ಕಾಬೂಲ್: ಅಫ್ಘಾನಿಸ್ತಾನ ರಾಜಧಾನಿ ತಾಲಿಬಾನಿಗಳ ವಶವಾಗುತ್ತಿದ್ದಂತೆ ಆರ್ಥಿಕ ಚಟುವಟಿಕೆಗಳ ಮೇಲೆ ನೇರ ಪರಿಣಾಮ ಬೀರಿದೆ. ದೇಶ ತೊರೆಯಲು ಮುಂದಾಗಿ ಕಾಬೂಲ್ ವಿಮಾನನಿಲ್ದಾಣ ತಲುಪಿರುವ ಜನರಿಗೆ ಮೂರು ಸಾವಿರ ರೂಪಾಯಿ ನೀಡಿ ಒಂದು ಬಾಟೆಲ್ ನೀರು ಖರೀದಿಸುವ ಕಠಿಣ ಪರಿಸ್ಥಿತಿ ಎದುರಾಗಿದೆ. ಇತ್ತ ಒಂದು ಪ್ಲೇಟ್ ರೈಸ್‍ಗೆ 7,500 ರೂ. ನೀಡಲಾಗುತ್ತಿದೆ. ಹೇಗಾದ್ರೂ ಮಾಡಿ ಇಲ್ಲಿಂದ ಹೋದ್ರೆ ಸಾಕು ಅಂತಿರುವ ಜನರು ಅನಿವಾರ್ಯವಾಗಿ ಇಷ್ಟು ಹಣ ನೀಡಿ ಅನ್ನಾಹಾರ ಖರೀದಿಸುತ್ತಿದ್ದಾರೆ. ಆದ್ರೆ ಮಧ್ಯಮ ವರ್ಗದ ಜನರ ಸ್ಥಿತಿ ಆ ದೇವರಿಗೆ ಪ್ರೀತಿ ಎಂಬಂತಾಗಿದೆ.
Advertisement
ಈ ರೀತಿಯ ಕಷ್ಟಗಳು ಎದುರಾದ್ರೂ ಜನ ಮತ್ತೆ ತಮ್ಮ ಮನೆಗಳಿಗೆ ಹಿಂದಿರುಗುವ ಬಗ್ಗೆ ಆಲೋಚನೆಯೂ ಮಾಡುತ್ತಿಲ್ಲ. ಮತ್ತೊಂದು ಕಡೆ ವಿಮಾನ ಏರುವ ತಮ್ಮ ಸರದಿಗಾಗಿ ಕಾಯುತ್ತಿರುವ ಜನರ ಸಹಾಯಕ್ಕೆ ಅಮೆರಿಕ ಸೈನಿಕರು ಮುಂದಾಗಿದ್ದು, ಆಹಾರದ ಪೊಟ್ಟಣಗಳನ್ನು ವಿತರಿಸುತ್ತಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದ ಹೊರಗಡೆ ನೀರು ಮತ್ತು ಆಹಾರ ಮಾರಾಟ ಮಾಡಲಾಗುತ್ತಿದೆ. ಆರ್ಥಿಕವಾಗಿ ಸಶಕ್ತರಾಗಿರುವವರು ಹಣ ನೀಡಿ ಖರೀದಿಸುತ್ತಿದ್ದಾರೆ.
Advertisement
Advertisement
ಇನ್ನು ಕೆಲ ಮಾರಾಟಗಾರರು ಡಾಲರ್ ನೀಡಿದ್ರೆ ಮಾತ್ರ ಆಹಾರ ನೀಡುತ್ತಿದ್ದಾರೆ. ಕೆಲವರು ಆಹಾರವಿಲ್ಲದೇ ಕುಳಿತಲ್ಲಿಯೇ ಕುಸಿದು ಬೀಳುತ್ತಿರುವ ಬಗ್ಗೆ ವರದಿಯಾಗಿವೆ. ದೇಶವನ್ನು ವಶಕ್ಕೆ ಪಡೆದ ತಾಲಿಬಾನಿಗಳು ಪ್ರಜೆಗಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಅಮ್ಮನಿಂದ ದೂರವಾದ ಕಂದಮ್ಮನನ್ನ ರಕ್ಷಿಸಿದ ಟರ್ಕಿ ಸೈನಿಕರು
Advertisement
ತಾಲಿಬಾನಿಗಳು ಕಾಬೂಲ್ ವಶಕ್ಕೆ ಪಡೆದ ನಂತರ ಸುಮಾರು 75,900 ಜನರನ್ನು ಏರ್ ಲಿಫ್ಟ್ ಮಾಡಲಾಗಿದೆ. ಇದರಲ್ಲಿ ಅಮೆರಿಕ 70,700 ಜನರನ್ನು ರಕ್ಷಣೆ ಮಾಡಿದೆ. ಕಾಬೂಲ್ ವಿಮಾನ ನಿಲ್ದಾಣದತ್ತ ಬರುವ ಜನರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿಲ್ಲ. ಇನ್ನು ಸುಮಾರು 2 ಲಕ್ಷಕ್ಕೂ ಅಧಿಕ ಜನರು ಅಫ್ಘಾನಿಸ್ತಾನಕ್ಕೆ ಗುಡ್ ಬೈ ಹೇಳಲು ಸಿದ್ಧರಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಪಂಜಶೀರ್ ವಶಕ್ಕೆ ಮುಂದಾಗಿದ್ದ 300 ತಾಲಿಬಾನಿಗಳು ಮಟಾಷ್!