ಬೆಂಗಳೂರು: ಪಿತೃಪಕ್ಷದ ಹಿನ್ನೆಲೆ ನಗರದ ಕೆ.ಆರ್ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಗಗನಕ್ಕೇರಿದೆ. ಹೀಗಿದ್ದರೂ ಜನ ಹೂ ಖರೀದಿಗಾಗಿ ಮುಗಿ ಬೀಳುತ್ತಿದ್ದಾರೆ.
Advertisement
ಪಿತೃಪಕ್ಷ ಹಬ್ಬದ ಹಿನ್ನಲೆ ನಗರದ ಕೆ.ಆರ್ ಮಾರುಕಟ್ಟೆಯಲ್ಲಿ ಹೂವು, ಹಣ್ಣು ಖರೀದಿಲು ಜನ ಮುಗಿಬೀಳುತ್ತಿದ್ದು, ವೀಕೆಂಡ್‍ನಲ್ಲಿ ವ್ಯಾಪಾರಿಗಳಿಗೆ ಭರ್ಜರಿಯಾಗಿ ವ್ಯಾಪಾರ ನಡೆಯುತ್ತಿದೆ. ಕಳೆದ ಎರಡು – ಮೂರು ದಿನಗಳಿಂದ ಹೂವಿನ ದರದಲ್ಲಿ ಏರಿಕೆಯಾಗಿದ್ದು, ದಸರಾ ಮುಗಿಯುವವರೆಗೂ ಬೆಲೆ ಹೆಚ್ಚಾಗಿಯೇ ಇರುತ್ತದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಇದನ್ನೂ ಓದಿ: ಬಿಲ್ಡಪ್‍ಗಾಗಿ ಪೊಲೀಸರಿಗೆ ಅವಾಜ್ ಹಾಕಿದ್ದ ಮೆಂಟಲ್ ಮಂಜ ಅರೆಸ್ಟ್
Advertisement
Advertisement
ಪಿತೃ ಪಕ್ಷ, ಮಹಾಲಯ ಅಮಾವಾಸ್ಯೆ, ನವರಾತ್ರಿ ಹಾಗೂ ಕಾರ್ತಿಕ ಸೋಮವಾರ ದೀಪಾವಳಿ ಹೀಗೆ ಸಾಲು, ಸಾಲು ಹಬ್ಬಗಳು ಈ ತಿಂಗಳಿನಲ್ಲಿದ್ದು, ಜನರು ಹಬ್ಬದ ಸಂಭ್ರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಹೂವು, ಹಣ್ಣ ಖರೀದಿಸುತ್ತಾ ಕೊರೊನಾ ನಿಯಮ ಉಲಂಘಿಸುತ್ತಿದ್ದಾರೆ. ಈ ಮಧ್ಯೆ ಮಾರ್ಷಲ್ಸ್‌ಗಳು ಜನರಿಗೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಬುದ್ಧಿ ಹೇಳಿ ದಂಡ ವಿಧಿಸುತ್ತಿದ್ದರೆ, ಜನ ಅದಕ್ಕೆ ಕ್ಯಾರೆ ಮಾಡದೇ ಮಾರ್ಷಲ್‍ಗಳ ಜೊತೆಯಲ್ಲಿಯೇ ವಾಗ್ವಾದಕ್ಕಿಳಿದಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಕೇಸ್- ಪ್ರಯಾಣಿಕರ ಸೋಗಿನಲ್ಲಿ ಟಿಕೆಟ್ ಬುಕ್, ಎನ್‍ಸಿಬಿ ರೋಚಕ ಕಾರ್ಯಾಚರಣೆ
Advertisement
ಹೂವಿನ ದರ:
ಮಲ್ಲಿಗೆ – 600 – 800 ರೂಪಾಯಿ
ಕನಕಾಂಬರ- 400-600 ರೂಪಾಯಿ
ಕಾಕಡ ಹೂ- 100-300 ರೂಪಾಯಿ
ಸುಗಂಧರಾಜ – 40- 80 ರೂಪಾಯಿ
ಮಲ್ಲಿಗೆ – 400-600 ರೂಪಾಯಿ
ಸೇವಂತಿಗೆ-30-60 ರೂಪಾಯಿ
ಗುಲಾಬಿ – 30 – 100 ರೂಪಾಯಿ