೆರಿಕ ಸೇನೆ ಮುಖ್ಯ ಪಾತ್ರವಹಿಸುತ್ತಿದೆ. ಇದನ್ನೂ ಓದಿ:ಭಾರತೀಯ ರಾಯಭಾರ ಕಚೇರಿ ಮೇಲೆ ತಾಲಿಬಾನ್ ದಾಳಿ