ಶಿವಮೊಗ್ಗ: ಬಾಂಗ್ಲಾದೇಶದ (Bangladesh) ಸ್ಥಿತಿ ನೋಡಿದ್ರೆ ಮುಸ್ಲಿಮರು (Muslim) ಅನ್ನ ತಿಂದ ಮನೆಗೆ ಕನ್ನ ಹಾಕುವವರು ಎಂಬುದು ಗೊತ್ತಾಗುತ್ತದೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ (K.S Eshwarappa) ಹೇಳಿದ್ದಾರೆ.
ನಗರದಲ್ಲಿ (Shivamogga) ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಈ ವೇಳೆ ಬಾಂಗ್ಲಾದೇಶಕ್ಕೆ ತಿನ್ನಲು ಅನ್ನ ಇರಲಿಲ್ಲ. ಚಿನ್ಮಯ್ ದಾಸ್ ಅವರು ಎಲ್ಲರಿಗೂ ಅನ್ನ ಹಾಕುತ್ತಿದ್ದರು. ಚಿನ್ಮಯ್ ದಾಸ್ ಪರವಾಗಿ ಒಬ್ಬರು ವಕೀಲರು ವಕಾಲತ್ತು ಹಾಕಲು ಹೊರಟ್ಟಿದ್ದರು. ಮುಸ್ಲಿಮರು ಆ ವಕೀಲರ ಮೇಲೆ ಹಲ್ಲೆ ನಡೆಸಿದ್ದಾರೆ. ಆ ವಕೀಲರು ಸಾಯುವ ಸ್ಥಿತಿಯಲ್ಲಿ ಇದ್ದಾರೆ ಎಂದು ಕಿಡಿಕಾರಿದ್ದಾರೆ.
Advertisement
ಭಾರತದ ಹಿಂದೂಗಳು (Hindu) ಈ ದೇಶದ ಮುಸ್ಲಿಮರಿಗೆ ಸಿಕ್ಕ ಸಿಕ್ಕ ಕಡೆ ಹೊಡೆದರೆ ಮುಸ್ಲಿಮರು ಉಳಿಯುತ್ತಾರಾ? ಮುಸ್ಲಿಮರು ಹಿಂದೂ ಯುವತಿಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ. ಆದರೆ ಒಬ್ಬ ಹಿಂದೂ ಸಹ ಮಸೀದಿ ಧ್ವಂಸ ಮಾಡಲು ಹೋಗಿಲ್ಲ. ರಾಮ ಮಂದಿರ ನಿರ್ಮಾಣ ಮಾಡಲು ಬಾಬ್ರಿ ಮಸೀದಿ ಧ್ವಂಸ ಮಾಡಿದ್ದು ಬಿಟ್ಟರೆ ಬೇರೆ ಮಸೀದಿ ಧ್ವಂಸ ಮಾಡಿಲ್ಲ. ಹಿಂದೂಗಳು ಶಾಂತಿಪ್ರಿಯರು ಎಂದಿದ್ದಾರೆ.
Advertisement
Advertisement
ಇವತ್ತೂ ಸಹ ಬಾಂಗ್ಲದಲ್ಲಿ ಹಿಂದೂ ದೇವಸ್ಥಾನ ಧ್ವಂಸ ಮಾಡಿದ್ದಾರೆ. ಇದೇ ರೀತಿ ಮುಂದುವರೆದರೆ ಬಾಂಗ್ಲಾದೇಶ, ಪಾಕಿಸ್ತಾನ ಮುಂದೊಂದು ದಿನ ಇರಲ್ಲ. ಅದು ಅಖಂಡ ಭಾರತ ಆಗುತ್ತದೆ. ಇಂದು ಸಾಧು ಸಂತರು ಹೋರಾಟಕ್ಕೆ ಬಂದಿದ್ದಾರೆ. ಅಖಂಡ ಭಾರತದ ನಿರ್ಮಾಣಕ್ಕೆ ಸಾಧು ಸಂತರ ನೇತೃತ್ವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.
Advertisement
ಚಂದ್ರಶೇಖರ ಸ್ವಾಮೀಜಿ ಮುಸ್ಲಿಮರಿಗೆ ಮತದಾನದ ಹಕ್ಕು ಕೊಡಬಾರದು ಎಂದಿದ್ದರು. ಬಳಿಕ ನನ್ನ ಮಾತನ್ನು ವಾಪಸ್ ಪಡೆದಿದ್ದರು. ಹಿಂದೂ ದೇವಸ್ಥಾನ ಧ್ವಂಸ, ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದರೂ ಸುಮ್ಮನಿದ್ದೇವೆ ಎಂದು ಕಿಡಿಕಾರಿದ್ದಾರೆ.