ಕೊರಿಯನ್ ಪಾಪ್ ಸಂಸ್ಕೃತಿ ಬಿಂಬಿಸುವ “ಕೆ-ಪಾಪ್” (K-POP Kannada Movie) ಮೂಲಕ ಹೊಸ ತಂಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿ ಮಾಡಲು ಮುಂದಾಗಿದೆ. ಕೆ ಪಾಪ್ ಸಂಸ್ಕೃತಿ ಕರ್ನಾಟಕ, ಭಾರತ ಸೇರಿದಂತೆ ಜಗತ್ತಿನ ವಿವಿದ ದೇಶಗಳಲ್ಲಿ ಕೊರಿಯನ್ ಪಾಪ್ ಸಂಸ್ಕೃತಿ ಹೇಗೆಲ್ಲಾ ಪ್ರಭಾವ ಬೀರಿದೆ ಎನ್ನುವುದನ್ನ ತಿಳಿಸುವ ಪ್ರಯತ್ನ ಇದಾಗಿದೆ. ಇಂತಹದೊಂದು ವಿಷಯವನ್ನು ಮುಂದಿಟ್ಡುಕೊಂಡು ನಿರ್ದೇಶಕ ಕೆವಿನ್ ಲೂಕ್ (Kevin Luke) ಮತ್ತವರ ತಂಡ ಹೊಸ ಫ್ಯಾಂಟಸಿ ಕಥೆಯನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲು ಮುಂದಾಗಿದೆ.
ಸಿನಿಮಾದ ಶೀರ್ಷಿಕೆ ಅನಾವರಣ ಮಾಡುವ ಪ್ರೋಮೋ ಬಿಡುಗಡೆ ಮಾಡಿದೆ. ಬಳಿಕ ಚಿತ್ರತಂಡ ಮಾಹಿತಿ ಹಂಚಿಕೊಂಡಿತು.ನಿರ್ದೇಶಕ ಕೆವಿನ್ ಲೂಕ್, ಜೀವನದ ಆಸೆ ಆಕಾಂಕ್ಷೆಯನ್ನು ಈಡೇರಿಸಿಕೊಳ್ಳುವ ಸಮಯದಲ್ಲಿ ಗುರುತು ಪರಿಚಯವಿಲ್ಲದ ವ್ಯಕ್ತಿ ಮುಂದೆ ಬಂದಾಗ ಆದದ್ದೇ ಕೆ ಪಾಪ್. ಲಾವಣ್ಯ ಬರವಣಿಗೆಯಲ್ಲಿ ಜೊತೆಯಾಗಿದ್ದಾರೆ. ಶ್ರಮ ಪಟ್ಟು ಒಳ್ಳೆಯ ಸಿನಿಮಾ ನೀಡುವ ಉದ್ದೇಶ ನಮ್ಮದು ಎಂದರು.
ಕೊರಿಯನ್ ಪಾಪ್ ಸಂಸ್ಕತಿ ಬಿಂಬಿಸುವ ಚಿತ್ರ ಅವರ ಪ್ರಭಾವವನ್ನು ಭಾರತ ಮತ್ತು ಜಗತ್ತಿನಲ್ಲಿ ಯಾವ ರೀತಿ ಇದೆ ಎನ್ನುವುದನ್ನು ತೋರಿಸಲಾಗುತ್ತಿದೆ. ಇದರೊಂದಿಗೆ ಹಲವು ವಿಷಯಗಳ ಜೊತೆಗೆ ಶನಿಮಹಾತ್ಮ ,ಯಮ ಮಹಾರಾಜ ಬರಲಿದ್ದಾರೆ. ಅವರು ಯಾಕೆ ಬರ್ತಾರೆ. ಜೊತೆಗೆ ಚಿತ್ರದಲ್ಲಿ ಗರುಡರಾಮ್, ವಿಷ್ಣು ಸೇರಿದಂತೆ ಹಲವು ಪಾತ್ರದಾರಿಗಳಿದ್ದಾರೆ ಎಂದರು ಹೇಳಿದ್ದಾರೆ. ಕನಸಿನಲ್ಲಿ ನಡೆಯುವ ಕಥೆ. 60 ದಿನದ ಗಡುವು ಯಾಕೆ ಎನ್ನುವುದು ಕುತೂಹಲದ ಕಥನ. ಪ್ರೋಮೋಗೆ 6 ತಿಂಗಳು ಕೆಲಸ ಮಾಡಿದ್ದೇವೆ.6 ರಿಂದ 7 ವಿಎಫ್ ಎಕ್ಸ್ ಟೀಮ್ ಕೆಲಸ ಮಾಡಿವೆ. 60 ರಿಂದ 65 ದಿನಗಳ ಕಾಲ ಚಿತ್ರೀಕರಣ ಮಾಡಲಾಗುವುದು 5 ರಿಂದ 6 ಹಾಡು ಚಿತ್ರದಲ್ಲಿವೆ ಎಂದು ಮಾಹಿತಿ ಹಂಚಿಕೊಂಡರು.
ನಿರ್ಮಾಪಕ ಅಲಗಾನಿ ಕಿರಣ್ ಕುಮಾರ್ ಮಾತನಾಡಿ ನಿರ್ದೇಶಕ ಕೆವಿನ್ , ಕೆ.ಪಾಪ್ ಬಗ್ಗೆ ನಿರೂಪಣೆ ಮಾಡಿದ ವಿಧಾನ ಇಷ್ಡವಾಯಿತು. ಮೊದಲಿನಿಂದಲೂ ನಾಯಕನಾಗಬೇಕು ಎನ್ನುವ ಅಸೆ ಇತ್ತು. ಆದು ಆಗಲಿಲ್ಲ. ಈಗ ಸಹೋದರ ನಾಯಕನಾಗಿದ್ದು ಆತನ ಆಸೆ ಬೆಂಬಲವಾಗಿದ್ದೇನೆ. ಮೂರು ನಾಲ್ಕು ತಿಂಗಳಲ್ಲಿ ಚಿತ್ರೀಕರಣ ಆರಂಭಿಲಾಗುವುದು. ಕನ್ನಡದ ಜೊತೆಗೆ ತೆಲುಗಿನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ ಎಂದು ಹೇಳಿದರು. ಸಹ ಕಥೆಗಾರ್ತಿ ಹಾಗು ಸಹ ನಿರ್ದೇಶಕಿ ಲಾವಣ್ಯ ಮಾತನಾಡಿ ಬಿಟಿಎಸ್ ಆರ್ಮಿ ಸದಸ್ಯೆ ಕೋವಿಡ್ ಸಮಯದಲ್ಲಿ ಹಲವು ವಿಡಿಯೋ ನೋಡಿ ಇಂಪ್ರೆಸ್ ಆಗಿದ್ದೆ. ಅದನ್ನು ಚಿತ್ರದ ಮೂಲಕ ಹೇಳಲಾಗಿದೆ ಎಂದರು. ನಾಯಕ ಸಂಜಯ್ ಮಾತನಾಡಿ ಸಹೋದರ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಸಿನಿಮಾಗೆ ಬೇಕಾದ ಎಲ್ಲಾ ಕಲೆ ಕರಗತ ಮಾಡಿಕೊಂಡಿದ್ದೇನೆ. ಚಿತ್ರದಲ್ಲಿ ಕಾಲೇಜು ಹುಡುಗ, ಮೊದಲ ಸಿನಿಮಾ ಚಿತ್ರದಲ್ಲಿ ನಟಿಸಲು ಉತ್ಸುಕನಾಗಿದ್ದೇನೆ ಎಂದು ಹೇಳಿದರು. ಸಂಕಲಕಾರ ಶಶಿಧರ್ ಕ್ಯಾಮರಾ ಮನ್ ರಾಜ್ ಕಾಂತ್ ತಮ್ಮ ಅನುಭವ ಹಂಚಿಕೊಂಡರು.



