– ಸೋದರ ಸಂಬಂಧಿಗಳಿಂದ ಕುಟಂಬ ನಾಶಕ್ಕೆ ಯತ್ನ ಅಂತ ಕವಿತಾ ಆರೋಪ
ಹೈದರಾಬಾದ್: ಪಕ್ಷ ವಿರೋಧಿ ಚಟುವಟಿಕೆ ಆರೋಪದ ಅಮಾನತುಗೊಂಡ ಮಾಜಿ ಸಿಎಂ ಕೆಸಿಆರ್ ಪುತ್ರಿ ಕೆ. ಕವಿತಾ (K Kavitha) ಮರುದಿನವೇ ಬಿಆರ್‌ಎಸ್ ಪಕ್ಷ (BRS Party) ತೊರೆದಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ವಿಧಾನ ಪರಿಷತ್‌ನ ಸದಸ್ಯತ್ವಕ್ಕೆ ಇಂದು ರಾಜೀನಾಮೆ ಸಲ್ಲಿಸಿದ್ದಾರೆ.
Hyderabad, Telangana | On being suspended from the Bharat Rashtra Samithi party, K Kavitha says, “I am requesting my father to examine the party leaders surrounding him. I spoke straightforwardly and requested him to consider my words. Revanth Reddy and Harish Rao allegedly… pic.twitter.com/TgyBixnble
— ANI (@ANI) September 3, 2025
ಕೆಸಿಆರ್ ವಿರುದ್ಧದ ಫೆಡರಲ್ ತನಿಖೆಗೆ ತಮ್ಮ ಸೋದರಸಂಬಂಧಿ, ಹಿರಿಯ ಬಿಆರ್‌ಎಸ್ ನಾಯಕ ಟಿ.ಹರೀಶ್ ರಾವ್ ಅವರನ್ನು ಕವಿತಾ ಸಾರ್ವಜನಿಕವಾಗಿ ದೂಷಿಸಿದ್ದರು. ತೆಲಂಗಾಣದ ಕಾಂಗ್ರೆಸ್ ನೇತೃತ್ವದ ಸರ್ಕಾರವು ಕಾಲೇಶ್ವರಂ ಯೋಜನೆಗೆ ಸಂಬಂಧಿಸಿದ ಅಕ್ರಮಗಳ ತನಿಖೆಯನ್ನು ಸಿಬಿಐಗೆ (CBI) ವಹಿಸಿದ ಬೆನ್ನಲ್ಲೇ ಈ ಆರೋಪ ಮಾಡಿದ್ದರು. ಹೀಗಾಗಿ ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಅವರನ್ನ ಮಂಗಳವಾರ (ಸೆ.2) ಅಮಾನತುಗೊಳಿಸಲಾಗಿತ್ತು. ಇದನ್ನೂ ಓದಿ: 2024ಕ್ಕೂ ಮುನ್ನ ದಾಖಲೆಗಳಿಲ್ಲದೇ ಪಾಕ್, ಅಫ್ಘಾನ್, ಬಾಂಗ್ಲಾದಿಂದ ಬಂದ ಅಲ್ಪಸಂಖ್ಯಾತರಿಗೆ ಭಾರತದಲ್ಲಿ ಉಳಿಯಲು ಅವಕಾಶ
ಬಹಳ ನೋವಾಗಿದೆ
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆ. ಕವಿತಾ ಅವರು, ಬಿಆರ್‌ಎಸ್ ಪಕ್ಷದಿಂದ ನನ್ನನ್ನ ಇದ್ದಕ್ಕಿದ್ದಂತೆ ಅಮಾನತುಗೊಳಿಸಿರುವುದು ಬಹಳ ನೋವಿನ ಸಂಗತಿ. ಹೀಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವದ ಜೊತೆಗೆ ಎಂಎಲ್‌ಸಿ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ರಾಜೀನಾಮೆ ಪತ್ರವನ್ನು ಸ್ಪೀಕರ್ ಕೆ. ಚಂದ್ರಶೇಖರ್ ರಾವ್ ಅವರಿಗೆ ಕಳುಸುತ್ತಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಅಮೆರಿಕ ಒತ್ತಡದ ನಡುವೆ ಭಾರತಕ್ಕೆ ರಷ್ಯಾ ಗಿಫ್ಟ್; ಇನ್ನಷ್ಟು S-400 ವಾಯು ರಕ್ಷಣಾ ವ್ಯವಸ್ಥೆ ಪೂರೈಕೆಗೆ ನಿರ್ಧಾರ
ಮುಂದುವರಿದು.. ನಾನು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ, ಹಿಂದುಳಿದ ವರ್ಗಗಳಿಗೆ ಮೀಸಲಾತಿಗಾಗಿ ಕೆಲಸ ಮಾಡಿದೆ ಜೊತೆಗೆ ಬಿಆರ್‌ಎಸ್ ಧ್ವಜ ಧರಿಸಿ ಕಾಂಗ್ರೆಸ್ ವಿರುದ್ಧ ಹೋರಾಟದಲ್ಲೂ ಕೆಲಸ ಮಾಡಿದೆ. ಇದು ಹೇಗೆ ಪಕ್ಷ ವಿರೋಧಿ ಚಟುವಟಿಕೆ ಆಗುತ್ತೆ ಅಂತ ನನಗೆ ಅರ್ಥವಾಗುತ್ತಿಲ್ಲ. ನನಗೆ ಯಾವುದೇ ಯಾವುದೇ ಹುದ್ದೆ ಮೇಲೆ ದುರಾಸೆ ಇಲ್ಲ, ಬೇರೆ ಯಾವುದೇ ಪಕ್ಷದ ಜೊತೆಗೂ ಹೋಗುತ್ತಿಲ್ಲ. ತೆಲಂಗಾಣ ಜಾಗೃತಿ ಸದಸ್ಯರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
#WATCH | Hyderabad, Telangana | On being suspended from the Bharat Rashtra Samithi party, K Kavitha says, “…I have never worked against the interests of the people of Telangana, but some leaders of the BRS who have vested interests and only think of their benefits have taken… pic.twitter.com/uCZrolBgRq
— ANI (@ANI) September 3, 2025
ಇದೇ ವೇಳೆ ಸೋದರಸಂಬಂಧಿಯೂ ಆಗಿರುವ ಬಿಆರ್‌ಎಸ್‌ನ ಹಿರಿಯ ನಾಯಕ ಟಿ ಹರೀಶ್ ರಾವ್ ಅವರ ಮೇಲೆ ಇನ್ನಷ್ಟು ಆರೋಪ ಮಾಡಿದರು. ಕಾಂಗ್ರೆಸ್ ಸಿಎಂ ರೇವಂತ್ ರೆಡ್ಡಿ (Revanth Reddy) ಹಾಗೂ ಹರೀಶ್ ರಾವ್‌ರಿಂದ ಕೆಎಸ್‌ಆರ್ ಕುಟುಂಬ ನಾಶಪಡಿಸಲು ಯತ್ನಿಸಿದ್ದಾರೆ. ಅದಕ್ಕಾಗಿ ನನ್ನ ತಂದೆ ಕೆಸಿಆರ್ ಮತ್ತು ಅವರ ಸಹೋದರ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಅವರನ್ನ ಗುರಿಯಾಗಿಸಲು ಸಂಚು ರೂಪಿಸಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ಅತ್ಯಾಚಾರ ಆರೋಪದಲ್ಲಿ ಬಂಧನ; ಪೊಲೀಸರ ಮೇಲೆ ಗುಂಡು ಹಾರಿಸಿ ಆಪ್ ಶಾಸಕ ಪರಾರಿ
ರೇವಂತ್ ರೆಡ್ಡಿ ಅವರು ನನ್ನ ಕುಟುಂಬದ ಕೆಟಿಆರ್ ಮತ್ತು ಕೆಸಿಆರ್ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿದ್ರು. ಆದರೆ ಹರೀಶ್ ರಾವ್ ವಿರುದ್ಧ ದಾಖಲಿಸಲಿಲ್ಲ. ಕಾಲೇಶ್ವರಂ (ನೀರಾವರಿ) ಯೋಜನೆ ಶುರುವಾದಾಗ ಹರೀಶ್ ರಾವ್ ನೀರಾವರಿ ಸಚಿವರಾಗಿದ್ದರು. ಆದ್ರೂ ರೇವಂತ್ ರೆಡ್ಡಿ ಅವರ ವಿರುದ್ಧ ಮಾತನಾಡಲಿಲ್ಲ, ಇದು ಸಂಚು ಅನ್ನೋದು ಸ್ಪಷ್ಟವಾಗಿ ತಿಳಿಯುತ್ತದೆ. ಹರೀಶ್ ರಾವ್ ಮತ್ತು ಸಂತೋಷ್ ರಾವ್ ನಮ್ಮ ಕುಟುಂಬ ಮತ್ತು ಪಕ್ಷವನ್ನ ನಾಶಮಾಡಲು ಸಂಚು ರೂಪಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.