ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ವಿಜಯಲಕ್ಷ್ಮಿ (Vijayalakshmi) ಭೇಟಿ ನೀಡಿದ್ದು, ದರ್ಶನ್ (Darshan) ಬಿಡುಗಡೆಗಾಗಿ ಚಂಡಿಕಾ ಯಾಗ ಮಾಡಿಸಿದ್ದಾರೆ. ಮುಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ದರ್ಶನ್ ಬಿಡುಗಡೆಗೆ ಕೊಲ್ಲೂರು ದೇವಿಯ ಮೊರೆ ಹೋದ ವಿಜಯಲಕ್ಷ್ಮಿ
ಪತಿ ಸಂಕಷ್ಟ ನಿವಾರಣೆಗೆ ದೇವರ ಮೊರೆ ಹೋಗಿದ್ದಾರೆ. ಕಾನೂನು ಸಂಕೋಲೆಯಿಂದ ದರ್ಶನ್ ಹೊರಬರುವಂತೆ ನರಸಿಂಹ ಅಡಿಗ ನೇತೃತ್ವದಲ್ಲಿ ವಿಜಯಲಕ್ಷ್ಮಿ ಚಂಡಿಕಾ ಯಾಗ ಮಾಡಿಸಿದ್ದಾರೆ. ಪೂರ್ಣಾಹುತಿ ನಂತರ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದಾರೆ. ಬಳಿಕ ಮೂಕಾಂಬಿಕೆಗೆ ರೇಷ್ಮೆ ಸೀರೆ, ಫಲ ಪುಷ್ಪ ಸಲ್ಲಿಸಿದ್ದಾರೆ.
ಅಂದಹಾಗೆ, ಚಂಡಿಕಾ ಪೂಜೆ ಮಾಡಿಸಲು ವಿಜಯಲಕ್ಷ್ಮಿ ಗುರುವಾರ (ಜು.25) ರಾತ್ರಿಯೇ ಕೊಲ್ಲೂರಿಗೆ ಬಂದಿದ್ದರು.