ಮೈಸೂರು: ಭರ್ತಿಯಾದ ಜಲಾಶಯ ಬಾಗಿನ ಅರ್ಪಿಸುವ ಮುನ್ನವೇ ಖಾಲಿಯಾಗುತ್ತಿದೆ. 15 ದಿನಗಳ ಹಿಂದೆಯಷ್ಟೆ ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನ ಕಬಿನಿ ಜಲಾಶಯ (Kabini Dam) ಭರ್ತಿಯಾಗಿತ್ತು. ಇದೀಗ ಜಲಾಶಯದಲ್ಲಿ 5.5 ಅಡಿಯಷ್ಟು ನೀರು ಖಾಲಿಯಾಗಿದೆ.
ಕಳೆದ 15 ದಿನಗಳ ಹಿಂದೆಯಷ್ಟೆ ಜಲಾಶಯ ಭರ್ತಿಯಾಗಿತ್ತು. ಜಲಾಶಯ ಭರ್ತಿಯಾದಾಗ ರಾಜ್ಯ ಸಿಎಂ ಬಾಗಿನ ಅರ್ಪಿಸುವುದು ಸಂಪ್ರದಾಯ. ಆದ್ರೆ ಬಾಗಿನ ಸಮರ್ಪಣೆ ಆಗಿರಲಿಲ್ಲ, ಇದೀಗ ಜಲಾಶಯದಿಂದ ತಮಿಳುನಾಡಿಗೆ ನೀರು (TamilNadu Water) ಹರಿಸುತ್ತಿರುವುದರಿಂದ 5.5 ಅಡಿಯಷ್ಟು ನೀರು ಖಾಲಿಯಾಗಿದೆ. ಇದನ್ನೂ ಓದಿ: ನಮ್ಮ ಸಿದ್ಧಾಂತ ಒಪ್ಪಿ ಬರುವವರನ್ನ ನಾವು ಸ್ವಾಗತ ಮಾಡುತ್ತೇವೆ: ಜಿ.ಪರಮೇಶ್ವರ್
2,284 ಅಡಿ ಗರಿಷ್ಠಮಟ್ಟ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ 78.50 ಅಡಿಯಷ್ಟು ನೀರಿದೆ. ಜಲಾಶಯದಿಂದ ಪ್ರತಿ ದಿನ ನದಿಗೆ 5,000 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಇದನ್ನೂ ಓದಿ: ಮೊದಲ ಓವರ್‌ನಲ್ಲೇ 2 ವಿಕೆಟ್ ಉಡೀಸ್ – 11 ತಿಂಗಳ ಬಳಿಕ ಎಂಟ್ರಿ ಕೊಟ್ಟು ಭಾರತಕ್ಕೆ ಜಯ ತಂದ ಬುಮ್ರಾ
ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಜುಲೈ ತಿಂಗಳಲ್ಲೇ ಕೆಆರ್‌ಎಸ್ ಕಬಿನಿ ಜಲಾಶಯಕ್ಕೆ ಬಾಗೀನ ಅರ್ಪಿಸಿದ್ದರು. 8 ತಿಂಗಳ ಅವಧಿಯಲ್ಲೇ ಬಾಗೀನ ಅರ್ಪಣೆ ಮಾಡಿದ್ದರು. ಆದ್ರೆ ಈ ಬಾರಿ ಮುಂಗಾರು ತಡವಾಗಿ ಆರಂಭವಾದರೂ ಸಿಎಂ ಇನ್ನೂ ಬಾಗಿನ ಅರ್ಪಿಸಿಲ್ಲ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]