ಶಿವಮೊಗ್ಗ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಿ.ಎಂ. ಇಬ್ರಾಹಿಂ ಇಬ್ಬರು ಅವಳಿ-ಜವಳಿ ಇದ್ದ ಹಾಗೆ. ಅವಕಾಶವಾದ ರಾಜಕಾರಣಕ್ಕೆ ಇನ್ನೊಂದು ಹೆಸರೇ ಸಿದ್ದರಾಮಯ್ಯ ಹಾಗೂ ಸಿ.ಎಂ. ಇಬ್ರಾಹಿಂ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
Advertisement
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಸಿ.ಎಂ.ಇಬ್ರಾಹಿಂ ಇಬ್ಬರು ಒಂದೇ ಆಗಿದ್ದಾರೆ. ಇಬ್ರಾಹಿಂ ಅವರು ಪರಿಷತ್‍ನಲ್ಲಿ ವಿರೋಧ ಪಕ್ಷ ಸ್ಥಾನ ಸಿಗಲಿಲ್ಲ ಎಂದು ಕಾಂಗ್ರೆಸ್ ತೊರೆದು ಜೆಡಿಎಸ್‍ಗೆ ಹೋಗುತ್ತಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ಅವರೂ ಅಷ್ಟೇ. ವಿಪಕ್ಷ ನಾಯಕನ ಸ್ಥಾನ, ಅಥವಾ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ ಅಂದರೆ ಅವರು ಸಹ ಪಕ್ಷದಲ್ಲಿ ಒಂದು ಕ್ಷಣವೂ ಇರುವುದಿಲ್ಲ. ಇಬ್ಬರೂ ಅವಕಾಶವಾದಿ ರಾಜಕಾರಣಿಗಳು ಎಂದು ವಾಗ್ಧಾಳಿ ಮಾಡಿದ್ದಾರೆ. ಇದನ್ನೂ ಓದಿ: 165 ಕೋಟಿ ಡೋಸ್ ವ್ಯಾಕ್ಸಿನ್ ನೀಡಿದ ಭಾರತ
Advertisement
Advertisement
Advertisement
ಇಬ್ಬರಿಗೂ ಆ ಪಕ್ಷ, ಈ ಪಕ್ಷ ಅಂತಾ ಇಲ್ಲ. ಯಾವ ಪಕ್ಷದಲ್ಲಿ ಅಧಿಕಾರ ಸಿಗುತ್ತದೋ ಆ ಪಕ್ಷದಲ್ಲಿ ಇರುವಂತಹವರಾಗಿದ್ದಾರೆ. ಇಬ್ರಾಹಿಂ ಯಾವ ಪಕ್ಷಕ್ಕೆ ಹೋಗುತ್ತಾರೆ ಎಂಬ ಬಗ್ಗೆ ಮಹತ್ವ ಇಲ್ಲ. ಹಾಗೆಯೇ ಸಿದ್ದರಾಮಯ್ಯ ಅವರು ಸಹ ಯಾವ ಪಕ್ಷಕ್ಕೆ ಹೋಗ್ತಾರೋ ಎನ್ನುವುದಕ್ಕೂ ಮಹತ್ವ ಇಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಇನ್‌ಸ್ಟಾಗ್ರಾಮ್ ನಲ್ಲಿ ಟ್ರೆಂಡ್ ಆಯ್ತು ಕಡಲೆಕಾಯಿ ಮಾರುವವನ ಹಾಡು
ಜಿಲ್ಲಾ ಪಂಚಾಯತ್ ಹಾಗೂ ತಾಲೂಕ್ ಪಂಚಾಯತ್ ಚುನಾವಣೆಯನ್ನು ಆದಷ್ಟು ಬೇಗ ನಡೆಸಬೇಕು ಎಂದು ಸರ್ಕಾರ ಚಿಂತಿಸಿದೆ. ಚುನಾವಣೆ ನಡೆಸಿ ಅಂತಾ ಈ ಹಿಂದೆಯೇ ಚುನಾವಣೆ ಆಯೋಗಕ್ಕೆ ಮನವಿ ಸಲ್ಲಿಸಿದ್ದೇವು. ಆದರೆ 780 ತಕರಾರು ಅರ್ಜಿ ಬಂದಿತ್ತು. ಕ್ಷೇತ್ರ ಪುನವಿರ್ಂಗಡಣೆ ಹಾಗೂ ಮೀಸಲಾತಿಯ ಬಗ್ಗೆ ಅನೇಕರು ತಕರಾರು ಅರ್ಜಿ ಸಲ್ಲಿಸಿದ್ದರು. ಈಗಾಗಿಯೇ ಲಕ್ಷ್ಮಿ ನಾರಾಯಣ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ವರದಿ ನೀಡಿದ ನಂತರ ಕ್ರಮ ತೆಗೆದು ಕೊಳ್ಳುತ್ತೇವೆ. ನಂತರ ಚುನಾವಣೆ ನಡೆಸುತ್ತೇವೆ ಎಂದರು.