ಕೋಲ್ಕತ್ತ: ಹಿಂದೂ ದೇವತೆಗಳನ್ನು ಸತತವಾಗಿ ಅವಮಾನಿಸುತ್ತಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಚಿತ್ರ ನಿರ್ದೇಶಕಿ ಲೀನಾ ಮಣಿಮೇಕಲೈ ಮೊದಲ ಪೋಸ್ಟರ್‌ನಲ್ಲೇ ಕಾಳಿ ದೇವಿ ಕೈಯಲ್ಲಿ ಸಿಗರೇಟು ನೀಡಿ ವಿವಾದಕ್ಕೀಡಾಗಿದ್ದರು. ಇದು ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಶಿವ-ಪಾರ್ವತಿ ಪಾತ್ರಧಾರಿಗಳು ಸಿಗರೇಟು ಸೇದುವ ದೃಶ್ಯದ ಫೋಟೋ ಹಾಕಿ ಮತ್ತೊಮ್ಮೆ ವಿವಾದಕ್ಕೆ ಕಾರಣರಾದರು. ಇದೀಗ ರಾಷ್ಟ್ರವ್ಯಾಪಿಯಾಗಿ ವಿವಾದ ಹರಡಿದೆ.
Advertisement
ಕಾಳಿ ದೇವಿ ಕುರಿತು ಪ್ರಧಾನಿ ನರೇಂದ್ರ ಮೋದಿ ಇಂದು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದು, ಟಿಎಂಸಿ (ತೃಣಮೂಲ ಕಾಂಗ್ರೆಸ್) ಪ್ರಮುಖರಿಂದ ಆಕ್ಷೇಪಣೆಗಳೂ ವ್ಯಕ್ತವಾಗಿವೆ. ಇದನ್ನೂ ಓದಿ: ದೇವೇಗೌಡರನ್ನು ಭೇಟಿಯಾದ ದ್ರೌಪದಿ ಮುರ್ಮು- ಎನ್‍ಡಿಎ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ
Advertisement
ರಾಮಕೃಷ್ಣ ಮಿಷನ್ ಹಮ್ಮಿಕೊಂಡಿದ್ದ ಸ್ವಾಮಿ ಆತ್ಮಸ್ಥಾನಾನಂದ ಅವರ ಜನ್ಮ ಶತಮಾನೋತ್ಸವ ವರ್ಚುವಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಂದು ಕಾಳಿ ದೇವಿ ಕುರಿತು ಮಾತನಾಡಿದ್ದಾರೆ.
Advertisement
Advertisement
ಕಾಳಿ ಮಾತೆಯ ಆಶೀರ್ವಾದ ಈ ದೇಶದ ಮೇಲೆ ಸದಾಕಾಲವೂ ಇರಲಿದೆ. ದೇಶದಲ್ಲಿರುವ ಸಂತರು `ಏಕ ಭಾರತ, ಶ್ರೇಷ್ಠ ಭಾರತ’ ಆಶಯದ ಸಾಕಾರಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಲು ರೋಹಿತ್ ಶರ್ಮಾಗೆ ಇನ್ನೊಂದೆ ಹೆಜ್ಜೆ
ರಾಮಕೃಷ್ಣ ಪರಮಹಂಸರು ಕಾಳಿ ಮಾತೆಯ ಕುರಿತು ಸ್ಪಷ್ಟ ಕಲ್ಪನೆ ಹೊಂದಿದ್ದರು. ಅವರ ಶಿಷ್ಯ ಸ್ವಾಮಿ ವಿವೇಕಾನಂದರೂ ಆಧ್ಯಾತ್ಮಿಕ ದೃಷ್ಟಿಕೋನ ಹೊಂದಿದ್ದರು. ಇದು ಅವರಲ್ಲಿ ಅಸಾಧಾರಣ ಶಕ್ತಿ ತುಂಬಿತ್ತು. ನಂಬಿಕೆ ಪವಿತ್ರವಾಗಿದ್ದರೆ ಅಗೋಚರ ಶಕ್ತಿಯೊಂದು ನಮಗೆ ಅರಿವಿಲ್ಲದಂತೆಯೇ ನಮ್ಮನ್ನು ಸರಿ ದಾರಿಯಲ್ಲಿ ಕೊಂಡೊಯ್ಯುತ್ತದೆ. ಕಾಳಿ ಮಾತೆಯ ಕೃಪೆ ಭಾರತದ ಮೇಲೆ ಇದೆ. ಆಧ್ಯಾತ್ಮಿಕ ಶಕ್ತಿಯೊಂದಿಗೆ ದೇಶವು ಲೋಕ ಕಲ್ಯಾಣದ ಕಾಯಕದಲ್ಲಿ ಮುನ್ನಡೆಯುತ್ತಿದೆ ಎಂದು ಶ್ಲಾಘಿಸಿದ್ದಾರೆ.
ಪ್ರಧಾನಿ ಮೋದಿ ಅವರ ಹೇಳಿಕೆಗೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವುದೇ ಸುಳಿವಿಲ್ಲದ ವಿಷಯಗಳ ಬಗ್ಗೆ ತಮ್ಮ ಯಜಮಾನರು ಕಾಮೆಂಟ್ ಮಾಡುವುದನ್ನು ನಿಲ್ಲಿಸಬೇಕೆಂದು ಸಲಹೆ ನೀಡುತ್ತೇನೆ ಎಂಬುದಾಗಿ ಬಂಗಾಳದ ಬಿಜೆಪಿ ಘಟಕದ ವಿರುದ್ಧ ಹರಿಹಾಯ್ದಿದ್ದಾರೆ.
ಇದರಿಂದ ಮೊಯಿತ್ರಾ ಅವರನ್ನು ಟಿಎಂಸಿ ಸದಸ್ಯತ್ವದಿಂದ ಅಮಾನತುಗೊಳಿಸುವಂತೆ ಬಿಜೆಪಿ ಒತ್ತಾಯಿಸಿದೆ.