ಮುಂಬೈ: ಶಾಹಿದ್ ಕಪೂರ್ ಮತ್ತು ಕಿಯಾರ ಅದ್ವಾನಿ ನಟನೆಯ ಕಬೀರ್ ಸಿಂಗ್ ಸಿನಿಮಾ 200 ಕೋಟಿ ರೂ. ಗಳಿಗೆ ಬಾಲಿವುಡ್‍ನಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಎ ಸರ್ಟಿಫಿಕೇಟ್ ಪಡೆದ ಚಿತ್ರ ಮೊದಲ ಬಾರಿಗೆ 200 ಕೋಟಿ ಸಿನಿಮಾಗಳ ಕ್ಲಬ್ ಸೇರಿದೆ.
ಚಿತ್ರ ಬಿಡುಗಡೆಗೊಂಡ ಎರಡನೇ ವಾರ ಸಹ ಕಬೀರ್ ಸಿಂಗ್ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಕರೆ ತರುವಲ್ಲಿ ಯಶಸ್ವಿಯಾಗಿದ್ದಾನೆ. ವಿಕ್ಕಿ ಕೌಶಲ್ ಅಭಿನಯದ ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಮತ್ತು ಸಲ್ಮಾನ್ ಖಾನ್ ನಟನೆಯ ಭಾರತ್ ಸಿನಿಮಾವನ್ನು ಮೂರನೇ ವಾರದಲ್ಲಿ ಕಬೀರ್ ಸಿಂಗ್ ಹಿಂದಿಕ್ಕಿದೆ.
Advertisement
Everyone’s guesstimating the *lifetime biz* of #KabirSingh… ₹ 250 cr? ₹ 275 cr? ₹ 300 cr? Maybe more?… #KabirSingh continues to surprise every single day, so it’s pointless arriving at a number right now… The sky is the limit, that’s all I can say at the moment.
— taran adarsh (@taran_adarsh) July 2, 2019
Advertisement
ಸಂದೀಪ್ ವಂಗಾ ರೆಡ್ಡಿ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದ್ದು, ಶಾಹಿದ್ ಕಪೂರ್ ಮತ್ತು ಕಿಯಾರಾ ಕೆಮಿಸ್ಟ್ರಿ ವರ್ಕೌಟ್ ಆಗಿದೆ. ಚಿತ್ರದಲ್ಲಿ ಶಾಹಿದ್ ಮತ್ತು ಕಿಯಾರಾ ವೈದ್ಯಕೀಯ ವಿದ್ಯಾರ್ಥಿಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಯುವ ಸಮುದಾಯದ ಕಥೆಯನ್ನು ಒಳಗೊಂಡಿದೆ. ಹೀಗಾಗಿ ಯುವ ಜನತೆಯನ್ನು ಚಿತ್ರಮಂದಿರಗಳತ್ತ ಸೆಳೆಯುವಲ್ಲಿ ಸಿನಿಮಾ ಸಕ್ಸಸ್ ಕಂಡಿದೆ.
Advertisement
#KabirSingh continues to sparkle… Occupancy/footfalls on [second] Tue indicates it’s poised for a fantastic Week 2 total [₹ 80 cr +/-]… Will set a new benchmark today [Wed]: First *A-certified* #Hindi film to cross ₹ 200 cr mark.
— taran adarsh (@taran_adarsh) July 3, 2019
Advertisement
2017ರಲ್ಲಿ ತೆಲುಗಿನಲ್ಲಿ ಬಿಡುಗಡೆಗೊಂಡಿದ್ದ ‘ಅರ್ಜುನ್ ರೆಡ್ಡಿ’ ಸಿನಿಮಾದ ರಿಮೇಕ್ ಚಿತ್ರವೇ ಕಬೀರ್ ಸಿಂಗ್. ತೆಲುಗಿನಲ್ಲಿಯೂ ಆ್ಯಕ್ಷನ್ ಕಟ್ ಹೇಳಿದ್ದ ಸಂದೀಪ್ ವಂಗಾ ರೆಡ್ಡಿ ಇಲ್ಲಿಯೂ ನಿರ್ದೇಶನ ಮಾಡಿದ್ದಾರೆ. ತೆಲುಗಿನಲ್ಲಿ ವಿಜಯ್ ದೇವರಕೊಂಡ ಮತ್ತು ಶಾಲಿನಿ ಪಾಂಡ್ಯ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದರು. ನಟ ವಿಜಯ್ ದೇವರಕೊಂಡಗೆ ಅರ್ಜುನ್ ರೆಡ್ಡಿ ಸಿನಿಮಾ ಟಾಲಿವುಡ್ ನಲ್ಲಿ ಭದ್ರ ಬುನಾದಿಯನ್ನೇ ಹಾಕಿದೆ.