ನವದೆಹಲಿ: ದೆಹಲಿ ಮದ್ಯ ನೀತಿ ಹಗರಣದಲ್ಲಿ (Delhi liquor Policy Scam) ಬಂಧನಕ್ಕೊಳಗಾಗಿರುವ ಬಿಆರ್‌ಎಸ್ ಶಾಸಕಿ ಕೆ.ಕವಿತಾ, ಪ್ರಕರಣದ ಸಾಕ್ಷ್ಯಾಧಾರಗಳಿದ್ದ 9 ಫೋನ್‌ಗಳನ್ನ ನಾಶ ಮಾಡಿದ್ದರು. ಜೊತೆಗೆ 10 ಲಕ್ಷ ರೂ. ಮೌಲ್ಯದ ಸ್ಟಾರ್ ಹೋಟೆಲ್‌ನಲ್ಲಿ ರೂಮ್ ಬುಕ್‌ಮಾಡಿದ್ದರು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚಾರ್ಜ್‌ಶೀಟ್‌ನಲ್ಲಿ (Delhi liquor Policy Scam) ಉಲ್ಲೇಖಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಅಲ್ಲದೇ ಕವಿತಾ ಅವರು ಈ ಹಿಂದೆಯೇ ದೆಹಲಿಯಲ್ಲಿ ಆಡಳಿತಾರೂಢ ಆಪ್ ಪಕ್ಷಕ್ಕೆ ಮದ್ಯದ ಪರವಾನಿಗೆಗೆ ಬದಲಾಗಿ 100 ಕೋಟಿ ರೂ. ಪಾವತಿಸಲು ಸೌತ್ ಗ್ರೂಪ್ ಜೊತೆಗೂಡಿ ಪಿತೂರಿ ನಡೆಸಿದ್ದಾರೆ. ಜೊತೆಗೆ ಇಂಡೋ ಸ್ಪೀರಿಟ್‌ನ ಸ್ಟಾಕ್‌ನಲ್ಲಿ ಪಾಲನ್ನು ಧೀನಪಡಿಸಿಕೊಳ್ಳಲು ಸಂಚು ಹೂಡಿದ್ದರು. ಒಟ್ಟಾರೆ ಅಬಕಾರಿ ನೀತಿ ರದ್ದಾಗುವುದಕ್ಕೆ ಮುನ್ನ 192. 8 ಕೋಟಿ ರೂ.ಗಳಷ್ಟು ಲಾಭ ಗಳಿಸಿದ್ದಾರೆ ಎಂದು ಇಡಿ ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿದೆ.
Advertisement
ವಿವಿಧ ರೂಪದಲ್ಲಿ ಪಡೆದ 100 ಕೋಟಿ ರೂ. ಕಿಕ್‌ಬ್ಯಾಕ್ ಹಣವನ್ನ ಅಕ್ರಮ ಮಾರ್ಗಗಳ ಮೂಲಕ ಗೋವಾಕ್ಕೆ ಆಪ್ ಚುನಾವಣೆಗೆ ವರ್ಗಾವಣೆ ಮಾಡಲಾಗಿದೆ. ಕವಿತಾ ಮತ್ತು ಸಮೀರ್ ಮಹೇಂದ್ರು ಸೇರಿದಂತೆ ಇತರ ಸೌತ್ ಗ್ರೂಪ್ ಸದಸ್ಯರು ತಮ್ಮ ಈ ಅವ್ಯವಹಾರದ ಅಪರಾಧ ಮುಚ್ಚಿ ಹಾಕಲು ಎಲ್ಎನ್‌ಡೋ ಸ್ಪಿರಿಟ್ಸ್ ರಚನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ ಎಂಬ ಅಚ್ಚರಿ ಸಂಗತಿಗಳನ್ನೂ ಇಡಿ ತೆರೆದಿಟ್ಟಿದೆ.
Advertisement
Advertisement
ಜು.3ರ ವರೆಗೆ ನ್ಯಾಯಾಂಗ ಬಂಧನ:
ದೆಹಲಿ ಮದ್ಯದ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರ ನ್ಯಾಯಾಂಗ ಬಂಧನವನ್ನು ದೆಹಲಿ ನ್ಯಾಯಾಲಯ ಜುಲೈ 3ರವರೆಗೆ ವಿಸ್ತರಿಸಿದೆ.
Advertisement
ಇದೇ ಪ್ರಕರಣದ ಇತರ ಮೂವರು ಆರೋಪಿಗಳಾದ ರಾಜಕುಮಾರ್, ಅರವಿಂದ್ ಮತ್ತು ದಾಮೋದರ್ ಅವರಿಗೆ ರೋಸ್ ಅವೆನ್ಯೂ ಕೋರ್ಟ್ 1 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ಮಂಜೂರು ಮಾಡಿದೆ. ಸೋಮವಾರ (ಜೂ.3) ಕವಿತಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ನ್ಯಾಯಾಂಗ ಬಂಧನ ವಿಸ್ತರಿಸಿದರು.
ಸಿಬಿಐ ದಾಖಲಿಸಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನು ಕೋರಿ ಮೇ 15ರಂದು ಕವಿತಾ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕವಿತಾ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿದ ಸಿಬಿಐ ಮತ್ತು ಇಡಿ, ಕವಿತಾ ಅವರು ಹೆಚ್ಚು ಪ್ರಭಾವಿ ಮತ್ತು ಶಕ್ತಿಯುತರಾಗಿದ್ದು, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದು ಹೇಳಿತ್ತು.
ದೆಹಲಿ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿ ಒಟ್ಟು 18 ಮಂದಿಯನ್ನು ಇಡಿ ಬಂಧಿಸಿದೆ.