ಚಿಕ್ಕಬಳ್ಳಾಪುರ: ನಾಡಹಬ್ಬ ದಸರಾ ಆಚರಣೆ ಮಾದರಿಯಲ್ಲೇ ಸರಳವಾಗಿ ಗಣೇಶೋತ್ಸವ ಆಚರಣೆ ಮಾಡಬೇಕು ಅಂತ ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ ಕೆ. ಸುಧಾಕರ್ ಹೇಳಿದರು.
ಸಿಎಂ ಹಾಗೂ ಅಧಿಕಾರಿಗಳ ಜೊತೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಿಂದಲೇ ವೀಡಿಯೋ ಸಂವಾದದಲ್ಲಿ ಭಾಗಿಯಾಗಿದ್ದ ಸಚಿವ ಸುಧಾಕರ್ ಅವರು ವಿಡಿಯೋ ಸಂವಾದದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ದಸರಾ ವನ್ನ ಸರಳ ಅಚರಿಸಬೇಕು ಅಂತ ಸಿಎಂ ತೀರ್ಮಾನ ತೆಗೆದುಕೊಂಡಿದ್ದಾರೆ. ಅದೇ ರೀತಿ ಗಣೇಶನ ಹಬ್ಬ ಸಹ ಸರಳ ಗಣೇಶ ಉತ್ಸವ ಆಚರಣೆ ಮಾಡಲು ತೀರ್ಮಾನಿಸಿಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಷರತ್ತುಬದ್ಧ ನಿಯಮಗಳೊಂದಿಗೆ ಗಣೇಶೋತ್ಸವಕ್ಕೆ ಅನುಮತಿ
ಈ ಸಂಬಂಧ ಸಾಕಷ್ಟು ಚರ್ಚೆಯಾಗಿದ್ದು, 4 ಅಡಿಗಿಂತ ಕಡಿಮೆ ಎತ್ತರ ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಅವಕಾಶ ನೀಡಲಾಗಿದೆ. ಗರಿಷ್ಟ 5 ದಿನ ಪ್ರತಿಷ್ಟಾಪನೆಗೆ ಅವಕಾಶವಿದೆ.ವಿಸರ್ಜನೆ ವೇಳೆ ನಿಗದಿತ ಮಂದಿಯಷ್ಟೇ ಭಾಗವಹಿಸಬೇಕು. ಯಾವುದೇ ಮೆರವಣಿಗೆಗೆ ಅವಕಾಶ ಇಲ್ಲ. ಆರ್ಕೆಸ್ಟ್ರಾ, ಡಿಜೆಗೆ ಅನುಮತಿ ಇಲ್ಲ. ಪೂಜೆ ವೇಳೆ ಒಮ್ಮೆ 20 ಮಂದಿಯಷ್ಟೇ ಭಾಗವಹಿಸಬೇಕು. ದೈಹಿಕ ಅಂತರ ಕಾಪಾಡಿಕೊಳ್ಳಬೇಕು, ಸ್ಯಾನಿಟೈಸೇಷನ್ ಮಾಡಬೇಕು ಎಂದು ಸೂಚಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್
ಗಣೇಶ ಪ್ರತಿಷ್ಠಾಪನಾ ಸಂಘಟಕರು ಸಮಿತಿಯವರಿಗೆ ಕಡ್ಡಾಯವಾಗಿ ವ್ಯಾಕ್ಸಿನ್ ಹಾಗೂ ಟೆಸ್ಟಿಂಗ್ ಆಗಿರಬೇಕು. ಈ ಎಲ್ಲಾ ಪ್ರಮುಖ ಮಾರ್ಗಸೂಚಿಗಳ ಮೂಲಕ ಕೋವಿಡ್ ಮಾರ್ಗಸೂಚಿಗಳನ್ನ ಕಡ್ಡಾಯವಾಗಿ ಪಾಲಿಸಬೇಕು. ಈ ಎಲ್ಲಾ ಮಾರ್ಗಸೂಚಿಗಳ ಅನ್ವಯ ಗಣೇಶೋತ್ಸವ ವನ್ನ ಸರಳವಾಗಿ ಆಚರಿಸಿಬೇಕು. ಕೋವಿಡ್ ಮುನ್ನೆಚ್ಚರಿಕೆಗಳನ್ನ ಪಾಲನೆ ಮಾಡಬೇಕು ಅಂತ ಸಚಿವ ಸುಧಾಕರ್ ತಿಳಿಸಿದರು.