ಬೆಂಗಳೂರು: ಕೆ-ಸೆಟ್ ಪರೀಕ್ಷೆಗಳನ್ನು ಇನ್ನು ಮುಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಸಲಾಗುತ್ತದೆ ಅಂತ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ (Ashwath Narayan) ತಿಳಿಸಿದ್ದಾರೆ.
Advertisement
ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‍ನ ಮಧು ಮಾದೇಗೌಡ (Madhu Made Gowda) ಪ್ರಶ್ನೆ ಕೇಳಿದರು. ಕೆ-ಸೆಟ್ (KSET Exam) ಪರೀಕ್ಷೆಗಳನ್ನ ವಿಶ್ವವಿದ್ಯಾಲಯಗಳು ಮಾಡುವ ನಿಯಮ ಸರ್ಕಾರ ಕೈಬಿಟ್ಟಿದೆ. ಈ ನಿರ್ಧಾರ ಸರ್ಕಾರ ವಾಪಸ್ ಪಡೆದು ಕೆ-ಸೆಟ್ ಪರೀಕ್ಷೆಗಳನ್ನ ವಿಶ್ವವಿದ್ಯಾಲಯಗಳೇ ನಡೆಸಲು ಅವಕಾಶ ಮಾಡಿಕೊಡಬೇಕು. ಕೆ-ಸೆಟ್ ಪರೀಕ್ಷೆ ಮೈಸೂರು ವಿವಿ ಮಾಡ್ತಿತ್ತು. ಈಗ ಅದನ್ನ ರದ್ದು ಮಾಡಿದೆ. ಮತ್ತೆ ವಿವಿಗಳಿಗೆ ಕೆ-ಸೆಟ್ ಪರೀಕ್ಷೆ ಮಾಡೋ ಅವಕಾಶ ಕೊಡಬೇಕು ಅಂತ ಒತ್ತಾಯ ಮಾಡಿದರು.
Advertisement
Advertisement
ಇದಕ್ಕೆ ಉತ್ತರ ನೀಡಿದ ಸಚಿವ ಅಶ್ವಥ್ ನಾರಾಯಣ, ಕಳೆದ 11 ವರ್ಷದಿಂದ ಮೈಸೂರು ವಿಶ್ವವಿದ್ಯಾನಿಲಯ ಕೆ-ಸೆಟ್ ಪರೀಕ್ಷೆ ಮಾಡುತ್ತಿತ್ತು. ಈ ಪರೀಕ್ಷೆ ಬಗ್ಗೆ ಅನೇಕ ದೂರುಗಳು ಬಂದಿತ್ತು. ಕೆ-ಸೆಟ್ ನಲ್ಲಿ ಪಾರದರ್ಶಕತೆ, ಗುಣಮಟ್ಟದ ತರುವ ಹಿನ್ನೆಲೆಯಲ್ಲಿ ಕೆ-ಸೆಟ್ ಪರೀಕ್ಷೆಯನ್ನ ಕೆಇಎ ಗೆ ಮಾಡಲು ನೀಡಲಾಗ್ತಿದೆ ಎಂದರು. ಇದನ್ನೂ ಓದಿ: Exclusive Photo Album- ಮೋದಿ ಔತಣಕೂಟ : ಎಕ್ಸ್ ಕ್ಲೂಸಿವ್ ಫೋಟೋ ಆಲ್ಬಂ
Advertisement
ಪರೀಕ್ಷೆ ನಡೆಸಲು ಕಮಿಟಿ ಮಾಡಿ ಕೆಇಎ (KEA) ಮೂಲಕ ಕೆ-ಸೆಟ್ ಪರೀಕ್ಷೆ ಮಾಡ್ತೀವಿ. ಯೂಜಿಸಿಯ ಗಮನಕ್ಕೂ ಇದನ್ನ ತರಲಾಗಿದೆ ಎಂದರು. ಕೆಇಎ ಅತ್ಯುತ್ತಮ ಸಂಸ್ಥೆ. ಯಾವುದೇ ದೊಡ್ಡ ಆರೋಪ ಇಲ್ಲ. ಪಾರದರ್ಶಕವಾಗಿ ಕೆಇಎ ಪರೀಕ್ಷೆ ಮಾಡುತ್ತೆ. ಹೀಗಾಗಿ ಕೆ-ಸೆಟ್ ಪರೀಕ್ಷೆ ಕೆಇಎ ಮೂಲಕ ಇನ್ನು ಮುಂದೆ ಮಾಡ್ತೀವಿ ಅಂತ ಸಚಿವರು ಸ್ಪಷ್ಟಪಡಿಸಿದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k