ಬೆಂಗಳೂರು: ನಗರದಲ್ಲಿ ಇಂದು ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಭಿನ್ನಮತದ ಸದ್ದು ಕೇಳಿಬರುತ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಕಾರ್ಯಕಾರಿಣಿ ಸಭೆಗೆ ಗೈರಾಗುವ ಮೂಲಕ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್, ಸಹ ಉಸ್ತುವಾರಿ ಪುರಂದರೇಶ್ವರಿ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹಾಗೂ ರಾಜ್ಯ ಬಿಜೆಪಿ ನಾಯಕರುಗಳಾದ ರಮೇಶ್ ಜಿಗಜಿಣಗಿ, ಜಗದೀಶ್ ಶೆಟ್ಟರ್, ಆರ್.ಅಶೋಕ್, ಸಿ.ಎಂ.ಉದಾಸಿ, ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ರವಿಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
Advertisement
Advertisement
ಕಾರ್ಯಕ್ರಮ ಉದ್ಘಾಟನೆಯಾದ್ರೂ ಈಶ್ವರಪ್ಪನವರು ಮಾತ್ರ ಆಗಮಿಸಿಲ್ಲ. ನಿನ್ನೆ ನಡೆದ ಕಾಯಕಾರಿಣಿ ಸಭೆಗೂ ಈಶ್ವರಪ್ಪ ಗೈರಾಗಿದ್ದರು. ಬಿಜೆಪಿಯ ಮಹತ್ವದ ಸಭೆಗಳಿಗೆ ಪದೇ ಪದೇ ಗೈರಾಗುತ್ತಿರುವ ಈಶ್ವರಪ್ಪರ ರಾಜಕೀಯ ಮರ್ಮ ಮಾತ್ರ ಇದೂವರೆಗೂ ತಿಳಿದಿಲ್ಲ.
Advertisement
ಬಿಎಸ್ ವೈ ಕ್ಯಾಪ್ಟನ್: ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ರಾಷ್ಟ್ರದ ಎಲ್ಲ ಮನೆ ಮನೆಗಳನ್ನು ಮುಟ್ಟಿದ್ದಾರೆ. ಅವರೊಬ್ಬರು ಮುಟ್ಟಿದರೆ ಸಾಲದು ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರು ರಾಜ್ಯದ ಮನೆ ಮನೆ ಮುಟ್ಟಬೇಕು. ನರೇಂದ್ರ ಮೋದಿ ನುಡಿದಂತೆ ನಡೆಯುತ್ತಿದ್ದಾರೆ. ಬಿಹಾರ ಆಯ್ತು ಇನ್ನು ಕೆಲವೇ ದಿನಗಳಲ್ಲಿ ತಮಿಳುನಾಡು ಕೂಡ ಎನ್‍ಡಿಎ ತೆಕ್ಕೆಗೆ ಬರುವ ಸಾಧ್ಯತೆಯಿದೆ. ಕೇವಲ ಎನ್‍ಡಿಎ ತೆಕ್ಕೆಗೆ ಬಂದ್ರೆ ಸಾಲದು ಬಿಜೆಪಿ ತೆಕ್ಕೆಗೆ ಬರಬೇಕು ಎಂಬುದು ನಮ್ಮ ಹಿರಿಯ ನಾಯಕರ ಅಪೇಕ್ಷೆಯಾಗಿದೆ. ಹಾಗೆ ಆಗಬೇಕಾದರೆ ಯಡಿಯೂರಪ್ಪನವರೇ ಕ್ಯಾಪ್ಟನ್ ಆಗಬೇಕು. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕು ಎಂದು ಕೇಂದ್ರ ಸಚಿವ ಸದಾನಂದಗೌಡ ಆಶಯ ವ್ಯಕ್ತಪಡಿಸಿದರು.
Advertisement
ಕಾಂಗ್ರೆಸ್ ಮುಕ್ತ ಕರ್ನಾಟಕ: ಕರ್ನಾಟಕದಲ್ಲಿ ಕಾಂಗ್ರೆಸ್ ಇಲ್ಲ, ರಾಜ್ಯದಲ್ಲಿ ಬಿಜೆಪಿಗೆ ಯಾವ ಕಷ್ಟದ ಪರಿಸ್ಥಿತಿಯೂ ಇಲ್ಲ. ಮುಂದಿನ ಚುನಾವಣೆಯಲ್ಲಿ ಮಿಷನ್ 150 ಗುರಿ ತಲುಪುತ್ತೇವೆ. ಚುನಾವಣೆಯಲ್ಲಿ ಬರೀ ಗೆಲುವಲ್ಲ, ಅದ್ಧೂರಿ ಗೆಲುವು ಸಾಧಿಸುತ್ತೇವೆ. ಕಾಂಗ್ರೆಸ್ ಮುಕ್ತ ಭಾರತ ಆಗಲ್ಲ ಅಂತಿದ್ರು. ಈಗ ಎಲ್ಲರಿಗೂ ವಾಸ್ತವ ತಿಳಿದಿದೆ. ಕಾಂಗ್ರೆಸ್ ಮುಕ್ತ ಭಾರತಕ್ಕೆ ಕಾಲ ಸನ್ನಿಹಿತವಾಗುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಥಾನ ಕಳೆದುಕೊಂಡ್ರೆ ಅವರ ಕತೆ ಮುಗಿದಂತೆ. ಕರ್ನಾಟಕದ ಗೆಲುವು ದಕ್ಷಿಣ ಭಾರತದ ಗೆಲುವಿಗೆ ಬುನಾದಿ ಆಗಲಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ನಾಯಕ ಮುರಳೀಧರ್ ರಾವ್ ಹೇಳಿದರು.
1951 ರಿಂದ ಜನ ಮಾತಾಡ್ತಾ ಇದ್ರು, ದೇಶದಲ್ಲಿ ಜನಸಂಘಕ್ಕೆ ಜಾಗ ಇಲ್ಲ. ಎಲ್ಲಾ ರೀತಿಯ ನೆಗೆಟಿವ್ ಟಾಕ್, ಕಮ್ಯುನಲ್ ಎಂದೆಲ್ಲ ತೆಗಳ್ತಾ ಇದ್ರು. ಆದರೆ ಇಂದು ರಾಷ್ಟ್ರಪತಿ, ಉಪರಾಷ್ಟ್ರಪತಿ, ಸ್ಪೀಕರ್, ಪ್ರಧಾನಿ ಎಲ್ಲರೂ ನಮ್ಮವರೇ ಆಗಿದ್ದಾರೆ ಎಂದು ಮುರುಳೀಧರ್‍ರಾವ್ ಅಂದ್ರು.