ಶಿವಮೊಗ್ಗ: ಬಿಜೆಪಿ (BJP) ಪಕ್ಷ ತಾಯಿ ಇದ್ದಂತೆ ಎಂದು ಈಶ್ವರಪ್ಪ (K.S Eshwarappa) ಹೇಳುತ್ತಾರೆ. ಆ ತಾಯಿಯ ಮನೆಗೆ ಅವರು ಬೇಗ ವಾಪಸ್ ಆಗಬೇಕು ಎಂದು ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು (Kashi Chandrashekar Shivacharya Swamiji) ಹೇಳಿದ್ದಾರೆ.
ಕಾಶಿಯಲ್ಲಿ ಅವರು ರಾಷ್ಟ್ರ ಭಕ್ತರ ಬಳಗದಿಂದ ಹೋಗಿರುವ ಯಾತ್ರಿಕರ ಬಳಿ ಮಾತನಾಡಿದ್ದಾರೆ. ಈ ವೇಳೆ ಈಶ್ವರಪ್ಪ ಅವರು ರಾಜ್ಯದಲ್ಲಿ ಬಿಜೆಪಿ ಪಕ್ಷ ಕಟ್ಟಲು ಶ್ರಮ ಹಾಕಿದ್ದಾರೆ. ಬಿಜೆಪಿ ಬೆಳೆಯಲು ಅವರ ಕೊಡುಗೆ ಸಹ ಇದೆ. ಈಶ್ವರಪ್ಪ ಅವರಿಗೆ ಜನ್ಮ ಕೊಟ್ಟಿರುವ ತಾಯಿ ಒಬ್ಬರಾದರೆ, ಜೀವನ ಕೊಟ್ಟಿರುವ ತಾಯಿ ಬಿಜೆಪಿ ಪಕ್ಷ ಎಂದು ಈಶ್ವರಪ್ಪ ಪರ ಬ್ಯಾಟ್ ಬೀಸಿದ್ದಾರೆ.
ಪಕ್ಷದಲ್ಲಿ ನಡೆದ ಕೆಲವು ಗೊಂದಲದಿಂದ ಈಶ್ವರಪ್ಪ ದೂರ ಆಗಿದ್ದಾರೆ. ತಾಯಿ ಮನೆಗೆ ಅವರು ಬೇಗ ವಾಪಸ್ ಹೋಗಬೇಕು. ಅವರಿಗೆ ಪಕ್ಷ ಸಹ ಸೂಕ್ತ ಸ್ಥಾನಮಾನ ಕೊಡಬೇಕು ಎಂದಿದ್ದಾರೆ.
ಈಶ್ವರಪ್ಪ ನೇತೃತ್ವದ ರಾಷ್ಟ್ರ ಭಕ್ತರ ಬಳಗದ ವತಿಯಿಂದ ಕಾಶಿ ಹಾಗೂ ಅಯೋಧ್ಯೆಗೆ 1,500 ಮಂದಿ ಯಾತ್ರೆಗೆ ತೆರಳಿದ್ದಾರೆ. ಈ ವೇಳೆ ಕಾಶಿಯಲ್ಲಿ ಭಕ್ತರು ಸ್ವಾಮೀಜಿ ಅವರನ್ನು ಭೇಟಿಯಾಗಿ ದರ್ಶನ ಪಡೆದಿದ್ದಾರೆ.