ಬೆಂಗಳೂರು: ಕಳೆದ ವಿಧಾನಸಭಾ ಅಧಿವೇಷನದ ವೇಳೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಸಚಿವ ಕೆ.ಎನ್.ರಾಜಣ್ಣ (K.N.Rajanna) ಹನಿಟ್ರ್ಯಾಪ್ ಯತ್ನ ಪ್ರಕರಣದಲ್ಲಿ ಯಾವುದೇ ಸಾಕ್ಷಿಗಳು ಇಲ್ಲ, ಕೇಸಲ್ಲಿ ಹುರುಳಿಲ್ಲ ಎಂದು ಸಿಐಡಿ ಷರಾ ಬರೆದಿದೆ.
ಸಾಕ್ಷ್ಯಾಧಾರಗಳ ಕೊರತೆಯಿಂದ ಕೇಸಲ್ಲಿ ಹುರುಳಿಲ್ಲ ಅಂತಾ ಡಿಜಿ & ಐಜಿಪಿಗೆ ರಿಪೋರ್ಟ್ ನೀಡಲಾಗಿದೆ. ಕಳೆದ ವಿಧಾನಸಭಾ ಅಧಿವೇಶನದಲ್ಲಿ ಹನಿಟ್ರ್ಯಾಪ್ ಯತ್ನವಾಗಿತ್ತು ಎಂದು ಸಚಿವ ರಾಜಣ್ಣ ಸದನದಲ್ಲೇ ಹೇಳಿದ್ದರು. ಸೂಕ್ತ ತನಿಖೆ ನಡೆಸುವಂತೆ ಗೃಹ ಸಚಿವರಿಗೆ ರಾಜಣ್ಣ ದೂರು ನೀಡಿದ್ದರು. ಗೃಹ ಸಚಿವರಿಗೆ ನೀಡಿದ ದೂರನ್ನ ಆಧರಿಸಿ ಸಿಐಡಿಗೆ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿತ್ತು. ಸಚಿವ ರಾಜಣ್ಣ ಹೇಳಿಕೆ ದಾಖಲಿಸಿ ಸಿಐಡಿ ಸ್ಥಳ ಮಹಜರು ನಡೆಸಿತ್ತು. ಇದನ್ನೂ ಓದಿ: ಹನಿಟ್ರ್ಯಾಪ್ ಮಾಡಲು ಬಂದವರಿಗೆ ಕಪಾಳಕ್ಕೆ ಹೊಡೆದಿದ್ದು ನಿಜ – ವಿಷ ಕನ್ಯೆಯರ ರಹಸ್ಯ ಹೇಳಿದ ರಾಜಣ್ಣ
ತನಿಖೆಯಲ್ಲಿ ಹನಿಟ್ರ್ಯಾಪ್‌ಗೆ ಯಾವುದೇ ಸಾಕ್ಷಿಗಳು ಸಿಕ್ಕಿಲ್ಲ ಎಂದು ರಿಪೋರ್ಟ್ ಸಲ್ಲಿಕೆ ಮಾಡಿದೆ. ಹನಿಟ್ರ್ಯಾಪ್ ಬಗ್ಗೆ ತನಿಖೆ ನಡೆಸಿದ್ದ ಡಿವೈಎಸ್‌ಪಿ ಕೇಶವ ಮೂರ್ತಿ ಮತ್ತು ತಂಡ ವರದಿ ನೀಡಿದೆ.