ಕಾಬುಲ್: ಅಫ್ಘಾನಿಸ್ತಾನದ ಕಾಬುಲ್‍ನಲ್ಲಿ ಇಂದು ಬೆಳಿಗ್ಗೆ ಪ್ರಬಲ ಕಾರ್ ಬಾಂಬ್ ಸ್ಫೋಟ ನಡೆದಿದೆ. ಘಟನೆಯಲ್ಲಿ 65 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಗಾಯಾಳುಗಳನ್ನು ಕಾಬುಲ್‍ನ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇಲ್ಲಿನ ಪ್ರೆಸಿಡೆನ್ಶಿಯಲ್ ಪ್ಯಾಲೇಸ್ ಹಾಗೂ ವಿವಿಧ ದೇಶಗಳ ರಾಯಭಾರ ಕಚೇರಿಗಳ ಪ್ರದೇಶದಲ್ಲಿಯೇ ಬಾಂಬ್ ಸ್ಫೋಟವಾಗಿದೆ.
Advertisement
ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಈ ಬಗ್ಗೆ ಟ್ವೀಟ್ ಮಾಡಿದ್ದು, ದೇವರ ದಯದಿಂದ ಕಾಬುಲ್‍ನಲ್ಲಿ ನಡೆದ ಸ್ಫೋಟದಲ್ಲಿ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.
Advertisement
ಭಾರತೀಯ ರಾಯಭಾರ ಕಚೇರಿಯ ಕಟ್ಟಡದ ಕಿಟಕಿಗಳಿಗೆ ಹಾನಿಯಾಗಿದೆ ಎಂದು ದೆಹಲಿಯ ವಿದೇಶಾಂಗ ವ್ಯವಹಾರ ಸಚಿವಾಲಯದ ಮೂಲಗಳು ತಿಳಿಸಿವೆ.
Advertisement
ಸದ್ಯ ಯೂರೋಪ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕಾಬುಲ್‍ನಲ್ಲಿ ನಡೆದ ಬಾಂಬ್ ಸ್ಫೋಟವನ್ನು ಖಂಡಿಸಿದ್ದಾರೆ. ಉಗ್ರತ್ವವನ್ನು ಬೆಂಬಲಿಸುವ ಶಕ್ತಿಗಳನ್ನ ಮಣಿಸಬೇಕು ಎಂದಿದ್ದಾರೆ.
Advertisement
By God's grace, Indian Embassy staff are safe in the massive #Kabul blast.
— Sushma Swaraj (@SushmaSwaraj) May 31, 2017
#UPDATE Afghanistan Ministry of Health confirms 65 dead, & 325 wounded in #Kabul blast: Afghan media
— ANI (@ANI_news) May 31, 2017
Pictures of immediate aftermath of Kabul explosion, Afghan Health Ministry says 60 people wounded so far. pic.twitter.com/Jxjl6JTIIk
— ANI (@ANI_news) May 31, 2017
We strongly condemn the terrorist blast in Kabul. Our thoughts are with the families of the deceased & prayers with the injured.
— Narendra Modi (@narendramodi) May 31, 2017
India stands with Afghanistan in fighting all types of terrorism. Forces supporting terrorism need to be defeated.
— Narendra Modi (@narendramodi) May 31, 2017
#KabulExplosion – A plume of smoke rises over #Kabul city after a massive explosion rocked the city early Wednesday #Afghanistan pic.twitter.com/knlGxEHbuk
— TOLOnews (@TOLOnews) May 31, 2017
#KabulExplosion – substantial damage was sustained to buildings in Wednesday’s explosion near Zanbaq Square in downtown #Kabul pic.twitter.com/DiXcHoi8z7
— TOLOnews (@TOLOnews) May 31, 2017