ಕೊನೆಗೂ ಮದುವೆ ಹುಡುಗಿ ಬಗ್ಗೆ ಮೌನ ಮುರಿದ ‘ಕಾಟೇರ’ ನಿರ್ದೇಶಕ

Public TV
2 Min Read
Tharun Sudhir 1

ರಾಬರ್ಟ್, ಕಾಟೇರ ಸಿನಿಮಾಗಳ ನಿರ್ದೇಶಕ ತರುಣ್ ಸುಧೀರ್ (Tharun Sudhir) ಇದೀಗ ಸೋನಲ್ (Sonal) ಜೊತೆಗಿನ ಮದುವೆ ವಿಚಾರವಾಗಿ ಸುದ್ದಿಯಾಗ್ತಿದ್ದಾರೆ. ಈಗ ಮೊದಲ ಬಾರಿಗೆ ಮದುವೆಯಾಗಲಿರುವ (Wedding) ಹುಡುಗಿ ಕ್ವಾಲಿಟಿ ಹೇಗಿರಬೇಕು ಎಂದು ಬಣ್ಣಿಸಿದ್ದಾರೆ.

Tharun Sudhir 2

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ತರುಣ್ ಸುಧೀರ್ ಭಾಗಿಯಾದಾಗ ಮದುವೆ ಹುಡುಗಿ ಹೇಗಿರಬೇಕು ಎಂದು ಪ್ರಶ್ನೆ ಎದುರಾಗಿದೆ. ಆಗ ತಾವು ಮದುವೆಯಾಗುವ ಹುಡುಗಿ ಹೇಗಿರಬೇಕು ಎಂದು ಹೇಳಿದ್ದಾರೆ. ನನಗೆ ಮದುವೆ ಆಗಬಾರದು ಅಂತೇನೂ ಇಲ್ಲ. ಇದರ ಕುರಿತು ಡಿಸಿಷನ್ ನಾನು ಮಾಡಿಲ್ಲ ಎನ್ನುತ್ತಲೇ ನಾನು ಇಷ್ಟಪಟ್ಟಂಥ ಹುಡುಗಿ ಸಿಕ್ಕಿರೆ ಖಂಡಿತವಾಗಿಯೂ ಮದುವೆಗೆ ರೆಡಿ ಎಂದಿದ್ದಾರೆ.

Tharun Sudhir

ಕನಸಿನ ಹುಡುಗಿಯಲ್ಲಿ ಎರಡೇ ಕ್ವಾಲಿಟಿ ಇದ್ದರೆ ಸಾಕು. ಮೊದಲನೆಯದ್ದು ತಮ್ಮ ಕೆಲಸವನ್ನು ಗೌರವಿಸಬೇಕು. ಇನ್ನೊಂದು ನನಗೆ ಅಮ್ಮನೇ ಎಲ್ಲ. ಆದ್ದರಿಂದ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇಷ್ಟು ಇದ್ದರೆ ಸಾಕು. ಅಂಥ ಹುಡುಗಿಯನ್ನು ನಾನು ಮದುವೆಯಾಗುತ್ತೇನೆ. ಬೇಕಿದ್ದರೆ ನಾಲ್ಕು ಗೋಡೆಗಳ ನಡುವೆ ಕಾಲು ಹಿಡಿದುಕೊಳ್ಳಲೂ ರೆಡಿ ಎಂದು ತಮಾಷೆ ಮಾಡಿದ್ದಾರೆ ತರುಣ್ ಸುಧೀರ್. ಆದರೆ ಎಲ್ಲೂ ಸೋನಾಲ್ ಹೆಸರು ಬಳಸದೇ ಮಾತನಾಡಿದ್ದಾರೆ.

sonal 1ಅಂದಹಾಗೆ, ತರುಣ್ ಸುಧೀರ್ ಶೀಘ್ರದಲ್ಲೇ ಮದುವೆಯಾಗುತ್ತಿದ್ದಾರೆ. ನಟಿ ಸೋನಾಲ್ ಜೊತೆ ತರುಣ್ ಕಲ್ಯಾಣ ನಡೆಯುತ್ತಿದೆ. ಖುಷಿ ಸುದ್ದಿ ಸದ್ಯದಲ್ಲೇ ಕೊಡ್ತೀವಿ ಎಂದು ಮಾಲತಿ ಸುಧೀರ್ ‘ಪಬ್ಲಿಕ್ ಟಿವಿ’ ಜೊತೆ ಹಂಚಿಕೊಂಡಿದ್ದಾರೆ. ಮಗನ ಮದುವೆ ದಿನಾಂಕ ಫಿಕ್ಸ್ ಆಗಿಲ್ಲ. ಆಷಾಢ ಮಾಸ ಅಲ್ವಾ? ಕನ್ಫರ್ಮ್ ಆದ್ಮೇಲೆ ಹೇಳ್ತೀವಿ ಎಂದಿದ್ದಾರೆ. ಮದುವೆ ಛತ್ರಗಳು ಅಷ್ಟು ಬೇಗ ಸಿಕ್ತಿಲ್ಲ. ಮಗನ ಕೈಲಿ ಸದ್ಯ ಜಾಸ್ತಿ ಪ್ರಾಜೆಕ್ಟ್ ಇದೆ. ಅದೆಲ್ಲಾ ನೋಡ್ಕೊಂಡು ಮದುವೆ ಮಾಡಿಕೊಳ್ತಾರೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ತಮಿಳಿನತ್ತ ನಟಿ- ಶಶಿಕುಮಾರ್‌ಗೆ ಚೈತ್ರಾ ಆಚಾರ್ ನಾಯಕಿ

ನಾನೇ ಸರಿಯಾಗಿ ಇನ್ನೂ ಆ ಹುಡ್ಗಿನಾ ನೋಡಿಲ್ಲ. ಮನೆಯವರೆಲ್ಲಾ ಕೂತು ಮಾತಾಡಬೇಕು. ಛತ್ರ ಬುಕ್ ಆದ್ಮೇಲೆ ನಾವೇ ಮಾತಾಡ್ತೀವಿ ಎಂದು ತರುಣ್ ಮತ್ತು ಸೋನಾಲ್ ಮದುವೆ ಸುದ್ದಿಯನ್ನು ಅಧಿಕೃತವಾಗಿ ಖಾತ್ರಿ ಮಾಡಿದ್ದಾರೆ ಮಾಲತಿ ಸುಧೀರ್.

ಚೌಕ, ರಾಬರ್ಟ್, ಕಾಟೇರ ಸಿನಿಮಾದ ಸಕ್ಸಸ್ ನಂತರ ತರುಣ್ ಹೊಸ ಸಿನಿಮಾದ ತಯಾರಿಯಲ್ಲಿದ್ದಾರೆ. ಇದರ ನಡುವೆ ತರುಣ್ ಶೋವೊಂದರ ಜಡ್ಜ್ ಆಗಿದ್ದಾರೆ. ಎಂಎಲ್‌ಎ, ಮದುವೆ ದಿಬ್ಬಣ, ರಾಬರ್ಟ್, ಗರಡಿ, ಶುಗರ್ ಫ್ಯಾಕ್ಟರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸೋನಾಲ್ ನಟಿಸಿದ್ದಾರೆ.

Share This Article