ಕಾಣದಂತೆ ಮಾಯಾವಾದನು ಸಿನಿಮಾದ ಟೈಟಲ್ ಕೇಳಿದಾಕ್ಷಣ ಪುನೀತ್ ರಾಜ್‍ಕುಮಾರ್ ಬಾಲ ನಟನಾಗಿ ನಟಿಸಿದ್ದ ‘ಚಲಿಸುವ ಮೋಡಗಳು’ ಸಿನಿಮಾ ನೆನಪಾಗುತ್ತೆ. ಆ ಸಿನಿಮಾದಲ್ಲಿ ಕಾಣದಂತೆ ಮಾಯಾವಾದನು, ನಮ್ಮ ಶಿವ ಕೈಲಾಸ ಸೇರಿಕೊಂಡನು ಅನ್ನೋ ಹಾಡು ಈಗಲೂ ಚಾಲ್ತಿಯಲ್ಲಿದೆ. ಆ ಹಾಡಿನ ಒಂದು ಎಳೆಯನ್ನೇ ಸಿನಿಮಾದ ಶೀರ್ಷಿಕೆ ಮಾಡಿರುವುದು ವಿಶೇಷ. ಸಿನಿಮಾಗೆ ಹಾರಾರ್ ಟಚ್ ಇದ್ರು ಕೂಡ ಫೆಂಟಾಸ್ಟಿಕ್ ಲವ್ ಸ್ಟೋರಿ ಇದೆ. ಹಿಂದೆಂದೂ ಈ ರೀತಿಯ ಕಥೆಯನ್ನ ನೋಡಿಲ್ಲ ಎಂಬ ಫೀಲ್ ಈಗಾಗಲೇ ಟ್ರೇಲರ್ ನೋಡಿದವರಿಗೆ ಅನ್ನಿಸಿದೆ. ಇದೀಗ ಸಿನಿಮಾದ ಲಿರಿಕಲ್ ಸಾಂಗ್ ರಿಲೀಸ್ ಆಗಿದ್ದು, ಎಲ್ಲರ ಮನಸ್ಸನ್ನು ತಣಿಸುವಂತಿದೆ. ‘ಕೊನೆಯಿರದಂತ ಪ್ರೀತಿಗೆ’ ಹಾಡು ಮತ್ತೆ ಮತ್ತೆ ಕೇಳಬೇಕೆನ್ನಿಸುತ್ತಿದೆ. ಅನಿರುದ್ಧ್ ಶಾಸ್ತ್ರಿ ಬರೆದಿರುವ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ.
Advertisement
ಸಿನಿಮಾ ಆರಂಭವಾದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡುತ್ತಿದೆ. ಸಿನಿಮಾದ ಟೈಟಲ್ ಕೊಟ್ಟು ಇದಕ್ಕೊಂದು ಟ್ಯಾಗ್‍ಲೈನ್ ಕೊಟ್ಟವರಿಗೊಂದು ಬಹುಮಾನ ಅಂತ ಚಿತ್ರತಂಡ ಪ್ರಚಾರ ಮಾಡಿತ್ತು. ಹೀಗಾಗಿ ಸಾಕಷ್ಟು ಮಂದಿ ಟೈಟಲ್ ಕೊಡುವಲ್ಲಿ ನಿರತರಾಗಿದ್ದರು. ಕಡೆಗೆ ‘ಗೋರಿಯಾದ್ಮೇಲ್ ಹುಟ್ಟಿದ್ ಸ್ಟೋರಿ’ ಕೊಟ್ಟವರಿಗೆ ಬಹುಮಾನವನ್ನು ಕೊಟ್ಟು ಸಿನಿಮಾದ ಮೇಲೆ ಜನರಿಗೆ ಮತ್ತಷ್ಟು ನಿರೀಕ್ಷೆ ಹುಟ್ಟಿಸಿದೆ.
Advertisement
ಸಿನಿಮಾದ ಮತ್ತೊಂದು ವಿಶೇಷತೆ ಎಂದರೆ ‘ಕಳೆದೋದಾ ಕಾಳಿದಾಸ’ ಎಂಬ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ. ಈ ಹಾಡು ಕೂಡ ಈಗಾಗಲೇ ಹಿಟ್ ಆಗಿದೆ. ನಿರ್ದೇಶಕರಾಗಿಯೂ ಹೆಸರು ಮಾಡಿದ್ದ ವಿಕಾಸ್ ಮೊದಲ ಬಾರಿಗೆ ನಟನಾಗಿ ಬೆಳ್ಳಿತೆರೆಗೆ ಜಿಗಿದಿದ್ದಾರೆ. ವಿಕಾಸ್ ಗೆ ಸಿಂಧು ಲೋಕನಾಥ್ ನಾಯಕಿಯಾಗಿದ್ದಾರೆ.
Advertisement
Advertisement
ರಾಜ್ ಪತ್ತಿಪಾಟಿ ನಿರ್ದೇಶನ ಮಾಡಿದ್ದು, ಚಂದ್ರಶೇಖರ್ ನಾಯ್ಡು, ಸೋಮಸಿಂಗ್, ಪುಷ್ಪಾ ಸೋಮಸಿಂಗ್ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಗುಮ್ಮಿನೇನಿ ವಿಜಯ್ ಸಂಗೀತವಿದ್ದು, ವಿ. ನಾಗೇಂದ್ರ ಪ್ರಸಾದ್, ಅನಿರುದ್ಧ್ ಶಾಸ್ತ್ರಿ, ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಅಚ್ಯತ್ ಕುಮಾರ್, ರಾಘವ್ ಉದಯ್, ಭಜರಂಗಿ ಲೋಕಿ ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ.