ಬೆಂಗಳೂರು: ರಾಜ್ಯದಲ್ಲಿ ಕಡ್ಡಾಯ ಮಾಸ್ಕ್ ನಿಯಮ ಕೈ ಬಿಡುವ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ಮಾಡಿ ನಿರ್ಧಾರ ಮಾಡಲಾಗುತ್ತದೆ ಅಂತ ಆರೋಗ್ಯ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.
Advertisement
ದೆಹಲಿ ಸೇರಿದಂತೆ 3-4 ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ ನಿಯಮ ಸಡಿಲ ವಿಚಾರವಾಗಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ ನಿಯಮ ಸಡಿಲ ವಿಚಾರವಾಗಿ ಸಿಎಂ ಬೊಮ್ಮಾಯಿ ಹಾಗೂ ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ನಡೆಸುತ್ತೇನೆ ಎಂದರು. ಇದನ್ನೂ ಓದಿ: 13ರ ಬಾಲಕನ ಮೇಲೆ ಪೊಲೀಸ್ ದರ್ಪ – ನಡು ರಸ್ತೆಯಲ್ಲಿ ಕಪಾಳಮೋಕ್ಷ ಮಾಡಿದ ವೀಡಿಯೋ ವೈರಲ್
Advertisement
ಸಿಎಂ ಹಾಗೂ ತಾಂತ್ರಿಕ ಸಲಹಾ ಸಮಿತಿ ಸರಿ ಅಂದರೆ ಮಾಸ್ಕ್ ಕೈ ಬಿಡುವ ಬಗ್ಗೆ ನಾವು ಆದೇಶ ಹೊರಡಿಸ್ತೀವಿ ಅಂತ ತಿಳಿಸಿದರು. ಈಗಾಗಲೇ 90% ಜನರು ಮಾಸ್ಕ್ ತೆಗೆದು ಓಡಾಡುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಅಘೋಷಿತ ನಿಯಮ ಸಡಿಲಿಕೆ ಆಗಿದೆ. ಆದರೂ ಇನ್ನು ಅನೇಕ ದೇಶಗಳಲ್ಲಿ 4ನೇ ಅಲೆ ಬಂದಿದೆ. ಹೀಗಾಗಿ ನಾವು ಎಚ್ಚರಿಕೆಯಿಂದ ಇದ್ದೇವೆ ಎಂದರು. ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ, ಪಿಯಸಿ ಎಕ್ಸಾಂ ಕೆಲಸ ಮಾಡೋ ಶಿಕ್ಷಕರಿಗೆ ಹಿಜಬ್ ನಿಷೇಧ
Advertisement
Advertisement
ತಾಂತ್ರಿಕ ಸಲಹಾ ಸಮಿತಿ, ಸಿಎಂ ಜೊತೆ ಚರ್ಚೆ ಮಾಡಿ ಮಾಸ್ಕ್ ನಿಯಮದ ಬಗ್ಗೆ ನಿರ್ಧಾರ ಮಾಡುತ್ತೇವೆ. ಈಗ ಮಾಸ್ಕ್ ಹಾಕದವರಿಗೂ ದಂಡ ಹಾಕುತ್ತಿಲ್ಲ. ಶೀಘ್ರವೇ ಸಿಎಂ ಜೊತೆ ಮಾತನಾಡಿ ಮಾಸ್ಕ್ ತೆಗೆಯೋ ಬಗ್ಗೆ ಆದೇಶ ಹೊರಡಿಸುವ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ಹೇಳಿದರು.