– ಪರಮೇಶ್ವರ್ ಜೊತೆ 1 ಗಂಟೆಗೂ ಹೆಚ್ಚು ಕಾಲ ರಾಜಣ್ಣ ಮಾತುಕತೆ
ಬೆಂಗಳೂರು: ಸಚಿವ ಸಂಪುಟದಿಂದ ವಜಾ ಆಗಿರುವ ಬಗ್ಗೆ ಕೆ.ಎನ್.ರಾಜಣ್ಣ (K.N.Rajanna) ಬೇಸರಗೊಂಡಿದ್ದಾರೆ. ಸಚಿವ ಪರಮೇಶ್ವರ್ ಜೊತೆ ರಾಜಣ್ಣ ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ.
ಪರಮೇಶ್ವರ್ ಜೊತೆ ಒಂದು ಗಂಟೆಗೂ ಹೆಚ್ಚು ಕಾಲ ರಾಜಣ್ಣ ಮಾತುಕತೆ ನಡೆಸಿದ್ದಾರೆ. ನೀವು ಈ ರೀತಿ ಮಾತನಾಡಬಾರದಿತ್ತು ಎಂದು ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ನನ್ನ ವಜಾದ ಹಿಂದೆ ಪಿತೂರಿ, ಷಡ್ಯಂತ್ರವಿದೆ – ಯಾರು ಹಿಂದಿದ್ದಾರೆ ಗೊತ್ತಿದೆ: ರಾಜಣ್ಣ ಬಾಂಬ್
ಅದಕ್ಕೆ ಪ್ರತಿಕ್ರಿಯಿಸಿದ ರಾಜಣ್ಣ, ನನ್ನ ಮಾತು ಇಷ್ಟೊಂದು ತೀವ್ರ ಸ್ವರೂಪಕ್ಕೆ ಹೋಗುತ್ತೆ ಅಂತ ಗೊತ್ತಿರಲಿಲ್ಲ. ನನ್ನ ಮಾತಿನಿಂದ ಹೀಗಾಗುತ್ತೆ ಎಂದೂ ತಿಳಿಯಲಿಲ್ಲ ಎಂದು ಮಾತನಾಡಿದ್ದಾರೆ ಎನ್ನಲಾಗಿದೆ.
ತಮ್ಮ ಸಡಿಲ ಹೇಳಿಕೆಗಳಿಂದಲೇ ಪಕ್ಷದೊಳಗಡೆ ರಾಜಣ್ಣ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ಕ್ಷಿಪ್ರ ರಾಜಕೀಯ ಬೆಳವಣಿಗೆಯೊಂದರಲ್ಲಿ ಹೈಕಮಾಂಡ್ ಸೂಚನೆ ಮೇರೆಗೆ ರಾಜಣ್ಣರನ್ನು ಸಿಎಂ ಸಿದ್ದರಾಮಯ್ಯ ಅವರು ಸಂಪುಟದಿಂದ ವಜಾ ಮಾಡಿದ್ದಾರೆ. ಇದನ್ನೂ ಓದಿ: ಸಂಪುಟದಿಂದ ರಾಜಣ್ಣ ಕಿಕ್‌ಔಟ್ – ಆಪ್ತನ ತಲೆದಂಡದಿಂದ ಮೌನಕ್ಕೆ ಶರಣಾದ ಸಿಎಂ
ವಜಾಗೊಳಿಸುವ ಮುನ್ನ ಹೈಕಮಾಂಡ್ ಮನವೊಲಿಕೆಗೆ ಸಿದ್ದರಾಮಯ್ಯ ಮುಂದಾಗಿದ್ದರು. ಮೊದಲು ವೇಣುಗೋಪಾಲ್ ಮೂಲಕ ಸಿಎಂಗೆ ಕಾಲ್ ಬಂದಿತ್ತು. ರಾಜಣ್ಣ ರಾಜೀನಾಮೆ ಪಡೆಯಿರಿ ಎಂದು ಸಂದೇಶ ರವಾನೆಯಾಯಿತು. ಆದರೆ, ಆಗ ಒಪ್ಪದೇ ಸಿಎಂ ಸಮಯ ಕೇಳಿದ್ದರು. ಅಧಿವೇಶನ ಮುಗಿದ ಬಳಿಕ ನೋಡೋಣ ಎಂದಿದ್ದರು. ಹೈಕಮಾಂಡ್ ಬಳಿ ಸಿಎಂ 10 ದಿನ ಟೈಂ ಕೇಳಿದ್ದರು. ಆಗ ರಾಹುಲ್ ಬಳಿ ಮಾತನಾಡುವಂತೆ ವೇಣುಗೋಪಾಲ್ ಸಲಹೆ ನೀಡಿದ್ದರು ಎನ್ನಲಾಗಿದೆ.
ಆದರೆ, ರಾಜಣ್ಣರನ್ನು ಸಂಪುಟದಿಂದ ವಜಾ ಮಾಡುವಂತೆ ರಾಹುಲ್ ಗಾಂಧಿ ಅವರು ಸಿಎಂಗೆ ಸೂಚನೆ ನೀಡಿದ್ದಾರೆ. ಅದಾದ ಬಳಿಕ ಆಪ್ತ ರಾಜಣ್ಣ ವಜಾಗೆ ರಾಜ್ಯಪಾಲರಿಗೆ ಸಿಎಂ ಶಿಫಾರಸು ಮಾಡಿದರು.