ಕಾಬೂಲ್: ಇಂದು ಬೆಳಗ್ಗೆ ಕಾಬೂಲ್ ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ ಐದು ರಾಕೆಟ್ ಗಳ ದಾಳಿ ನಡೆದಿದ್ದು, ಆದ್ರೆ ಈ ಯತ್ನ ವಿಫಲವಾಗಿದೆ ಎಂದು ಹೇಳಲಾಗುತ್ತಿದೆ. ಅಮೆರಿಕ ಸೇನೆ ಮಿಸೈಲ್ ಸಿಸ್ಟಂ (ರಾಕೆಟ್ ಉಡಾವಣೆ ಮಾಡುತ್ತಿದ್ದ ಕಾರ್)ನ್ನು ಸ್ಫೋಟಗೊಳಿಸಿದೆ.
Advertisement
ಐಸಿಸ್-ಕೆ ಉಗ್ರ ಸಂಘಟನೆ ಅಮೆರಿಕಾ ನಡೆಸಿದ ಏರ್ ಸ್ಟ್ರೈಕ್ ಗೆ ಪ್ರತ್ಯುತ್ತರ ನಡೆಸಲು ಈ ರಾಕೆಟ್ ದಾಳಿ ನಡೆಸಿದೆ ಎನ್ನಲಾಗಿದೆ. ಭಾನುವಾರ ಸಹ ಕಾಬೂಲ್ ವಿಮಾನ ನಿಲ್ದಾಣದ ಬಳಿಯ ಜನವಸತಿ ಪ್ರದೇಶದ ಮೇಲೆ ರಾಕೆಟ್ ಬಿದ್ದು ಸ್ಫೋಟಗೊಂಡಿತ್ತು. ಅಮೆರಿಕ ಸೇನಾ ತುಕಡಿಯನ್ನು ಗುರಿಯಾಗಿಸಿಯೇ ಈ ದಾಳಿ ನಡೆದಿತ್ತು. ಆದ್ರೆ ಗುರಿ ತಪ್ಪಿದ ರಾಕೆಟ್ ಜನವಸತಿ ಪ್ರದೇಶದ ಮೇಲೆ ಪತನಗೊಂಡಿತ್ತು. ಸದ್ಯ ಕಾಬೂಲ್ ಏರ್ ಪೋರ್ಟ್ ಮೇಲಿನ ದಾಳಿ ನಡೆಸಿದ ಕಾರ್ ಫೋಟೋಗಳು ಹೊರ ಬಂದಿವೆ.
Advertisement
Advertisement
ಸೋಮವಾರ ಬೆಳಗ್ಗೆ ಕಾಬೂಲ್‍ನ ಸಲೀಂ ಕರ್ವಾನ್ ಬಳಿ ರಾಕೆಟ್ ದಾಳಿ ನಡೆಸಲಾಗಿದ್ದು, ಜೊತೆಗೆ ಗುಂಡಿನ ದಾಳಿ ಕೂಡ ನಡೆಸಲಾಗಿದೆ. ಆದರೆ ಘಟನೆ ವೇಳೆ ಗುಂಡು ಹಾರಿಸಿದವರು ಯಾರು ಎಂಬುದರ ಬಗ್ಗೆ ಪತ್ತೆಯಾಗಿಲ್ಲ. ಅಲ್ಲದೇ 3 ಬಾರಿ ಸ್ಫೋಟಗೊಂಡ ಶಬ್ಧ ಮತ್ತು ಆಕಾಶದಲ್ಲಿ ಏನೋ ಮಿಂಚಿದಂತೆ ಕಂಡಿದೆ. ಈ ಸ್ಫೋಟಗಳ ನಂತರ ಜನರು ಸ್ಥಳ ತೊರೆದು ಹೋಗಿರುವುದಾಗಿ ಎಂದು ಅಲ್ಲಿನ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಾಬೂಲ್ ಏರ್ ಪೋರ್ಟ್ ಬಳಿ ಐಸಿಸ್-ಕೆ ರಾಕೆಟ್ ದಾಳಿ – ಇಬ್ಬರ ಸಾವು.
Advertisement
ರಾಕೆಟ್ ದಾಳಿಯನ್ನು ವಿಫಲಗೊಸುವಲ್ಲಿ ನಮ್ಮ ಸೇನೆ ಯಶಸ್ವಿಯಾಗಿದೆ ಎಂದು ಶ್ವೇತ ಭವನ ಅಧಿಕೃತ ಹೇಳಿಕೆ ನೀಡಿದೆ. ದಾಳಿಯ ಎಚ್ಚರಿಕೆಯನ್ನು ಮೊದಲೇ ನೀಡಿ, ಅಫ್ಘಾನಿಸ್ತಾನದಲ್ಲಿರುವ ಅಮೆರಿಕನ್ನರಿಗೆ ವಿಮಾನ ನಿಲ್ದಾಣದತ್ತ ಬರಬಾರದು ಎಂದು ಸಂದೇಶ ರವಾನಿಸಿತ್ತು. ಗುರುವಾರ ನಡೆದ ದಾಳಿಯಲ್ಲಿ 13 ಸೈನಿಕರು ಸೇರಿದಂತೆ 170 ಜನರು ಸಾವನ್ನಪ್ಪಿದ್ದರು. ಇದನ್ನೂ ಓದಿ: ತಾಲಿಬಾನಿಗಳ ಹೊಸ ಆದೇಶ- ಹುಡುಗ, ಹುಡುಗಿ ಜೊತೆಯಾಗಿ ಓದುವಂತಿಲ್ಲ