ಚಿಕ್ಕಬಳ್ಳಾಪುರ: ನಾನು ಪ್ರದೀಪ್ ಈಶ್ವರ್ (Pradeep Eshwar) ಅವರ ಸವಾಲು ಸ್ವೀಕರಿಸುವಷ್ಟು ದೊಡ್ಡ ನಾಯಕನಲ್ಲ. ನಮ್ಮ ಕಾರ್ಯಕರ್ತರು ಅವರ ಸವಾಲು ಸ್ವೀಕರಿಸ್ತಾರೆ. ಬಿಜೆಪಿ ಅಭ್ಯರ್ಥಿ ಯಾರೇ ಆಗಲಿ ಒಂದು ವೋಟು ಜಾಸ್ತಿ ಪಡೆದರೂ ನೀವು ರಾಜೀನಾಮೆ ಕೊಡ್ತಾರಾ? ಎಂದು ಮಾಜಿ ಸಚಿವ ಕೆ.ಸುಧಾಕರ್ (K Sudhakar) ಮರು ಸವಾಲ್ ಹಾಕಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕು ಮಂಚನಬಲೆ ಗ್ರಾಮದಲ್ಲಿ ಲೋಕಸಭಾ ಚುನಾವಣಾ ಸಂಬಂಧ ನಡೆದ ಪೂರ್ವ ಭಾವಿ ಸಭೆಯಲ್ಲಿಂದು ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ (Lok Sabha Election) ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಒಂದು ಮತ ಹೆಚ್ಚಿಗೆ ತಗೊಳ್ಳಿ ನೋಡೋಣ ಎಂಬ ಪ್ರದೀಪ್ ಈಶ್ವರ್ ಅವರ ಸವಾಲಿಗೆ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ – ಬಿಎಸ್‌ವೈ ವಿರುದ್ಧ ಗುಡುಗಿದ ಈಶ್ವರಪ್ಪ
Advertisement
Advertisement
ಕ್ಷೇತ್ರ ಅಲ್ಲ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೇ 5,000 ಲೀಡ್ ತಗೊಳ್ಳಿ ಅಂತಾ ಬಿಜೆಪಿ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ. ನಮ್ಮ ಕಾರ್ಯಕರ್ತರು ಅವರ ಸವಾಲನ್ನು ಸ್ವೀಕರಿಸ್ತಾರೆ. ಬಿಜೆಪಿ ಅಭ್ಯರ್ಥಿ ಯಾರೇ ಆಗಲಿ ಒಂದು ವೋಟು ಜಾಸ್ತಿ ಪಡೆದರೂ ನೀವು ರಾಜೀನಾಮೆ ಕೊಡ್ತೀರಾ? ಎಂದು ಮರು ಸವಾಲು ಹಾಕಿದ್ದಾರೆ.
Advertisement
ಜೀವನ ಪರ್ಯಂತ ಶಾಸಕನಾಗಿರುತ್ತಿದ್ದೆ:
ನಾನು ಬಿಜೆಪಿಗೆ ಬಾರದೇ ಕಾಂಗ್ರೆಸ್‌ನಲ್ಲೇ ಇದ್ದಿದ್ದರೇ, ಜೀವನಪರ್ಯಂತ ಶಾಸಕನಾಗಿಯೇ ಇರ್ತಿದ್ದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಾವು ಎಷ್ಟು ಅರ್ಜಿಗಳನ್ನು ಪರಿಗಣಿಸಬೇಕು? – EVM ಬೇಡವೆಂದು ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ವಜಾ
Advertisement
\
ಕೇವಲ 2-3% ಬಿಜೆಪಿಗೆ ಮತ ಇರುವ ಕಡೆ ನಾನು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದು ಬಂದೆ. ಪಕ್ಷದ ಕಷ್ಟಕಾಲದಲ್ಲಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ನನ್ನ ತ್ಯಾಗವಿದೆ. ಮಂತ್ರಿಯಾದ ನಂತರ 1 ತಿಂಗಳಿಗೆ ಕೋವಿಡ್ ಬಂತು, 5 ವರ್ಷಗಳ ಕಾಲ ಬಿಜೆಪಿಯಲ್ಲಿನ ಪಯಣ ಬಹಳ ಕಠಿಣವಾಗಿತ್ತು. ಕಷ್ಟ ಪಟ್ಟು ಕೆಲಸ ಮಾಡಿದ್ದೇನೆ. ಹಗಲಿರುಳು ರಾಜ್ಯದಲ್ಲಿ ಓಡಾಡಿದ್ದೇನೆ. ಅಂದಿನ ಸಿಎಂ ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರದ ಪರವಾಗಿ ಕೋವಿಡ್ ಕಾಲದಲ್ಲಿ ರಾಜ್ಯದ ಜನರ ಆರೋಗ್ಯವನ್ನ ಸಂರಕ್ಷಿಸುವ ಕೆಲಸ ಯಶಸ್ವಿಯಾಗಿ ಮಾಡಿದ್ದೇನೆ. ಆದ್ರೂ ನಾನು ಕ್ಷೇತ್ರ ಮರೆಯಲಿಲ್ಲ. ಕೋವಿಡ್ ಕಷ್ಟಕಾಲದಲ್ಲಿ ಮನೆ ಮನೆಗೆ ಆಹಾರ ಪದಾರ್ಥಗಳ ಪೂರೈಕೆ ಮಾಡಿದ್ದೇನೆ. ಆಗ ನಮ್ಮ ಜನ ಬದುಕಿದ್ದೀರಾ ಅಂತ ಕೇಳಲಿಲ್ಲ. ಕೋವಿಡ್ ಕಾಲದಲ್ಲಿ ಈಗಿನ ಶಾಸಕರು ಸಹಾಯ ಮಾಡಿದ್ದಾರಾ? ಪ್ರತಿಯೊಂದು ಸಮಯದಲ್ಲೂ ಕ್ಷೇತ್ರ ಬಗ್ಗೆ ಚಿಂತನೆ ಮಾಡಿದ್ದೀನಿ, ಹೆಚ್.ಎನ್ ವ್ಯಾಲಿ ಯೋಜನೆ ತಂದು ಕೆರೆಗಳಿಗೆ ನೀರು ತುಂಬಿಸಿದ್ದೇನೆ, ಕೆರೆ ನೀರು ಒಂದೇ ಜಾತಿಯವರೇ ಬಳಸ್ತಾರಾ? ಆದ್ರೆ ಮತ ಹಾಕುವಾಗ ನಾನು ಒಕ್ಕಲಿಗ ಅಂತೀರಾ? ನಾನು ಜಾತಿ ಯೋಚನೆ ಮಾಡಿದವನಲ್ಲ ಅಂತ ಹೇಳಿದ್ದಾರೆ.