ಕೆಂಡಸಂಪಿಗೆ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ವಿಕ್ಕಿ ವರುಣ್ (Vicky Varun), ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹುಟ್ಟು ಹಬ್ಬಕ್ಕಾಗಿ (Birthday,) ಅವರ ನಟನೆಯ ‘ಕಾಲಪತ್ಥರ್ ‘ ಸಿನಿಮಾದ ಪೋಸ್ಟರ್ (Poster) ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಅವರು ವಿಭಿನ್ನ ರೀತಿಯ ಪಾತ್ರ ನಿರ್ವಹಿಸುತ್ತಿದ್ದು, ಆ ಪಾತ್ರದ ಪೋಸ್ಟರ್ ಅನ್ನು ವಿಕ್ಕಿ ಹುಟ್ಟು ಹಬ್ಬಕ್ಕೆ ರಿಲೀಸ್ ಮಾಡಿದೆ ಚಿತ್ರತಂಡ.
ನಿರ್ದೇಶಕ ಸುಕ್ಕಾ ಸೂರಿ ಗರಡಿಯಲ್ಲಿ ಪಳಗಿದ್ದ ವಿಕ್ಕಿ, ಕೆಂಡಸಂಪಿಗೆ ಚಿತ್ರದಲ್ಲಿನ ಇವರ ಮುಗ್ಧ ಅಭಿನಯ ಎಲ್ಲರ ಗಮನ ಸೆಳೆದಿತ್ತು. ಮೊದಲ ಚಿತ್ರದ ಗೆಲುವಿನ ನಂತರ ಕಾಲೇಜ್ ಕುಮಾರನಾಗಿ ತೆರೆ ಮೇಲೆ ಎಂಟ್ರಿ ಕೊಟ್ಟ ಇವರು ಎರಡನೇ ಸಿನಿಮಾದಲ್ಲೂ ಸಕ್ಸಸ್ ಕಾಣುವ ಮೂಲಕ ಖ್ಯಾತಿ ಗಳಿಸಿದ್ರು. ಸಿನಿಮಾ ಆಯ್ಕೆ ವಿಚಾರದಲ್ಲಿ ಸಖತ್ ಚ್ಯೂಸಿಯಾಗಿರುವ ವಿಕ್ಕಿ ವರುಣ್ ಬಹಳ ದಿನಗಳ ನಂತರ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಎಲ್ಲೆಡೆ ಕುತೂಹಲ ಮೂಡಿಸಿದೆ. ಇದನ್ನೂ ಓದಿ:ಪಿಎಚ್‌ಡಿ ಪ್ರವೇಶ ಪರೀಕ್ಷೆ ಬರೆದ ನಟಿ ಪವಿತ್ರಾ ಲೋಕೇಶ್
ಕೆಂಡ ಸಂಪಿಗೆ, ಕಾಲೇಜ್ ಕುಮಾರ ಚಿತ್ರಗಳ ಬ್ಯಾಕ್ ಟು ಬ್ಯಾಕ್ ಸಕ್ಸಸ್ ನಂತರ ವಿಕ್ಕಿ ವರುಣ್ ಒಪ್ಪಿಕೊಂಡಿರುವ ನೂತನ ಚಿತ್ರವೇ ಈ ‘ಕಾಲಾ ಪತ್ಥರ್’ ((Kalapathar)). ಈಗಾಗಲೇ ನಟಿಸಿದ ಎರಡೂ ಸಿನಿಮಾಗಳು ಹಿಟ್ ಆಗಿರೋದ್ರಿಂದ ಸಾಕಷ್ಟು ಎಚ್ಚರಿಕೆ ವಹಿಸಿ ಮೂರನೇ ಸಿನಿಮಾ ಆಯ್ಕೆ ಮಾಡಿಕೊಂಡಿದ್ದಾರೆ ವಿಕ್ಕಿ ವರುಣ್. ‘ಕಾಲಾ ಪತ್ಥರ್’ ಸಿನಿಮಾ ಭಿನ್ನವಾಗಿದ್ದು ಖಂಡಿತಾ ಪ್ರೇಕ್ಷಕ ಪ್ರಭುಗಳಿಗೆ ಇಷ್ಟವಾಗುತ್ತೆ ಎನ್ನುತ್ತಾರೆ ನಟ ವಿಕ್ಕಿ ವರುಣ್.
‘ಕಾಲಾಪತ್ಥರ್’ ಚಿತ್ರಕ್ಕೆ ವಿಕ್ಕಿ ವರುಣ್ ಇವರೇ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇವರ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ರಾಮಾ ರಾಮಾ ರೇ ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್ (Satya Prakash) ‘ಕಾಲಾ ಪತ್ಥರ್’ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಸುರೇಶ್ ಮತ್ತು ನಾಗರಾಜು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.