ಕಾಬೂಲ್: ಅಫ್ಘಾನಿಸ್ತಾನದ (Afghanistan) ರಾಜಧಾನಿ ಕಾಬೂಲ್‍ನಲ್ಲಿ (Kabul) ಚೀನೀಯರ ವಸತಿ ಗೃಹದ ಮೇಲೆ ದಾಳಿ ನಡೆಸಿ ಮೂವರು ಗನ್‍ಮ್ಯಾನ್‍ಗಳನ್ನು ದಾಳಿಕೋರರು ಬಲಿ ಪಡೆದಿದ್ದಾರೆ. ಈ ಘಟನೆಯ ಬಳಿಕ ದಾಳಿಯ ಹೊಣೆಯನ್ನು ಐಸಿಸ್ (ISIS) ಹೊತ್ತುಕೊಂಡಿದೆ.
Advertisement
ಕಾಬೂಲ್‍ನ ಶಹರ್-ಇ ನಾವ್ ಪ್ರದೇಶದಲ್ಲಿ ಚೀನಾದ ಅತಿಥಿ ಗೃಹದ ಬಳಿ ಭಾರೀ ಸ್ಫೋಟ ಹಾಗೂ ಗುಂಡಿನ ದಾಳಿ ನಿನ್ನೆ ನಡೆದಿತ್ತು. ತಾಲಿಬಾನ್ ಅಪ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಚೀನಾದ ವ್ಯಾಪಾರಸ್ಥರು ಕಾಬೂಲ್‍ನ ಜನಪ್ರಿಯ ಲಾಂಹನ್ ಹೋಟೆಲ್‍ಗೆ ತೆರಳುತ್ತಾರೆ. ಹಾಗಾಗಿ ಹೋಟೆಲ್‍ಗೆ ದಾಳಿಕೋರರು ನುಗ್ಗಿ ಗುಂಡಿನ ಮಳೆ ಸುರಿಸಿದ್ದರು. ಶಸ್ತ್ರಾಸ್ತ್ರಗಳನ್ನು ಬ್ಯಾಗ್‍ನಲ್ಲಿ ತುಂಬಿ ಹೋಟೆಲ್ ಪ್ರವೇಶಿಸಿದ ದಾಳಿಕೋರರು ಏಕಾಏಕಿ ಗುಂಡಿನ ದಾಳಿ ಆರಂಭಿಸಿ ಮೂವರನ್ನು ಕೊಂದು ಸ್ಥಳದಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: 6 ಮದುವೆ, 54 ಮಕ್ಕಳಿಗೆ ತಂದೆಯಾದ ಪಾಕಿಸ್ತಾನಿ ವ್ಯಕ್ತಿ ಸಾವು
Advertisement
Struggle to survive – "Chinese Hotel" in Kabul pic.twitter.com/y90tm0YuXM
— Abu Muslim Shirzad (@MuslimShirzad) December 12, 2022
Advertisement
ದಾಳಿ ನಡೆಯುತ್ತಿದ್ದಂತೆ ಹೋಟೆಲ್‍ನ ಬಾಲ್ಕನಿಯಿಂದ ಹಾರಿ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಇಬ್ಬರು ವಿದೇಶಿಗರು ಗಾಯಗೊಂಡಿದ್ದಾರೆ. ಶಾಹರ್-ಎ-ನಾವ್ ಪ್ರದೇಶದಲ್ಲಿ ದಾಳಿಗೊಳಗಾದ ಹೋಟೆಲ್ ಬಳಿ ಇರುವ ಸ್ಥಳೀಯ ಆಸ್ಪತ್ರೆಗೆ 20ಕ್ಕೂ ಹೆಚ್ಚು ಮಂದಿ ಗಾಯಳುಗಳನ್ನು ದಾಖಲಿಸಲಾಗಿದ್ದು, 3 ಮಂದಿ ಮೃತಪಟ್ಟಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಇದನ್ನೂ ಓದಿ: ಕಾಬೂಲ್‌ನಲ್ಲಿ ಚೀನೀಯರ ಅತಿಥಿ ಗೃಹದ ಬಳಿ ಭಾರೀ ಸ್ಫೋಟ, ಗುಂಡಿನ ದಾಳಿ
Advertisement
ಚೀನಾದ ರಾಯಭಾರಿಯು ಅಫ್ಘಾನಿಸ್ತಾನದ ಉಪ ವಿದೇಶಾಂಗ ಸಚಿವರನ್ನು ಭೇಟಿಯಾಗಿ ಭದ್ರತೆ ಸಂಬಂಧಿತ ವಿಷಯಗಳ ಬಗ್ಗೆ ಒಂದು ದಿನದ ಹಿಂದೆ ಚರ್ಚಿಸಿದ್ದರು. ಅಲ್ಲದೇ ಅಘ್ಘಾನಿಸ್ತಾನದಲ್ಲಿರುವ ಚೀನಾದ ರಾಯಭಾರ ಕಚೇರಿಯ ರಕ್ಷಣೆಯ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬೇಕಾಗಿ ಮನವಿ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ದಾಳಿ ನಡೆದಿದೆ.