ಬೆಂಗಳೂರು: ಪದವಿ ಕಾಲೇಜು ಉಪನ್ಯಾಸಕರ ಅರ್ಹತಾ ಪರೀಕ್ಷೆಯಾದ ಕೆ-ಸೆಟ್-25 (K-SET-25) ಭಾನುವಾರ ರಾಜ್ಯದ 11 ಜಿಲ್ಲೆಗಳಲ್ಲಿ ಸುಗಮವಾಗಿ ನಡೆಯಿತು.
ಪರೀಕ್ಷಾ ಅಕ್ರಮಗಳನ್ನು ತಡೆಯಲು ಬಿಗಿ ಕ್ರಮಗಳನ್ನು ಕೈಗೊಂಡಿದ್ದರಿಂದ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಕೆ-ಸೆಟ್ ಪರೀಕ್ಷೆ | ಬಳ್ಳಾರಿಯಲ್ಲಿ ವಿದ್ಯಾರ್ಥಿಗಳ ಕಿವಿಯೋಲೆ, ಮೂಗುತಿ ಬಿಚ್ಚಿಸಿದ ಸಿಬ್ಬಂದಿ
ಒಟ್ಟು 34 ವಿಷಯಗಳಿಗೆ ನಡೆದ ಕೆ-ಸೆಟ್ ಪರೀಕ್ಷೆಗೆ 1.34 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದರು. ಇವರ ಪೈಕಿ 1.21 ಲಕ್ಷ (ಶೇ.90) ಮಂದಿ ಹಾಜರಾಗಿದ್ದರು ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಹೋಂಸ್ಟೇ, ರೆಸಾರ್ಟ್‌ಗೆ ಅವಕಾಶ ನೀಡುವುದಿಲ್ಲ: ಈಶ್ವರ್ ಖಂಡ್ರೆ
ಬೆಂಗಳೂರು, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯಪುರ ಜಿಲ್ಲೆಗಳ 316 ಕೇಂದ್ರಗಳಲ್ಲಿ ಪರೀಕ್ಷೆ ಯಶಸ್ವಿಯಾಗಿ ನಡೆಯಿತು. ಇದನ್ನೂ ಓದಿ: ನಾವಿಬ್ಬರು ಮಾತಾಡಿದ್ರಷ್ಟೇ ಬೆಲೆ, ಕ್ರಾಂತಿ ಬಗ್ಗೆ ಯಾರೂ ಮಾತಾಡ್ಬೇಡಿ: ಡಿಕೆಶಿ
ಪರೀಕ್ಷಾ ಕೇಂದ್ರಗಳಿಂದ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳು ಕೆಇಎ ಕಚೇರಿಗೆ ಬಂದ ತಕ್ಷಣವೇ ಅವುಗಳನ್ನು ಸ್ಕ್ಯಾನ್ ಮಾಡಿ, ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವ ಕೆಲಸ ಕೂಡ ಸಂಜೆ ವೇಳೆಗೆ ಆರಂಭವಾಯಿತು. ಎಲ್ಲ ವಿಷಯಗಳ ಕೀ ಉತ್ತರಗಳನ್ನು ಕೂಡ ಈ ವಾರದಲ್ಲಿ ಪ್ರಕಟಿಸಲಾಗುತ್ತದೆ ಎಂದು ಪ್ರಸನ್ನ ವಿವರಿಸಿದ್ದಾರೆ. ಇದನ್ನೂ ಓದಿ: ವಾಷಿಂಗ್ಟನ್ `ಸುಂದರ ಬ್ಯಾಟಿಂಗ್’ – ಆಸೀಸ್ ವಿರುದ್ಧ ಭಾರತಕ್ಕೆ 5 ವಿಕೆಟ್‌ಗಳ ಜಯ, ಸರಣಿ ಸಮಬಲ

