ಕಾಬೂಲ್: ಕಾಬೂಲ್ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮೇಲೆ ಸೋಮವಾರ 5 ರಾಕೆಟ್ ದಾಳಿ ನಡೆಸಲಾಗಿದ್ದು, ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲಾದ ವಾಯು ರಕ್ಷಣಾ ವ್ಯವಸ್ಥೆ ಈ ರಾಕೆಟ್‍ಗಳನ್ನು ಹಿಮ್ಮೆಟಿಸಿದೆ.
Advertisement
ಸೋಮವಾರ ಬೆಳಗ್ಗೆ ಕಾಬೂಲ್‍ನ ಸಲೀಂ ಕರ್ವಾನ್ ಬಳಿ ರಾಕೆಟ್ ದಾಳಿ ನಡೆಸಲಾಗಿದ್ದು, ಜೊತೆಗೆ ಗುಂಡಿನ ದಾಳಿ ಕೂಡ ನಡೆಸಲಾಗಿದೆ. ಆದರೆ ಘಟನೆ ವೇಳೆ ಗುಂಡು ಹಾರಿಸಿದವರು ಯಾರು ಎಂಬುದರ ಬಗ್ಗೆ ಪತ್ತೆಯಾಗಿಲ್ಲ. ಅಲ್ಲದೇ 3 ಬಾರಿ ಸ್ಫೋಟಗೊಂಡ ಶಬ್ಧ ಮತ್ತು ಆಕಾಶದಲ್ಲಿ ಏನೋ ಮಿಂಚಿದಂತೆ ಕಂಡಿದೆ. ಈ ಸ್ಫೋಟಗಳ ನಂತರ ಜನರು ಸ್ಥಳ ತೊರೆದು ಹೋಗಿರುವುದಾಗಿ ಎಂದು ಅಲ್ಲಿನ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದನ್ನೂ ಓದಿ:ಒಂದು ವರ್ಷದಿಂದ ಇವರು ಬಾಯಿ ಮುಚ್ಚಿದ್ರು: ಡಿಕೆಶಿ ವಿರುದ್ಧ ಅನಿಲ್ ಬೆನಕೆ ವಾಗ್ದಾಳಿ
Advertisement
#AFG At least two rockets were fired from Kabul’s Laab-E Jaar at 6:40 AM towards Hamid Karzai international airport. Residents in Arya township tells me, shrapnel’s landed on rooftops of the township. pic.twitter.com/9RxkbCEjZx
— BILAL SARWARY (@bsarwary) August 30, 2021
Advertisement
ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಭಯೋತ್ಪಾದಕರಿಗೆ ದಾಳಿ ನಡೆಸುವ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ, ಸ್ಫೋಟಕ ತುಂಬಿದ ವಾಹನವನ್ನು ಧ್ವಂಸಗೊಳಿಸಿದ ಬಳಿಕ ಇದೀಗ ಮತ್ತೆ ಈ ಘಟನೆ ನಡೆದಿದೆ. ಅಲ್ಲದೇ ಘಟನೆ ಕುರಿತಂತೆ ಅಫ್ಘಾನಿಸ್ತಾನದ ಪತ್ರಕರ್ತರೊಬ್ಬರು ಕಾಬೂಲ್‍ನ ಲಾಬ್ ಇ ಜಾರ್‍ನಿಂದ ಬೆಳಗ್ಗೆ 6:40ಕ್ಕೆ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನದ ಕಡೆಗೆ ಎರಡು ರಾಕೆಟ್ ದಾಳಿ ನಡೆಸಲಾಗಿದೆ ಎಂದಿದ್ದಾರೆ.ಇದನ್ನೂ ಓದಿ:ನಟಿ ಸೋನಿಯಾ ಮನೆ ಮೇಲೆ ದಾಳಿ – ರಾಜಕಾರಣಿಗಳ ಮಕ್ಕಳಿಗೆ ಶಾಕ್
Advertisement