ಮಡಿಕೇರಿ: ಪ್ರತಿಯೊಬ್ಬರಿಗೂ ಸಾಧನೆ ಮಾಡುವ ಹಂಬಲವಿರುತ್ತದೆ. ಆದರೆ ಕೆಲವರು ಅವರ ದಾರಿಯಲ್ಲಿ ಸಫಲರಾಗುತ್ತಾರೆ, ಕೆಲವರು ವಿಫಲರಾಗುತ್ತಾರೆ. ಇದು ಪ್ರಕೃತಿ ನಿಯಮ. ಆದರೆ ಕೊಡಗಿನ ಯುವಕ ಸಾಧನೆ ಮೇಲೆ ಸಾಧನೆಯನ್ನು ಮಾಡಿದ್ದು, ಅವರ ವಿಶೇಷ ಸಾಧನೆಗಾಗಿ ಇಂಡಿಯಾ ಬುಕ್ ಅಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ.
Advertisement
ಹೌದು, ವಿರಾಜಪೇಟೆ ನಗರದ ವಿಜಯನಗರದ ನಿವಾಸಿ ಕೆ.ಕುಮಾರ್ ಮತ್ತು ವರಲಕ್ಷ್ಮಿ ದಂಪತಿ ಪುತ್ರ ಕೆ.ರಾಹುಲ್ ಅವರಿಗೆ 20 ವರ್ಷ. ಅವರು ಒಂದು ನಿಮಿಷದಲ್ಲಿ ಏಕಕಾಲಕ್ಕೆ ಒಟ್ಟು 262 ಬಾರಿ ಪಂಚ್ ಮತ್ತು ಕಿಕ್ಸ್ ಮಾಡಿ ವಿಶೇಷ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ಕೊರೊನಾ ಮನುಷ್ಯರಿಂದ ಪ್ರಾಣಿಗಳಿಗೆ ಹರಡುತ್ತದೆ – ಸಂಶೋಧನಾ ವರದಿ
Advertisement
ರಾಹುಲ್ ಅವರ ಸಾಧನೆಯನ್ನು ಗುರುತಿಸಿ ಇಂಡಿಯಾ ಬುಕ್ ಅಫ್ ರೆಕಾರ್ಡ್ಸ್‌ನ ಪುಟದಲ್ಲಿ ಹೆಸರನ್ನು ನೊಂದಾಯಿಸಿದ್ದಾರೆ. ರಾಹುಲ್ ಅವರಿಗೆ ಪ್ರಮಾಣ ಪತ್ರ, ಪದಕ, ಗುರುತಿನ ಚೀಟಿ ಹಾಗೂ ಸಾಧಕರಿಗಾಗಿ ನೀಡುವ ವಿಶೇಷ ಲೇಖನಿಯನ್ನು ಪಡೆದುಕೊಂಡಿದ್ದಾರೆ.
Advertisement
Advertisement
ರಾಹುಲ್ ಅವರು ವಿರಾಜಪೇಟೆ ನಗರದ ಯುಚೇರಿಯೋ ಕರಾಟೆ ಶಾಲೆ ವಿದ್ಯಾರ್ಥಿಯಾಗಿದ್ದು, ಮುಖ್ಯ ತರಬೇತು ಶಿಕ್ಷಕರಾದ ಸೇನ್ಸಾಯಿ ಹೆಚ್.ಆರ್.ಶಿವಪ್ಪ ಅವರ ಗರಡಿಯಲ್ಲಿ ಪಳಗಿ ರಾಜ್ಯ ಮತ್ತು ಅಂತರ ರಾಜ್ಯದ ಕರಾಟೆ ಕ್ರೀಡೆಗಳಲ್ಲಿ ಭಾಗವಹಿಸಿ ಚಿನ್ನ, ಮತ್ತು ಬೆಳ್ಳಿ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಪ್ರಥಮ ಅಂತರ್ ರಾಷ್ಟ್ರೀಯ ಆನ್‍ಲೈನ್ ಇ-ಖಾತೆ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನಕ್ಕೆ ಬಂದು ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಬಂತು ಚೂಯಿಂಗಮ್!
ಸಾಧನೆಯ ಬಗ್ಗೆ ಮಾತನಾಡಿದ ರಾಹುಲ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ನಮೂದಾಗಬೇಕು ಎಂದು ಮಹಾದಾಸೆಯನ್ನು ಹೊಂದಿದ್ದೇನೆ. ಸಾಧನೆಗಾಗಿ ಕಠಿಣ ಪರಿಶ್ರಮ ಮಾಡುತ್ತಿದ್ದೇನೆ. ಕರಾಟೆ ಎಂಬುದು ಕೇವಲ ಆತ್ಮ ರಕ್ಷಣೆಯ ಕ್ರೀಡೆಯಲ್ಲ. ಕ್ರೀಡೆಯಲ್ಲೇ ವಿವಿಧ ಸಾಧನೆಯನ್ನು ಮಾಡುವ ವಿಫಲ ಅವಕಾಶಗಳಿವೆ. ಕ್ರೀಡೆಯಲ್ಲಿ ಕಠಿಣವಾದ ಅಭ್ಯಾಸ, ಮನೋಧೈರ್ಯವನ್ನು ಸಮಾನಾಂತರವಾಗಿ ಅಳವಡಿಸಿಕೊಂಡು ಮುನ್ನಡೆ ಸಾಧಿಸಿದರೆ ಗುರಿ ಮುಟ್ಟುವುದು ಶಥ ಸಿದ್ಧ ಎಂದು ಹೇಳಿದ್ದಾರೆ.